ಶಿರಸಿ: ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಅಭಿವೃದ್ದಿ ಆಗಿಲ್ಲ ಎಂದವರಿಗೆ ನೇತ್ರ ಚಿಕಿತ್ಸೆ ಮಾಡಿಸಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಟಾಂಗ್ ನೀಡಿದರು.
ಶುಕ್ರವಾರ ಅವರು ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿ, ನಾಮಪತ್ರ ಸಲ್ಲಿಕೆಗೆ ಮೊದಲು ಬಹಿರಂಗ ಸಭೆ ನಡೆಸಿ ಮಾತನಾಡಿದದರು.
ಅಭಿವೃದ್ದಿ ಎಂಬುದು ನಿರಂತರ. ಇಲ್ಲಿ ಅಭಿವೃದ್ದಿಯೇ ಆಗಿಲ್ಲ ಎಂಬವರ ಕಣ್ಣು ಸರಿ ಇದೆ ಎಂದರೆ ಮಾನಸಿಕ ತಜ್ಞರ ಭೇಟಿ ಮಾಡಿಸಬೇಕು ಎಂದರು.
ರಾಜ್ಯದಲ್ಲಿ ಸ್ಪಷ್ಟ ಬಹುಮತ ಬರಲಿದೆ. ಜಿಲ್ಲೆಯಲ್ಲಿ ಆರಕ್ಕೆ ಆರು ಕ್ಷೇತ್ರ ಗೆಲ್ಲುತ್ತೇವೆ. ರಾಜ್ಯದಲ್ಲೇ ದಾಖಲೆಯ ಮತದಿಂದ ನಮ್ಮ ಕ್ಷೇತ್ರದಲ್ಲಿಯೂ ಜಯ ಗಳಿಸುತ್ತೆವೆ. ಪ್ರಜಾಪ್ರಭುತ್ವದ ಹಬ್ಬ ಕಾಗೇರಿ. ಅದನ್ನು ಪ್ರೀತಿ ವಿಶ್ವಾಸದಲ್ಲಿ ಆಚರಿಸೋಣ ಎಂದ ಕಾಗೇರಿ, ದೇಶ ಮಾತ್ರವಲ್ಲ, ಜಗತ್ತು ಮೆಚ್ಚಿಕೊಂಡ ನಾಯಕ ನರೇಂದ್ರ ಮೋದಿ ಅವರು. ಅವರ ಒಳ್ಳೆಯ ಕೆಲಸಕ್ಕೆ ಕರ್ನಾಟಕ ಕೂಡ ನೈತಿಕ ಬಲ ಕೊಡಬೇಕಿದೆ. ದೇಶದ ಅಖಂಡತೆ, ಏಕತೆ ಸಾಧಿಸಿದ್ದಾರೆ ಮೋದಿ ಅವರು ಎಂದರು.
ಈ ವೇಳೆ ಪ್ರಮುಖರಾದ ಶಶಿಭೂಷಣ ಹೆಗಡೆ, ಜೀವ ಜಲಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಗಣಪತಿ ನಾಯ್ಕ, ಗುರುಪ್ರಸಾದ ಹರ್ತೆಬೈಲ ಇತರರು ಇದ್ದರು. ಬಳಿಕ ೮೦ ವಿಧಾನ ಸಭಾ ಕ್ಷೇತ್ರಕ್ಕೆ ನಾಮ ಪತ್ರ ಸಲ್ಲಿಸಿದರು.
ಮೆರವಣಿಗೆಯಲ್ಲಿ ಸಹಸ್ರಾಧಿಕ ಕಾರ್ಯಕರ್ತರು, ಪ್ರಮುಖರು ಸೇರಿದ್ದರು.
ಇದನ್ನೂ ಓದಿ: Bhatkal: ಬಿಜೆಪಿ ಅಭ್ಯರ್ಥಿ ಸುನಿಲ್ ನಾಯ್ಕ ನಾಮಪತ್ರ ಸಲ್ಲಿಕೆ