Advertisement

2.75 ಲಕ್ಷ ಹಳ್ಳಿಗಳಲ್ಲಿ ರಾಮನ ವಿಗ್ರಹ ಸ್ಥಾಪನೆ: ವಿಎಚ್‌ಪಿ

11:21 AM Jan 05, 2020 | Hari Prasad |

ಲಕ್ನೋ: ದೇಶಾದ್ಯಂತ 2.75 ಲಕ್ಷ ಹಳ್ಳಿಗಳಲ್ಲಿ ಶ್ರೀರಾಮನ ವಿಗ್ರಹ ಸ್ಥಾಪಿಸಲು ವಿಶ್ವ ಹಿಂದೂ ಪರಿಷತ್‌ ಯೋಜನೆ ರೂಪಿಸಿದೆ. ಮಾ.25ರಿಂದ (ಹಿಂದೂ ಸಂಪ್ರದಾಯದಂತೆ ಹೊಸ ವರ್ಷ) ಏ.8 (ರಾಮನವಮಿ)ರವರೆಗೆ ವಿಎಚ್‌ಪಿ ಕಾರ್ಯಕರ್ತರು ಹಳ್ಳಿಗಳಿಗೆ ತೆರಳಿ, ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಲು ಮನವೊಲಿಸಬೇಕು ಎಂದು ಪರಿಷತ್‌ ಮುಖಂಡರು ತಿಳಿಸಿದ್ದಾರೆ.

Advertisement

90ರ ದಶಕದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಚಳವಳಿ ರೀತಿಯಲ್ಲಿಯೇ ಎರಡು ತಿಂಗಳು ಕಾಲ ‘ರಾಮೋತ್ಸವ’ ನಡೆಸಲಾಗುವುದು ಎಂದು ವಿಎಚ್‌ಪಿ ವಕ್ತಾರ ವಿನೋದ್‌ ಬನ್ಸಾಲ್‌ ತಿಳಿಸಿದ್ದಾರೆ.

ಅಂದು ಮಂದಿರ ನಿರ್ಮಾಣಕ್ಕೆ ಇಟ್ಟಿಗೆ ದಾನ ಮಾಡಿದ್ದ ಕುಟುಂಬಗಳಲ್ಲಿ ರಾಮನ ವಿಗ್ರಹ ಅಳವಡಿಸಿಕೊಳ್ಳುವಂತೆ ಕಾರ್ಯಕರ್ತರು ಜಾಗೃತಿ ಮೂಡಿಸಲಿದ್ದಾರೆ. ಇದೇ ವೇಳೆ, ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next