Advertisement

Goshala ಎಲ್ಲ ಜಿಲ್ಲೆಯಲ್ಲೂ ಗೋ ಶಾಲೆ ಚಿಂತನೆ: ಪೇಜಾವರ ಶ್ರೀ

10:58 PM Aug 07, 2023 | Team Udayavani |

ಮೈಸೂರು: ಮಠದಿಂದ ಎಲ್ಲ ಜಿಲ್ಲೆಗಳಲ್ಲೂ ಗೋ ಶಾಲೆ ಆರಂಭಿಸಬೇಕೆಂಬ ಚಿಂತನೆ ಇದೆ. ವಸತಿ ರಹಿತರಿಗೂ ಮನೆ ಕಲ್ಪಿಸಲಾಗುವುದು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.

Advertisement

ಸರಸ್ವತಿಪುರಂನ ಉಡುಪಿ ಕೃಷ್ಣಧಾಮದಲ್ಲಿ ಚಾತು ರ್ಮಾಸ ವ್ರತ ಆಚರಣೆಯಲ್ಲಿರುವ ಶ್ರೀಗಳು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಮಮಂದಿರ ನಿರ್ಮಾಣ ವಾದರೆ ಸಾಲದು, ರಾಮರಾಜ್ಯ ನಿರ್ಮಾಣವಾಗಬೇಕು. ಪ್ರತಿಯೊ ಬ್ಬರೂ ತಮ್ಮ ಕಾರ್ಯಕ್ಷೇತ್ರದಲ್ಲಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.

ರಾಮನ ಗುಣಗಳಲ್ಲಿ ಎಲ್ಲರೂ ಒಂದೊಂದು ಗುಣ ಅಳವಡಿಸಿಕೊಂಡರೆ ರಾಮರಾಜ್ಯ ಕಲ್ಪನೆ ನನಸಾಗಲಿದೆ. ರಾಮಭಕ್ತಿ ಬೇರೆ ಅಲ್ಲ. ದೇಶಭಕ್ತಿ ಬೇರೆ ಅಲ್ಲ. ರಾಮ ಸೇವೆ, ದೇಶ ಸೇವೆ ಎರಡೂ ಒಂದೆ. ಸಮಾಜದಲ್ಲಿ ಇರುವ ಅಸಹಾಯಕರಿಗೆ, ಬಡವರಿಗೆ, ಕಷ್ಟದಲ್ಲಿ ಇರುವವರಿಗೆ ಅವರವರ ವೃತ್ತಿ ಸೀಮೆಯಲ್ಲಿ ನೆರವಾಗುವುದೇ ರಾಮ ಸೇವೆ. ನಮ್ಮಲ್ಲಿ ಸಾಕಷ್ಟು ಸಂಘ ಸಂಸ್ಥೆಗಳಿವೆ. ಇವು ವರ್ಷಕ್ಕೆ ಒಂದಾದರೂ ಸಮಾಜ ಸೇವೆ ಮಾಡಿದರೆ ನಮ್ಮ ನಡುವೆ ಇರುವ ಎಷ್ಟೋ ಸಮಸ್ಯೆಗಳು ನಿವಾರಣೆ ಆಗಲಿವೆ ಎಂದರು.

ಮಠದಿಂದ ವಸತಿ ರಹಿತರಿಗೆ ಮನೆ ನೀಡಲು ಮುಂದಾಗಿದ್ದು, ಈಗಾಗಲೇ ಉಡುಪಿಯಲ್ಲಿ ಎಂಟು ಮನೆ ನಿರ್ಮಾಣ ಮಾಡಲಾಗಿದೆ. ಮೈಸೂರಿನಲ್ಲೂ ಇಬ್ಬರು ಮುಂದೆ ಬಂದಿದ್ದಾರೆ. ನಮ್ಮ ಸಾಧ್ಯತೆಗೆ ಅನುಗುಣವಾಗಿ ನೆರವು ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next