Advertisement
ಫಲಾನುಭವಿಗಳು ಆನ್‌ಲೈನ್ ಮೂಲಕ ಸಲ್ಲಿಸಿ ರುವ ಅರ್ಜಿಗಳನ್ನು ಗ್ರಾ.ಪಂ. ಅಧ್ಯಕ್ಷರು/ ನಗರ ಸ್ಥಳೀಯ ಸಂಸ್ಥೆಗಳ ಆಡಳಿತಾಧಿಕಾರಿಗಳು ತಮ್ಮ ಲಾಗಿನ್ ಮೂಲಕ ಪರಿಶೀಲಿಸಿ ಪ್ರೊಸೆಸ್ ಮಾಡ ಬೇಕು ಅಥವಾ ತಿರಸ್ಕೃರಿಸಬೇಕು. ಈ ಪ್ರಕ್ರಿಯೆ ನಿರೀಕ್ಷಿತ ವೇಗದಲ್ಲಿ ನಡೆಯು ತ್ತಿಲ್ಲ. ಪ್ರಾಥಮಿಕ ಹಂತದಲ್ಲೇ ವಿಳಂಬ ವಾಗುತ್ತಿರುವುದು ಜಿಲ್ಲೆ ಮತ್ತು ರಾಜ್ಯ ಹಂತದ ಮೇಲೂ ಪರಿಣಾಮ ಬೀರುತ್ತಿದೆ.
Related Articles
Advertisement
ಜಿಲ್ಲಾ ಹಂತದಲ್ಲಿ ನಿತ್ಯ ವಿಲೇವಾರಿ ನಡೆಯುತ್ತಿದೆ. ಗ್ರಾ.ಪಂ./ನಗರ ಸ್ಥಳೀಯ ಸಂಸ್ಥೆಗಳಲ್ಲಿಯೇ ಪರಿಶೀಲನೆ ಸರಿಯಾದ ಕ್ರಮದಲ್ಲಿ ಆಗಬೇಕಿರುವುದರಿಂದ ನಿತ್ಯವೂ ವಿಲೇವಾರಿ ಪ್ರಕ್ರಿಯೆ ನಡೆಯಬೇಕು. ಅನೇಕ ಗ್ರಾ.ಪಂ.ಗಳಲ್ಲಿ ಅಧ್ಯಕ್ಷರು ಆನ್‌ಬೋರ್ಡ್ ಆಗುವುದೇ ವಿಳಂಬವಾಗಿದೆ. ಅರ್ಜಿ ಸಲ್ಲಿಕೆಗೆ ಕಾಲಮಿತಿ ವಿಧಿಸದೆ ಇರುವುದರಿಂದ ನಿರಂತರ ಸಲ್ಲಿಕೆಯಾಗುತ್ತಿದೆ. ಹೀಗಾಗಿ ಗ್ರಾ.ಪಂ. ಅಧ್ಯಕ್ಷರು/ನಗರ ಸ್ಥಳೀಯ ಸಂಸ್ಥೆಗಳ ಆಡಳಿತಾಧಿಕಾರಿಗಳು ಆಯಾ ದಿನದ ಅರ್ಜಿಗಳನ್ನು ಅಂದೇ ಪರಿಶೀಲಿಸಿ ವಿಲೇವಾರಿ ಮಾಡಿದಷ್ಟು ಫಲಾನುಭವಿಗಳಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.
ವಿಶ್ವಕರ್ಮ ಯೋಜನೆ ಯಾರಿಗೆ ಅನ್ವಯ?ಬಡಗಿ, ದೋಣಿ ತಯಾರಿಕೆ, ನೇಕಾರ, ಕುಂಬಾರಿಕೆ, ಪಾದರಕ್ಷೆ ತಯಾರಿ, ಬೀಗ ತಯಾರಕ, ಚಮ್ಮಾರ, ಕಮ್ಮಾರ, ಅಕ್ಕಸಾಲಿಗ, ದರ್ಜಿ, ಶಿಲ್ಪಿ, ಮೇಸ್ತ್ರಿ, ಆಟಿಕೆ ತಯಾರಕ (ಸಾಂಪ್ರದಾಯಿಕ), ಬುಟ್ಟಿ ಹೆಣೆಯುವವ, ದೋಬಿ, ಕ್ಷೌರಿಕ, ಮೀನುಗಾರಿಕೆ ಬಲೆ ಹೆಣೆಯುವವರು, ಹೂವಿನ ಮಾಲೆ ತಯಾರಕರಿಗೆ ವಿಶೇಷ ಕೌಶಲ ಒದಗಿಸಲು ಯೋಜನೆ ರೂಪಿಸಲಾಗಿದೆ. ಕೇಂದ್ರ ಸರಕಾರದಿಂದ ಗೌರವಧನದೊಂದಿಗೆ ತರಬೇತಿ ಹಾಗೂ ಅನಂತರ ಸಾಲಸೌಲಭ್ಯ ಒದಗಿಸಲಾಗುತ್ತದೆ ಎಂದು ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು.