ಪುಣೆ, ಜು. 27: ಬ್ರಹ್ಮಶ್ರೀ ನಾರಾಯಣಗುರುಗಳ ತತ್ತÌ ಮತ್ತು ಪ್ರೇರಣೆಯಂತೆ ಸಮಾಜದ ಪ್ರತಿಯೊಬ್ಬ ಮಕ್ಕಳು ವಿದ್ಯಾವಂತರಾಗಬೇಕು ಎಂಬ ಧ್ಯೇಯದಿಂದ ಸಂಘವು ಪ್ರತೀವರ್ಷ ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡುತ್ತಿದೆ. ಇಂದಿನ ನಾಗರಿಕ ಸಮಾಜದಲ್ಲಿ ಉತ್ತಮ ವಿದ್ಯಾವಂತರಿಗೆ ಗೌರವದೊಂದಿಗೆ ತಮ್ಮ ವಿದ್ಯಾಭ್ಯಾಸದ ಸ್ಥಾನಮಾನಕ್ಕೆ ಸಮಾನಾದ ಉತ್ತಮ ಶ್ರೇಣಿಯ ಸರಕಾರಿ ಅಥವಾ ಖಾಸಗಿ ಹುದ್ದೆಗಳು ಲಭಿಸುತ್ತವೆ. ಸಮಾಜದ ಮಕ್ಕಳು ವಿದ್ಯಾವಂತರಾಗಿ ಸಮಾಜಕ್ಕೆ ಗೌರವ ತರಲಿ ಎಂದು ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ ಹೇಳಿದರು.
ಜು. 26ರಂದು ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಪುಣೆಯ ಸೋಮವಾರ ಪೇಟೆಯ ಸಿದ್ಧಿವಿನಾಯಕ ಕೇಸರ್‌ನ ಸಂಘದ ಕಚೇರಿಯಲ್ಲಿ ನಡೆದ ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉನ್ನತ ಮಟ್ಟದ ವಿದ್ಯಾಭ್ಯಾಸ ಪಡೆಯುವ ಅರ್ಹತೆ ನಮ್ಮ ಯುವಕ-ಯುವತಿಯರಲ್ಲಿ ಇರಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ, ಉತ್ತಮ ಮಾರ್ಗದರ್ಶನ
ದೊಂದಿಗೆ ವಿದ್ಯಾವಂತರನ್ನಾಗಿ ಮಾಡುವ ಕರ್ತವ್ಯ ಪಾಲಕರ ಮೇಲಿದೆ. ಶಿಕ್ಷಣದಲ್ಲಿ ಮುಂದು ವರಿಯುವ ಮಕ್ಕಳಿಗೆ ಪ್ರೋತ್ಸಾಹ ಮತ್ತು ಸಹಕಾರ ನೀಡಲು ಸಂಘವು ಸದಾ ಸಿದ್ಧವಿದೆ. ಇದರ ಪ್ರಯೋಜನ ವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು.
ಸಮಾಜದ ಸೇವಾಕರ್ತರು, ಉದ್ಯಮಿಗಳು, ದಾನಿಗಳು ಇಂತಹ ಕಾರ್ಯಗಳಿಗೆ ಪ್ರೋತ್ಸಾಹ ನೀಡಬೇಕಾದ ಜವಾಬ್ದಾರಿಯೂ ಇದೆ. ಆಗ ನಮ್ಮ ಸಮಾಜದ ಮಕ್ಕಳಲ್ಲಿ ಉತ್ಸಾಹ ತುಂಬಿ ಉತ್ತಮ ವ್ಯಾಸಂಗ ಮಾಡಲು ಸಹಕಾರಿಯಾಗಬಲ್ಲದು ಎಂದು ತಿಳಿಸಿದರು.
ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ಕುಲದೇವರಾದ ಬ್ರಹ್ಮಬೈದರ್ಕಳ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯವರ ಫೋಟೋಗೆ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೌರವ ಕಾರ್ಯದರ್ಶಿ ಸದಾನಂದ ಬಂಗೇರ ಪ್ರಸ್ತಾವಿಸಿ, ಪುಸ್ತಕ ವಿತರಣೆ ಕಾರ್ಯಕ್ರಮದ ಧ್ಯೇಯೋದ್ದೇಶಗಳ ಬಗ್ಗೆ ತಿಳಿಸಿದರು. ಸಂಘದ ಉಪಾಧ್ಯಕ್ಷರು ಮತ್ತು ಕಟ್ಟಡ ಸಮಿತಿಯ ಅಧ್ಯಕ್ಷ ಸಂದೇಶ್ ಪೂಜಾರಿ, ಜಯರಾಮ ಪೂಜಾರಿ, ಭಾಸ್ಕರ ಪೂಜಾರಿ, ಕಟ್ಟಡ ಸಮಿತಿಯ ಮಹಿಳಾ ಅಧ್ಯಕ್ಷೆ ಗೀತಾ ಪೂಜಾರಿ ಉಪಸ್ಥಿತರಿದ್ದರು. ಸುಮಾರು 150ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗವನ್ನು ಪಡದುಕೊಂಡರು.
ಗಿರೀಶ್ ಪೂಜಾರಿ, ಶಿವಪ್ರಸಾದ್ ಪೂಜಾರಿ, ರವಿ ಪೂಜಾರಿ, ಪ್ರಕಾಶ್ ಪೂಜಾರಿ, ಚೇತನ್ ಪೂಜಾರಿ, ವನಿತಾ ಪೂಜಾರಿ, ನಮಿತಾ ಪೂಜಾರಿ, ನೀಲಂ ಪೂಜಾರಿ, ಸುನಿತಾ ಪೂಜಾರಿ, ಶಿವರಾಮ್ ಪೂಜಾರಿ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಸಮಾಜ ಭಾಂದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯದರ್ಶಿ ಸದಾನಂದ ಬಂಗೇರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಗೀತಾ ಪೂಜಾರಿ ಅವರ ಪ್ರಾಯೋಜಕತ್ವದಲ್ಲಿ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.