ಶಹಾಪುರ: ಆರ್ ಟಿಐ ಕಾರ್ಯಕರ್ತ ಬಸವರಾಜ ಅರುಣಿ ಯಾದಗಿರಿ ಸಹಕಾರಿ ಯೂನಿಯನ್ ಮುಖ್ಯ ಪ್ರವರ್ತಕ ಹುದ್ದೆ ನೇಮಕ ಸಂದರ್ಭದಿಂದ ನನ್ನ ಜೊತೆ ದ್ವೇಷ ಬೆಳೆಸಿಕೊಂಡಿದ್ದ, ಹೀಗಾಗಿ ಮಕ್ಕಳಿಗೆ ವಿತರಿಸುತ್ತಿದ್ದ ಬಿಸಿಯೂಟದಲ್ಲಿ ವಿಷ ಬೆರೆಸುವ ಪ್ರಯತ್ನ ಸಹ ಮಾಡಿದ್ದ ಎಂದು ಎನ್‍ಜಿಓ ಸಂಸ್ಥೆಯ ಮುಖ್ಯಸ್ಥ, ಕಾಂಗ್ರೆಸ್ ಮುಖಂಡ ವಿಶ್ವನಾಥರಡ್ಡಿ ದರ್ಶನಾಪುರ ಬಲವಾಗಿ ಆರೋಪಿಸಿದರು.
ಬಾಪುಗೌಡ ನಗರದ ಅವರ ಕಚೇರಿಯಲ್ಲಿ ಮಂಗಳವಾರ ಮಧ್ಯಾಹ್ನ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹಲವು ಎನ್‍ಜಿಓ ಮೂಲಕ ಟೆಂಡರ್ ಪಡೆದು ಹಲವಾರು ಶಾಲೆಗಳಿಗೆ ನಾನು ಬಿಸಿಯೂಟ ವಿತರಣೆ ಮಾಡುತ್ತೇನೆ. ನನ್ನ ಕೆಲಸ ಕುರಿತು ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿ ಇಲ್ಲದ ಆರೋಪ ಮಾಡಿ ನನ್ನಿಂದ ಹಣ ಕೀಳಲು ಪ್ರಯತ್ನ ನಡೆಸುತ್ತಿದ್ದ, ಹಲವಾರು ಬಾರಿ ಹಲವರಿಂದ ದುಡ್ಡು ಕೊಟ್ಟರೆ ಬಿಡುತ್ತೇನೆ ಇಲ್ಲವಾದಲ್ಲಿ ಅವನನ್ನು ಬೀದಿಗೆ ನಿಲ್ಲುವಂತೆ ಮಾಡುತ್ತೇನೆ ಎಂದು ಹಲವರ ಮುಂದೆ ಮಾತನಾಡಿದ ಉದಾಹರಣೆಗಳಿವೆ. ಸೋಮವಾರ ನಮ್ಮ ಮನೆಯ ಗುರುಗಳಾಗಿದ್ದ ಗುಂಡಗುರ್ತಿಯ ವಿಜಯಕುಮಾರ ಪೂಜಾರಿ ಎಂಬಾತನನ್ನು ಕರೆದುಕೊಂಡು ಮಾತುಕತೆ ರಾಜಿ ಸಂದಾನಕ್ಕೆ ನಮ್ಮ ಮನೆಗೆ ಆಗಮಿಸಿದ್ದರು.
ಆ ಸಮಯದಲ್ಲಿ ತನಗೆ ಜಿಲ್ಲಾ ಮುಖ್ಯ ಪ್ರವರ್ತಕ ಹುದ್ದೆ ಬಿಟ್ಟುಕೊಡುವದು ಸೇರಿದಂತೆ 5 ಲಕ್ಷ ರೂ. ನೀಡಬೇಕೆಂದು ಡಿಮ್ಯಾಂಡ್ ಮಾಡಿದ. ಆಯ್ತು ಇಲ್ಲಿಗೆ ಮುಗಿಸೋಣವೆಂದು ಮಾತಾಡುತ್ತಿದ್ದಂತೆ, ಸ್ವೀಟ್ ತಂದಿದ್ದೇನೆ ಎಂದು ವಿಷ ಬೆರೆಸಿದ್ದ ಸ್ವೀಟ್ ತಿನ್ನಿಸಲು ಮುಂದಾದ. ಅದು ಕೆಟ್ಟ ವಾಸನೆ ಬರಲಾಗಿ ನಾನು ತಡೆದೆ, ಇದು ಸರಿ ಇಲ್ಲ ಎನ್ನುತ್ತಿದ್ದಂತೆ, ಅರುಣಿ ತಾನೂ ಹಾಗೇಣಿಲ್ಲ ಎಂದು ತಾನೂ ಬಾಯಿಗೂ ಅಚ್ಚಿಕೊಳ್ಳದೆ ಇರುವಾಗ ಅನುಮಾನಗೊಂಡೆ, ತಕ್ಷಣಕ್ಕೆ ಅವನ ಮುಖಚರ್ಯೆ ಬದಲಾಗಿ ಗದರಿಸಿದೆ ನಿಜ ಹೇಳು ಎಂದು, ಆಗಾಗ ಅದರಲ್ಲಿ ವಷ ಬೆರೆಸಿರುವದು ತಿಳಿಯಿತು. ಅಷ್ಟರಲ್ಲಿ ಕೋಪಗೊಂಡು ನಾನು ಬೈಯ್ಯುತ್ತಿರುವಾಗ ಹಲವಾರು ಜನ ಸೇರಿ ಅವನನ್ನು ಬಡಿದಿದ್ದು ನಿಜವೆಂದು ಸ್ಪಷ್ಟ ಪಡಿಸಿದರು.
ಈ ಹಿಂದೆಯೂ ಮೂರು ನಾಲ್ಕು ಬಾರಿ ನಮ್ಮ ಬಿಡಿಯೂಟ ತಯಾರಿಸುವ ಘಟಕದ ಪಕ್ಕದಲ್ಲಿ ಓಡಾಡುತ್ತಿದ್ದ, ಈ ಮೊದಲೆ ಕೆಲಸಗಾರರಿಗೆ ನಾನು ತಿಳಿಸಿದ್ದೆ, ಇಂತಹ ವ್ಯಕ್ತಿ ಏನಾದರೂ ಮಾಡಬಹುದು ಎಚ್ಚರದಿಂದ ಇರಬೇಕೆಂದು. ಮೂರು ನಾಲ್ಕು ಬಾರಿ ಬಿಸಿಯೂಟ ತಯಾರಿಸುವ ಘಟಕದ ಪಕ್ಕದಲ್ಲಿ ತಿರುಗುತ್ತಿರುವದನ್ನು ಕಂಡು ವಿಚಾರಿ ಆತನನ್ನು ಕಳುಹಿಸಲಾಗಿತ್ತು ಎಂದು ವಿವರಿಸಿದರು.
ಒಟ್ಟಾರೆ ದ್ವೇಷದಿಂದ ನನ್ನ ಮುಗಿಸುವ ಸಂಚು ರೂಪಿಸಿದ್ದಾನೆಂದು ಆರೋಪಿಸಿದ ಅವರು, ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದರು. ಈ ವೇಳೆ ವಿಜಯಕುಮಾರ ಪೂಜಾರಿ ಇತರರು ಉಪಸ್ಥಿತರಿದ್ದರು.