Advertisement

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ: ವಿಶ್ವರೂಪ ದರ್ಶನ

02:00 AM Nov 19, 2018 | Karthik A |

ಉಡುಪಿ: ಉಡುಪಿ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ರವಿವಾರ ಮುಂಜಾನೆ ಪಶ್ಚಿಮ ಜಾಗರ ಪೂಜೆ, ಸುಪ್ರಭಾತ, ಕಾಕಡ ಆರತಿ, ಸಾವಿರಾರು ಹಣತೆಗಳ ದೀಪಗಳಿಂದ ಅಲಂಕೃತವಾದ ವಿಶ್ವರೂಪ ದರ್ಶನ ನೆರವೇರಿತು. ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಶ್ರೀ ರಾಮನ ಅವತಾರ, ತಿರುಮಲ ಬೆಟ್ಟದ ಶ್ರೀನಿವಾಸ ದರ್ಶನ, ಅರ್ಧನಾರೀಶ್ವರ, ಮಹಾಗಣಪತಿ, ಕಡೆ‌ಗೋಲು ಕೃಷ್ಣ , ಪಾಂಡುರಂಗ ವಿಟ್ಠಲ, ರಂಗೋಲಿಯ ಚಿತ್ತಾರ, ಹೂವಿನ ರಂಗೋಲಿ, ಹಣತೆಯ ದೀಪದಿಂದ ಓಂ, ಸ್ವಸ್ತಿಕ್‌, ಶಂಖ ಚಕ್ರ ರಚಿಸಲಾಯಿತು. ಭಕ್ತರು ಸರತಿ ಸಾಲಿನಲ್ಲಿ ಬಂದು ಶ್ರೀದೇವರ ದರ್ಶನ ಪಡೆದರು. ಶ್ರೀ ದೇವರಿಗೆ ವಿಶೇಷ ಅಲಂಕಾರ, ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು. ಪ್ರಧಾನ ಅರ್ಚಕ ರವೀಂದ್ರ ಭಟ್‌ ಪೂಜಾ ಕಾರ್ಯಕ್ರಮ ನೆರವೇರಿಸಿದರು.

Advertisement

ಆಡಳಿತ ಮೊಕ್ತೇಸರ ಪಿ.ವಿ.ಶೆಣೈ, ಆಡಳಿತ ಮಂಡಳಿ ಸದಸ್ಯರಾದ ಗಣೇಶ್‌ ಕಿಣಿ, ರೋಹಿತಾಕ್ಷ ಪಡಿಯಾರ್‌, ವಸಂತ್‌ ಕಿಣಿ, ವಿಶ್ವನಾಥ್‌ ಭಟ್‌, ನಾರಾಯಣ ಪ್ರಭು ಮತ್ತು ನರಹರಿ ಶೆಣೈ, ವಿಶಾಲ್‌ ಶೆಣೈ, ಮಟ್ಟಾರು ಗಣೇಶ್‌ ಕಿಣಿ , ಭಾಸ್ಕರ್‌ ಶೆಣೈ, ಶ್ಯಾಂಪ್ರಸಾದ್‌ ಕುಡ್ವ , ಪ್ರದೀಪ್‌ ರಾವ್‌, ಮಟ್ಟಾರು ಸತೀಶ್‌ ಕಿಣಿ, ಸುರೇಶ ಭಟ್‌, ದಯಾಘಾನ್‌ ಭಟ್‌, ವಿನಾಯಕ್‌ ಭಟ್‌, ಬೀಳಿಗಿ ಭಟ್‌, ಜಿಎಸ್‌ಬಿ ಯುವಕ ಮಂಡಲ, ಮಹಿಳಾ ಮಂಡಲಗಳ ಸದಸ್ಯರು, ಸಮಾಜದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next