Advertisement

ಪೀಠ ಸ್ಥಾಪನೆಯ ಸ್ಪೀಕರ್ ಸೂಚನೆಗೂ ಸಿಗದಾಯಿತೇ ಬಜೆಟ್ ಆದ್ಯತೆ?

07:07 PM Mar 04, 2022 | Team Udayavani |

ಶಿರಸಿ : ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ನೀಡಿದ ಸೂಚನೆಗೂ ಬಜೆಟ್ ಪ್ರಸ್ತಾಪದಲ್ಲಿ ಸ್ಥಾನ ಸಿಗಲಿಲ್ಲ! ಇಂಥದೊಂದು ಅಸಮಧಾನ, ಆಕ್ಷೇಪ ಬಿಜೆಪಿ ಕಾರ್ಯಕರ್ತರಲ್ಲಿ, ಕ್ಷೇತ್ರದ ರಾಮಕೃಷ್ಣ ಹೆಗಡೆ ಅಭಿಮಾನಿಗಳಲ್ಲಿ ವ್ಯಕ್ತವಾಗಿದೆ.

Advertisement

ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿದ ಚೊಚ್ಚಲ ಬಜೆಟ್ ನಲ್ಲಿ ಬಹುಕಾಲದ ಬೇಡಿಕೆಯಾದ ಮಾಜಿ‌ಮುಖ್ಯಮಂತ್ರಿ, ರಾಷ್ಟ್ರ ‌ಮುತ್ಸದ್ದಿ ದಿ. ರಾಮಕೃಷ್ಣ ಹೆಗಡೆ ದೊಡ್ಮನೆ ಹೆಸರಿನ ಅಧ್ಯಯನ ಪೀಠಕ್ಕೆ ಸ್ಥಾನವೇ ಸಿಗಲಿಲ್ಲ!

ಸ್ವತಃ ಕರ್ನಾಟಕ ವಿಧಾ‌ನ ಸಭೆಯ‌ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮುಖ್ಯಮಂತ್ರಿಗಳಿಗೆ ಸೂಚಿಸಿ ಪತ್ರ ಬರೆದಿದ್ದರು. ಉತ್ತರ ಕನ್ನಡದ ಸಿದ್ದಾಪುರದಲ್ಲಿ ಅಧ್ಯಯನ ಪೀಠ ಸ್ಥಾಪನೆಗೆ ಸೂಚಿಸಿದ್ದರು. ಸಿಎಂ ಕೂಡ ಆರ್ಥಿಕ ಇಲಾಖೆಗೆ ಸೂಚಿಸಿದ್ದರು. ಆದರೆ ಈ ಸೂಚನೆ ಕಳೆದು ಹೋದದ್ದು ಹೇಗೆ ಎಂಬುದು ಮಿಲಿಯನ್ ಡಾಲರ್ ಪ್ರಶ್ಬೆಯಾಗಿದೆ.

ಅಧ್ಯಯನ ಪೀಠದ ಬೇಡಿಕೆ ಹಲವು ದಶಕಗಳದ್ದು. ಅದು ಈಗ ಈಡೇರುತ್ತದೆ ಎಂದೇ ಭಾವಿಸಲಾಗಿತ್ತು. ಮೌಲ್ಯಯುತ ರಾಜಕಾರಣದ ಏಳ್ಗೆಗೆ ಇಂಥ ಪೀಠಗಳು ಪ್ರೇರಣೆ ಆಗಬಲ್ಲವು ಎಂದೇ ಭಾವಿಸಲಾಗಿತ್ತು.

ಸಿಎಂ ಕೂಡ ರಾಮಕೃಷ್ಣ ಹೆಗಡೆ ಅವರ ಗರಡಿಯಲ್ಲೆ ಪಳಗಿದವರು. ಅವರೂ ‘ಗುರು ಋಣ’ ತೀರಿಸಲು ಇದೊಂದು ಅವಕಾಶವೂ ಆಗಿತ್ತು.

Advertisement

ಆದರೆ, ಈಗ ಬಜೆಟ್ ನಲ್ಲಿ ಪ್ರಸ್ತಾವನೆ ಆಗದೇ ಕಳೆದು ಹೋಗಿದೆ. ಅಧ್ಯಯನ ಪೀಠ ಪ್ರಸ್ತಾವನೆ ಮತ್ತೆ ತೆರೆಗೆ ಸರಿದಿದೆ.

ಇದನ್ನೂ ಓದಿ : ವಿವಿಧೆಡೆ ಹಿಪ್ಪುನೇರಳೆ ಬೆಳೆಗೆ ಧೂಳಿನ ಬಾಧೆ : ಗಣಿ ಧೂಳಿನಿಂದ ರೈತರಿಗೆ ಸಂಕಷ್ಟ

ಬೆಣ್ಣೆ ಸುಣ್ಣ:
ಘಟ್ಟದ ಕೆಳ ಭಾಗಕ್ಕೆ ಅನೇಕ ಯೋಜನೆ ಪ್ರಸ್ತಾವನೆ ಇದ್ದರೂ ಘಟ್ಟದ‌‌‌ ಮೇಲ್ಭಾಗಕ್ಕೆ ವಿಶೇಷ ಲಕ್ಷ್ಯವೇ ಇಲ್ಲವಾಗಿದೆ.

ಶಿರಸಿ ಕೇಂದ್ರವಾಗಿಸಿ‌ ಪ್ರತ್ಯೇಕ ಜಿಲ್ಲೆಗೆ ಹೋರಾಟ ನಡೆದರೂ ಮತ್ತೆ ಕೈ ತಪ್ಪಿದೆ‌. ಉತ್ತರ ಕನ್ನಡಕ್ಕಿಂತ ಕಡೆಗೆ ಪ್ರಸ್ತಾಪ ಇದ್ದ ಹಾವೇರಿ ಹಾಲು ಒಕ್ಕೂಟ ಆಯಿತೇ ಹೊರತು ಉ.ಕ.ಜಿಲ್ಲೆಗೆ ಈ ಭಾಗ್ಯವೇ ಸಿಗಲಿಲ್ಲ ಎಂಬ ಅಸಮಧಾನ ಹೈನುಗಾರರಲ್ಲಿದೆ.

ಇಲ್ಲಿ‌ನ ಪ್ರವಾಸಿ ತಾಣಗಳ ಅಭಿವೃದ್ದಿ, ನೆನಗುದಿಗೆ ಬಿದ್ದ ಬನವಾಸಿ ಅಭಿವೃದ್ದಿ‌ ಪ್ರಾಧಿಕಾರಕ್ಕೆ ನೆರವಿನ ಪುನಶ್ಚೇತನ, ಪ್ರವಾಸೋದ್ಯಮ ಜಿಲ್ಲಾ ಅವಕಾಶ ಯಾವುದಕ್ಕೂ, ತೋಟಗಾರಿಕಾ ಜಿಲ್ಲೆಯಾಗಿ ಘೋಷಣೆ ಕೂಡ ಇಲ್ಲವಾಗಿದೆ. ಸಚಿವ ಹೆಬ್ಬಾರರ ಪ್ರವಾಸೋದ್ಯಮ ಜಿಲ್ಲೆಯ ಪ್ರಸ್ತಾವಕ್ಕೂ ಹುಳಿ ದ್ರಾಕ್ಷಿಯಾಗಿದೆ.

ಶಿರಸಿಯಲ್ಲಿ ಸ್ಪೀಕರ್, ಯಲ್ಲಾಪುರದಲ್ಲಿ ಶಿವರಾಮ ಹೆಬ್ಬಾರ ಯಾರೇ ಇದ್ದರೂ ಅಭಿವೃದ್ಧಿ ವೇಗಕ್ಕೆ ಈ ಭಾಗದ ಹಲವು ಕನಸಿಗೆ ಬಜೆಟ್ ಸ್ಪರ್ಷ ಕಾಣದಂತೆ ಆಗಿದೆ.
ಆದರೆ, ಕಾಳಿ ನೀರನ್ನು ಇತರ ಜಿಲ್ಲೆಯ ಭಾಗಗಳಿಗೆ ಒಯ್ಯುವ ಪ್ರಸ್ತಾವವಿದೆ. ಇದರಿಂದ ದಟ್ಟ ಅರಣ್ಯ ದಲ್ಲಿ ಪರಿಸರ ಸಮಸ್ಯೆ ಆದೀತೆ ಎಂಬ ಪ್ರಶ್ನೆ ಎದ್ದಿದೆ. ಮೂರನೇ ಹಂತದ‌ ಕೆರೆ ನೀರಾ ರಿ ಯೋಜನೆಗೂ ಜಿಲ್ಲೆಯಲ್ಲಿ ಅನುಮತಿ ಸಿಕ್ಕಿಲ್ಲ.

ಕಾರವಾರ ಬಂದರು ವಿಸ್ತರಣೆ, ತದಡಿ‌‌ಪ್ರವಾಸೋದ್ಯ‌ಮ ಕೇಂದ್ರ ಬಿಟ್ಟರೆ ದೊಡ್ಡ ಭಾಗ್ಯ ಇಲ್ಲ.

ಯಶಸ್ವಿನಿ ಆರಂಭ, ಯಕ್ಷಗಾನ ಸಮ್ಮೇಳನಕ್ಕೆ ಅಸ್ತು, ಕೆಲ ಪ್ರವಾಸಿ ತಾಣ ಅಭಿವೃದ್ದಿಗೆ ಒತ್ತು, ಹಿಂದೆ ಅಷ್ಟು‌ ನೆರವಾಗದ ಹೋಬಳಿಗೆ ಯಂತ್ರಧಾರೆ ಬಿಟ್ಟರೆ ಹೇಳಿಕೊಳ್ಳುವ ಪ್ರತ್ಯೇಕ‌ ಬಜೆಟ್ ಜಿಲ್ಲೆಗೆ ಸಿಕ್ಕಿಲ್ಲ.

ಹೀಗೊಂದು ಪ್ರತಿಕ್ರಿಯೆ!
ಒಂದು‌ ಸಮಾಧಾನ ಅಂದರೆ ನಮ್ಮವರೇ ಉಸ್ತುವಾರಿ ಸಚಿವರು ಇರುವ ಹಾವೇರಿಗೆ ಹೆಚ್ಚಿನ ಆದ್ಯತೆ ಸಿಕ್ಕಿದೆ!
– ಡಾ. ರವಿಕಿರಣ ಪಟವರ್ಧನ್

Advertisement

Udayavani is now on Telegram. Click here to join our channel and stay updated with the latest news.

Next