ಶಿರಸಿ : ಮಾರಿಕಾಂಬಾ ದೇವಿ ಜಾತ್ರಾ ಯಶಸ್ಸು ತಾಯಿಯ ಆಶೀರ್ವಾದಿಂದ ಯಶಸ್ಸು ಆಗಿದೆ. ದೇವಿಯ ಸೇವೆ ಎಂದೇ ಕೆಲಸ ಮಾಡಿದ್ದರಿಂದ ರಾಜ್ಯದಲ್ಲೇ ಮಾದರಿಯ ಜಾತ್ರೆಯಾಗಲು ಕಾರಣವಾಯಿತು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಣ್ಣಿಸಿದರು.
ಅವರು ನಗರಸಭೆ, ಮಾರಿಕಾಂಬಾ ದೇವಸ್ಥಾನ ಸಂಯುಕ್ತ ಆಶ್ರಯದಲ್ಲಿ ಅಕ್ಷಯ ಗಾರ್ಡನ್ ನಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಬಾರಿಯ ಶಿರಸಿ ಜಾತ್ರೆ ಅತ್ಯುತ್ತಮವಾಗಿದೆ. ನಾವು ಒಗ್ಗಟ್ಟಾಗಿ ಕೆಲಸ ಮಾಡಿದ ಪರಿಣಾಮ ಜಾತ್ರೆ ಯಶಸ್ವಿಯಾಗಿದೆ. ಈ ಬಾರಿಯ ಜಾತ್ರೆ ನಡೆಸುವುದೇ ಪ್ರಶ್ನಾರ್ಥಕವಾಗಿತ್ತು. ಸುತ್ತಮುತ್ತಲಿನ ಎಲ್ಲ ಜಾತ್ರೆಯೂ ಬಂದ್ ಆಗಿತ್ತು. ಜಾತ್ರೆಯ ಆರಂಭದ ಸಭೆ ನಡೆಸುವಾಗ ಕರೋನಾ ಸಂಖ್ಯೆಯೂ ಹೆಚ್ಚಳವಾಗುವ ಸಮಯವಾಗಿತ್ತು. ಆದರೂ ನಾವು ಜಾತ್ರಾ ತಯಾರಿಗಳನ್ನು ಮುಂದುವರೆಸಿದರು. ಕರೋನಾ ಕಡಿಮೆ ಆಯಿತು ಎಂದರು.
ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವದಲ್ಲಿ ಪೌರ ಕಾರ್ಮಿಕರು ತಾಯಿಯ ಸೇವೆ ಎಂದು ಕೆಲಸ ಮಾಡಿದ್ದಾರೆ.
ನಗರಸಭೆ ಪೌರಾಯುಕ್ತ ಕೇಶವ ಚೌಗುಲೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ನಗರಸಭಾಧ್ಯಕ್ಷ ಗಣಪತಿ ನಾಯ್ಕ, ಶಿರಸಿ ಸಹಾಯಕ ಆಯುಕ್ತ ದೇವರಾಜ ಆರ್, ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಡಿಎಸ್ಪಿ ರವಿ ಡಿ ನಾಯ್ಕ, ತಹಸೀಲ್ದಾರ್ ಎಂ ಆರ್ ಕುಲಕರ್ಣಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಸಾಲೇರ್, ಮಾರಿಕಾಂಬಾ ದೇವಾಲಯದ ಅಧ್ಯಕ್ಷ ಆರ್ ಜಿ ನಾಯ್ಕ , ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ, ಆರ್ಟಿಓ ಸಿ.ಡಿ.ನಾಯ್ಕ ಇದ್ದರು.