Advertisement

ವಿಶ್ವಕರ್ಮರ ಮಾರ್ಗದರ್ಶನ ದಾರಿದೀಪ

04:47 PM Sep 18, 2022 | Team Udayavani |

ಗದಗ: ವಿಶ್ವಕರ್ಮರು ಸಾವಿರಾರು ವರ್ಷಗಳ ಪ್ರಾಚೀನ ಸಂಸ್ಕೃತಿ ಹೊಂದಿದ್ದಾರೆ. ವಿಶ್ವಕರ್ಮರು ದೇವಶಿಲ್ಪಿ ಹಾಗೂ ವಾಸ್ತುಶಿಲ್ಪಿಗಳಾಗಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ವಿಶ್ವಕರ್ಮರು ಕೆಲಸ ಮಾಡದ ಕ್ಷೇತ್ರಗಳಿಲ್ಲ. ಸಮಾಜಕ್ಕೆ ವಿಶ್ವಕರ್ಮರ ಮಾರ್ಗದರ್ಶನ ದಾರಿದೀಪವಾಗಿದೆ ಎಂದು ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಹೇಳಿದರು.

Advertisement

ನಗರದ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾರ್ಕೆಟಿಂಗ್‌ ಕಮ್ಯುನಿಕೇಷನ್‌ ಮತ್ತು ಅಡ್ವಟೈಸಿಂಗ್‌ ಲಿಮಿಟೆಡ್‌ ಅಧ್ಯಕ್ಷ ಎಂ.ಎಸ್‌. ಕರಿಗೌಡ್ರ ಮಾತನಾಡಿ, ವಾಸ್ತುಶಿಲ್ಪಗಳನ್ನು ಮಾಡುವವರು, ಅನ್ನದಾತನಿಗೆ ನೇಗಿಲು ತಯಾರು ಮಾಡುವವರು ವಿಶ್ವಕರ್ಮರೇ ಆಗಿದ್ದಾರೆ. ಪುರಾತನ ಕಾಲದಿಂದಲ್ಲಿ ಗುರುಕುಲಗಳು ಬದುಕಿನ ಪರಂಪರೆಯನ್ನು ತೋರಿಸಿಕೊಡುತ್ತಿದ್ದವು. ಮನೆಯಲ್ಲಿ ತಾಯಿ ಹಾಗೂ ಗುರುಹಿರಿಯರ ಮಾರ್ಗದರ್ಶ ನದಿಂದಲೇ ಪ್ರತಿಯೊಬ್ಬರೂ ಯಶಸ್ಸನ್ನು ಕಾಣುತ್ತಿದ್ದರು. ಕೃಷಿಗೆ ಅನ್ನದಾತನೇ ಬೆನ್ನೆಲುಬಾದರೆ, ಅನ್ನದಾತನಿಗೆ ನೇಗಿಲು, ಕೃಷಿ ಸಲಕರಣೆಗಳನ್ನು ತಯಾರು ಮಾಡಿಕೊಡುವ ಹೆಮ್ಮೆ ವಿಶ್ವಕರ್ಮರಿಗೆ ಸಲ್ಲುತ್ತದೆ ಎಂದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ಧಪ್ಪ ಪಲ್ಲೇದ ಮಾತನಾಡಿ, ವಿಶ್ವ ಕರ್ಮರು ಸೃಷ್ಟಿಯ ನೀಲನಕ್ಷೆಯ ತಯಾರಕರಾಗಿದ್ದಾರೆ. ಅವರು ಸ್ವರ್ಗದ ಶಿಲ್ಪಿ. ಋಗ್ವೇದದ ಪ್ರಕಾರ ವಿಶ್ವದ ವಾಸ್ತುಶಿಲ್ಪಿಗಳೇ ವಿಶ್ವಕರ್ಮರು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಮಾತನಾಡಿ, ಸರ್ಕಾರದ ಆದೇಶದಂತೆ 2017ರಿಂದ ವಿಶ್ವಕರ್ಮ ಜಯಂತಿ ಆಚರಿಸಲಾಗುತ್ತಿದೆ. ಕಲೆಯನ್ನು ಶಿಲೆಯಲ್ಲಿ ಸೃಷ್ಟಿಸಿದವರೇ ವಿಶ್ವಕರ್ಮರು. ಸಿವಿಲ್‌, ಕಟ್ಟಿಗೆ ಕಾಮಗಾರಿ, ವಾಸ್ತುಶಿಲ್ಪಗಳನ್ನು ಮಾಡುವವರು ಅನ್ನದಾತ ನಿಗೆ ನೇಗಿಲು ತಯಾರು ಮಾಡುವವರೇ ವಿಶ್ವ ಕರ್ಮರು ಎಂದರು.

ಶಿಕ್ಷಕ ವಿಶ್ವನಾಥ ಕಮ್ಮಾರ ಮಾತನಾಡಿ, ವಿಶ್ವಕರ್ಮರು ಕಾಯಕ ಯೋಗಿ ಗಳು. ದೇವಾನುದೇವತೆಗಳ ಅರಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿದವರಾಗಿ ದ್ದಾರೆ. ಮಹಾಭಾರತ ಕಾಲದಲ್ಲಿ ಶಿಲ್ಪಶಾಸ್ತ್ರ ಮತ್ತು ಯಂತ್ರಶಾಸ್ತ್ರ ಜಗತ್ತಿಗೆ ಕೊಟ್ಟವೇ ವಿಶ್ವಕರ್ಮರು. ತ್ರೇತಾಯುಗದಲ್ಲಿ ಲಂಕಾ ಪಟ್ಟಣ ನಿರ್ಮಾಣ ಮಾಡಿದವರು. ಕೃಷ್ಣ ಪರಮಾತ್ಮನಿಗೆ ದ್ವಾರಕಾನಗರ, ಪಾಂಡವರಿಗೆ ಇಂದ್ರಪ್ರಸ್ತ, ಕೌರವರಿಗೆ ಹಸ್ತಿನಾಪುರ ನಿರ್ಮಾಣ ಮಾಡಿದವರೇ ವಿಶ್ವಕರ್ಮರಾಗಿದ್ದಾರೆ ಎಂದರು.

Advertisement

ಇದೇ ಸಂದರ್ಭದಲ್ಲಿ ಕರ್ನಾಟಕ ಬಯಲು ಅಕಾಡೆಮಿಯ ಹಿರಿಯ ಕಲಾವಿದ ಅಶೋಕ ಸುತಾರ ಅವರನ್ನು ಸನ್ಮಾನಿಸಲಾಯಿತು.

ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ, ಜಿಲ್ಲಾ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ರಾಮಣ್ಣ ಕಮ್ಮಾರ, ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್‌.ಡಿ. ಕಡ್ಲಿಕೊಪ್ಪ, ವಿಶ್ವಕರ್ಮರ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಮೌನೇಶ ಬಡಿಗೇರ, ಮುಖಂಡರಾದ ಶಿವಲೀಲಾ ಬಡಿಗೇರ, ನೇತ್ರಾವತಿ ಬಡಿಗೇರ, ಕೆ.ಎಸ್‌. ಬಡಿಗೇರ, ಸುರೇಶ ಗುಂಜಿಹಾಳ, ಶಂಕರ ಕಂಚಗಾರ, ಎನ್‌.ಎ. ಪತ್ತಾರ, ಮಹೇಶ ಕಮ್ಮಾರ, ಆನಂದ ಕಮ್ಮಾರ, ಎಸ್‌.ಎಂ. ಕದಡಿ, ಎಸ್‌.ವಿ. ಗುಂಜಿಹಾಳ, ಸಿ.ವಿ. ಬಡಿಗೇರ ಸೇರಿದಂತೆ ಅನೇಕರು ಹಾಜರಿದ್ದರು.

ವೆಂಕಟೇಶ ಅಲ್ಕೋಡ ಹಾಗೂ ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು. ಬಾಹುಬಲಿ ಜೈನರ ಸ್ವಾಗತಿಸಿ, ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ. ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next