ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥರು ಅಸ್ತಂಗತರಾದ ಬಳಿಕ ಅವರ ಎಲ್ಲ ಹೊಣೆಗಾರಿಕೆಗಳು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಹೆಗಲೇರಿವೆ. ರವಿವಾರ ಅವರ ಪಾಠ ಪ್ರವಚನಗಳಿಗೆ ಹಿರಿಯ ಶ್ರೀಪಾದರು ಅಸ್ತು ಎಂದಂಥ ಘಟನೆಯೊಂದು ನಡೆದಿದೆ.
ಹಿರಿಯ ಶ್ರೀಪಾದರು ಎಲ್ಲಿಗೆ ಪಾಠ ನಿಲ್ಲಿಸಿದ್ದಾರೋ ಅಲ್ಲಿಂದ ಆರಂಭಿಸಲು ಶ್ರೀ ವಿಶ್ವಪ್ರಸನ್ನತೀರ್ಥರು ನಿರ್ಧರಿಸಿ, ರವಿವಾರ ರಾತ್ರಿ ಉಡುಪಿ ಪೇಜಾವರ ಮಠದಲ್ಲಿ ಹಿರಿಯರು ಕುಳಿತು ಪಾಠ ಮಾಡುತ್ತಿದ್ದ ಕೋಣೆಯಲ್ಲಿ ಪಾಠವನ್ನು ಆರಂಭಿಸಿದರು.
ಹಿರಿಯ ಸ್ವಾಮೀಜಿಯವರದೇ ಶೈಲಿಯಲ್ಲಿ ಪಾಠ ಮಾಡಿದರು. ಕೋಣೆಯ ಗೋಡೆ ಮೇಲೆ ಹಿರಿಯ ಸ್ವಾಮೀಜಿಯವರ ಭಾವಚಿತ್ರದ ಮೇಲೆ ಹಾರವಿತ್ತು. ಆ ಹಾರ ಫ್ಯಾನ್ ಗಾಳಿಯಿಂದಾಗಿ ಪಾಠ ಮಾಡುವಲ್ಲಿಗೆ ಬಿತ್ತು.
“ಹೇಗೆ ನಡೆಯಿತು ಗೊತ್ತಿಲ್ಲ. ಘಟನೆಯಂತೂ ನಡೆಯಿತು’ ಎನ್ನು ತ್ತಾರೆ ವಿದ್ಯಾರ್ಥಿಗಳಲ್ಲೊಬ್ಬರಾದ ಸುಧೀಂದ್ರ. ಶ್ರೀ ವಿಶ್ವಪ್ರಸನ್ನತೀರ್ಥರ ಅಭಿಪ್ರಾಯ ಕೇಳಿ ದಾಗ, “ನಾನೂ ಹಾರವನ್ನು ನೋಡಿರಲಿಲ್ಲ. ಅದು ಬಿದ್ದ ಅನಂತರ ವಿದ್ಯಾರ್ಥಿಗಳು ಎಲ್ಲಿಂದ ಬಿತ್ತು ಎಂದು ತೋರಿಸಿದರು’ ಎಂದು ತಿಳಿಸಿದರು.