Advertisement
ಫೆ. 9 ರಂದು ಸಂಜೆ ಚರ್ಚ್‌ಗೇಟ್ ಪರಿಸರದ ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸೆಂಟ್ರಲ್ ರೈಲ್ವೇ ತಂಡವು ಬಾಂದ್ರಾ ಪ್ಯಾಕರ್ ತಂಡದೊಂದಿಗೆ ಸೆಣಸಾಡಿದ್ದು. ಸೆಂಟ್ರಲ್ ರೈಲ್ವೇ ತಂಡವು 3-0 ಅಂತರಗಳಿಂದ ಗೆದ್ದು ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ವಿಜೇತ ತಂಡದ ಪರವಾಗಿ ಕಾಸಿಪ್ ಜಮಾಲ್, ಅರಿಫ್ ಅನ್ಸಾರಿ ಹಾಗೂ ಅಮರ್ ಪರದೇಶಿ ಅವರು ತಲಾ ಒಂದು ಗೋಲು ಹೊಡೆದು ತಂಡಕ್ಕೆ ಜಯ ತಂದುಕೊಟ್ಟರು.ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಕೆಎಸ್‌ಎ ತಂಡವು ಏರ್ ಇಂಡಿಯಾ ತಂಡವನ್ನು 1-0 ಅಂತರದಿಂದ ಬಗ್ಗುಬಡಿಯಿತು. ಕೆಎಸ್‌ಎ ತಂಡದ ಪರವಾಗಿ ವೆಲ್ವಿನ್ ವಾಜ್ ಗೋಲು ಹೊಡೆದರು. ವಿಶೇಷ ವೈಯಕ್ತಿಕ ಬಹುಮಾನವನ್ನು ಶ್ಯಾಮ್ ಸಾವಂತ್ ಗೋಲ್ ಕೀಪರ್, ತಬರೇಜ್ ಸಯ್ನಾದ್ ಡಿಫೆಂಡರ್, ಸವಿಯೋ ರೊಡ್ರಿಗಸ್ ಮಿಡ್ ಫೀಲ್ಡ್, ಮೆಲ್ವಿನ್ ವಾಜ್ ಸೆಂಟರ್ ಫಾರ್‌ವರ್ಡ್ ಹಾಗೂ ಪಂದ್ಯಾಟದ ಸರ್ವೋತ್ತಮ ಆಟಗಾರರಾಗಿ ಸೆಂಟ್ರಲ್ ರೈಲ್ವೆಯ ಕಾಸಿಫ್ ಜಮಾಲ್ ಅವರು ಪಡೆದರು.
ವಿಜೇತ ತಂಡಕ್ಕೆ 50 ಸಾವಿರ ರೂ. ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 35 ಸಾವಿರ ರೂ. ನಗದು ಮತ್ತು ಟ್ರೋಫಿ ಹಾಗೂ ಮೂರನೇ ಸ್ಥಾನ ಪಡೆದ ತಂಡಕ್ಕೆ 15 ಸಾವಿರ ರೂ. ನಗದು ಮತ್ತು ಟ್ರೋಫಿ, ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ 10 ಸಾವಿರ ರೂ. ನಗದು ಮತ್ತು ಟ್ರೋಫಿಯನ್ನು ಗಣ್ಯರು ಪ್ರದಾನಿಸಿ ಗೌರವಿಸಿದರು. ರಾಷ್ಟ್ರೀಯ ಫುಟ್ಬಾಲ್ ಆಟಗಾರ, ಟಾಟಾ ಉದ್ಯೋಗ ಸಮೂಹದ ಸುರೇಂದ್ರ ಕುಮಾರ್ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ವಿಜೇತರನ್ನು ಅಭಿನಂದಿಸಿದರು.