Advertisement

ವಿಶ್ವನಾಥ್‌ರ ರಿಯಲ್‌ ಎಸ್ಟೇಟ್‌ ವ್ಯವಹಾರದ ದಾಖಲೆ ಬಿಡುಗಡೆ ಮಾಡುವೆ: ಸಾ.ರಾ.ಮಹೇಶ್‌

08:55 AM Dec 01, 2019 | Sriram |

ಮೈಸೂರು: “ನಾನು ಮಾತ್ರ ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುತ್ತಿದ್ದೇನೆ ಎನ್ನುವ ರೀತಿ ಮಾತನಾಡುತ್ತಿರುವ ಎಚ್‌.ವಿಶ್ವನಾಥ್‌ ಕೂಡ ಅದೇ ವ್ಯವಹಾರ ಮಾಡುತ್ತಿದ್ದಾರೆ. ಚುನಾವಣೆಗೂ ಮುನ್ನವೇ ಇದರ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ’ ಎಂದು ಮಾಜಿ ಸಚಿವ ಸಾ.ರಾ.ಮಹೇಶ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ವಿಶ್ವನಾಥ್‌ ಅವರು ನನ್ನಿಂದಾಗಿ ಪಕ್ಷ ಬಿಟ್ಟೆ ಎಂದು ಹೇಳುತ್ತಿದ್ದಾರೆ. ಜೆಡಿಎಸ್‌ ಪಕ್ಷವೇನು ನನ್ನದಾ? ಪಕ್ಷಕ್ಕೆ ಲಕ್ಷಾಂತರ ಕಾರ್ಯಕರ್ತರು, ರಾಷ್ಟ್ರೀಯ ಅಧ್ಯಕ್ಷರು ಇದ್ದಾರೆ. ಪಕ್ಷ ಬಿಡುವಾಗ ಅವರನ್ನು ಕೇಳಿದ್ದೀರಾ? ಹುಣಸೂರಿನಲ್ಲಿ ಪ್ರವಾಹ ಬಂದು ಜನ ಸಂಕಷ್ಟದಲ್ಲಿ ಸಿಲುಕಿದ್ದಾಗ ನೀವು ಮುಂಬೈಗೆ ಹೋಗಿ ಐಷಾರಾಮಿ ಹೋಟೆಲ್‌ನಲ್ಲಿ ಕುಳಿತಿದ್ದೀರಿ. ನೀವು ಮಾಡಿದ ಪಾಪದ ಫ‌ಲವನ್ನು ಈಗ ಅನುಭವಿಸುತ್ತಿದ್ದೀರಿ ಎಂದು ಹರಿಹಾಯ್ದರು.

ಸಾ.ರಾ.ಮಹೇಶ್‌ಗೆ ಮಾಡಲು ಕೆಲಸವಿಲ್ಲ. ಉಪ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನನಗೆ ಕೆಲಸವಿದೆ. ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು 6ನೇ ತಾರೀಖೀನ ನಂತರ ತರಲಿ, ಕುಳಿತು ಮಾತಾಡೋಣ.
– ಎಚ್‌.ವಿಶ್ವನಾಥ್‌

Advertisement

Udayavani is now on Telegram. Click here to join our channel and stay updated with the latest news.

Next