ಮೈಸೂರು: ನಾನು ನಾನು ಎನ್ನುವು ದುರಹಂಕಾರ, ದರ್ಪ ನಿಮ್ಮನ್ನು ಇಲ್ಲಿಗೆ ತಗೊಂಡು ಹೋಗಿದೆ. ನಾನೇ ಮುಖ್ಯಮಂತ್ರಿ ಆಗುತ್ತೇನೆ ಎನ್ನುತ್ತಾರೆ. ಚುನಾವಣೆಗೆ ಇನ್ನೂ ಎರಡೂವರೆ ವರ್ಷವಿದೆ, ಜನರು ಯಾರಿಗೆ ಆಶೀರ್ವಾದ ಮಾಡುತ್ತಾರೆ ಯಾರಿಗೆ ಗೊತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರುಬರಿಗೆ ಸಿದ್ದರಾಮಯ್ಯನವರ ಕಾಲದಲ್ಲಿ ಆದಷ್ಟು ಅನ್ಯಾಯ ಯಾವಾಗಲೂ ಆಗಿಲ್ಲ. ಕೊನೆಯಲ್ಲಿ ಸಿಕ್ಕಿಸಿಕ್ಕದ್ದಕ್ಕೆ ಹಣ ಕೊಟ್ಟು ಹೋದರು. ಮತ್ತೆ ಮುಖ್ಯಮಂತ್ರಿಯಾಗುದಲ್ಲವೆಂದು ನಿಮಗೆ ಗೊತ್ತಿತ್ತು. ಶಿಳ್ಳೆ, ಕೇಕೆಗಷ್ಟೇ ಸಿದ್ದರಾಮಯ್ಯ ಭಾಷಣ ಮಾಡ್ತಾರೆ. ದೇವರಾಜ ಅರಸು ಅವರಿಗಿಂತ ದೊಡ್ಡ ಆಡಳಿತಗಾರನ ನೀವು ಎಂದು ಕುಟುಕಿದರು.
ಇದನ್ನೂ ಓದಿ:ರಾಮ ಜನರ ಧಾರ್ಮಿಕ ನಂಬಿಕೆ, ನಾನೂ ರಾಮಮಂದಿರ ಕಟ್ಟಿಸುತ್ತಿದ್ದೇನೆ: ಸಿದ್ದರಾಮಯ್ಯ
ನಾನು ಆಳಾಗಿದ್ದು ಸಿದ್ದರಾಮಯ್ಯನನ್ನು ಉದ್ದಾರ ಮಾಡಲು ಹೋಗಿ. ದೇವೇಗೌಡರು ನಿನ್ನನ್ನು ಪಕ್ಷದಿಂದ ಹೊರ ಹಾಕಿದ್ದರು. ನಾನು ಸಾಕಷ್ಟು ಜನರ ಕಾಲು ಹಿಡಿದು ನಿನ್ನನ್ನು ಪಕ್ಷಕ್ಕೆ ಕರೆದುಕೊಂಡು ಬಂದೆ. ನಿನ್ನನ್ನು ಉದ್ದಾರ ಮಾಡಲು ಹೋಗಿ ನಾನು ಆಳಾದೆ ಎಂದು ಏಕವಚನದಲ್ಲಿ ಕಿಡಿಕಾರಿದರು.
ಸಂಗೊಳ್ಳಿ ರಾಯಣ ಅಭಿವೃದ್ಧಿಗೆ 260 ಕೋಟಿ ಹಣ ಬಿಡುಗಡೆ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಕೊಟ್ಟಿದ್ದು ಕೇವಲ 10 ಕೋಟಿ ಮಾತ್ರ. ಕೇವಲ ಬಜೆಟ್‌ನಲ್ಲಿ ಹೇಳಿ ಹೋದರೆ ಆಗಲಿಲ್ಲ. ಮೇಲಾಗಿ ಅದಕ್ಕಾಗಿ ಹಣವನ್ನು ಮೀಸಲಿಡಬೇಕಿತ್ತು. ಎಫ್‌ಡಿ ಹಣ ಮೀಸಲಿಟ್ಟು ಮಾತನಾಡಬೇಕಿತ್ತು. ಅದು ಬಿಟ್ಟು ನಾನೇ ಜನಾಂಗವನ್ನು ಉದ್ದಾರೆ ಮಾಡಿದೆ ಎನ್ನುವುದು ಸರಿಯಲ್ಲ ಎಂದು ಹೇಳಿದರು.
ಇದನ್ನೂ ಓದಿ: ಸಂಬಂಧಿಕರ ಮದುವೆಗಾಗಿ ಬರುತ್ತಿದ್ದವರ ಕಾರಿನ ಟಯರ್ ಸ್ಫೋಟ: ಪತಿ ಸಾವು, ಪತ್ನಿ ಗಂಭೀರ