ಶಿರಸಿ: ಪ್ರಧಾನ ಮಂತ್ರಿಗಳ ಆವಾಸ್ ಯೋಜನೆಯಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 644 ಸ್ಲಂಬೋರ್ಡ ಮನೆ ಮಂಜೂರಿ ಆಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಮಂಗಳವಾರ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ನಿರ್ಮಾಣ ಮನೆ ನಿರ್ಮಾಣ ಮಾಡಲು ಶಿಲಾನ್ಯಾಸ ನೆರವೇರಿ ಮಾತನಾಡಿದರು.
ಅಭಿವೃದ್ದಿ ನಿರಂತರ. ಅಭಿವೃದ್ದಿಯನ್ನು ಹಂತ ಹಂತವಾಗಿ ಮಾಡಲಾಗುತ್ತಿದೆ. ಶಿರಸಿಗೆ 644 ಬಡವರಿಗೆ ಮಂಜೂರಿ ಆಗಿದೆ. ಗುಣಮಟ್ಟದ ಮನೆ ನಿರ್ಮಾಣ ಆಗಬೇಕು, ಪ್ರಧಾನಿ ಕನಸು ಸರ್ವರಿಗೂ ಸೂರು ಭಾಗ್ಯ ಆಗಲಿದೆ ಎಂದರು.
ಬೆಳಗಾವಿ ವಿಭಾಗದಲ್ಲಿ 23 ಸಾವಿರ ಮನೆ ನಿರ್ಮಾಣ ಆಗುತ್ತಿದೆ, ಉಳಿದಕಡೆ ಅಪಾರ್ಟಮೆಂಟ್ ಮಾದರಿಯಲ್ಲಿ ಮಾಡುತ್ತಿದ್ದಾರೆ, 360 ಚದುರಡಿ ಮನೆ ನಿರ್ಮಾಣ ಮಾಡಲಾಗುತ್ತದೆ. ಇಲ್ಲಿ ಸ್ವತಂತ್ರ ಮನೆ ಆಗುತ್ತದೆ. ಫಲಾನುಭವಿ ಮನೆ ಕಟ್ಟಿಕೊಳ್ಳುವದಿದ್ದರೆ ರೇತಿ ಸಿಮೆಂಟ್, ಕೂಲಿ ಕೊಡುತ್ತಾರೆ. ಇಲ್ಲವಾದರೆ ಅಭಿವೃದ್ದಿ ಮಂಡಳಿ ಕಟ್ಟಿಕೊಡುತ್ತದೆ. ಒಟ್ಟೂ ಒಂದು ಮನೆಗೆ 7.71 ಲ.ರೂ. ಖರ್ಚು ಮಾಡಲಾಗುತ್ತದೆ. ಅದರೊಳಗೆ ಅರ್ಹ ಕಾರ್ಮಿಕರಿದ್ದರೆ ಕಾರ್ಮಿಕ ಇಲಾಖೆ ಕೂಡ 2 ಲ.ರೂ. ಕೊಡುತ್ತದೆ ಎಂದರು.
ದುಶ್ಚಟ ಬಿಟ್ಟು ಒಳ್ಳೆಯ ಕೆಲಸ ಮಾಡಬಹುದು. ಕಟ್ಟುವಾಗ ಸ್ವಲ್ಪ ದೊಡ್ಡದಾಗಿ ಮನೆ ನಿರ್ಮಾಣ ಮಾಡಿಕೊಂಡು ಮನೆ ಒಳ್ಳೆಯದಾಗಿ ಕಟ್ಟಿಕೊಳ್ಳಿ. ಮನೆ ಎಂದರೆ ದೇವಸ್ಥಾನದಂತೆ. ಪವಿತ್ರ ನೆಲೆ ಮನೆ. ಎಲ್ಲರಿಗೂ ಒಳಿತಾಗಬೇಕು ಎಂದರು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಸ್ಥಾಯಿಸಮಿತಿ ಅಧ್ಯಕ್ಷ ಆನಂದ ಸಾಲೇರ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಪೌರಾಯುಕ್ತ ಕೇಶವ ಚೌಗಲೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ, ಸದಸ್ಯ ಪ್ರದೀಪ ಶೆಟ್ಟಿ, ಯಶವಂತ ಮರಾಠೆ ಇತರರು ಇದ್ದರು.
ಇದನ್ನೂ ಓದಿ : IPL ಕ್ರಿಕೆಟ್ ಬೆಟ್ಟಿಂಗ್, ಮೂವರ ಬಂಧನ ; ಸಾವಿರಾರು ಮೌಲ್ಯದ ಮೊಬೈಲ್ ವಶ