ಬೆಳಗಾವಿ: ತಮ್ಮ ಜಾತ್ಯತೀತ, ಸಮಾನತೆ ತತ್ವಗಳಿಂದ ದೇಶ-ವಿದೇಶಗಳಲ್ಲಿ ಖ್ಯಾತಿ ಹೊಂದಿ ವಿಶ್ವಮಾನವ ಎಂಬ ಹೆಗ್ಗಳಿಕೆಗೆ ಪಾತ್ರರಾದ ವಿಶ್ವಗುರು ಬಸವಣ್ಣನವರು ಯಾವುದೇ ಜಾತಿ, ಧರ್ಮ, ಪಂಥಗಳ ಸ್ವತ್ತಲ್ಲ ಎಂದು ಉಪನ್ಯಾಸಕ ಎಂ.ಕೆ. ಮಾರದ ಹೇಳಿದರು.
ನಗರದ ಶ್ರೀ ಅಯ್ಯಪ್ಪ ಮಂದಿರದಲ್ಲಿ ರರವಿವಾರ ನಡೆದ ವಾರದ ಸತ್ಸಂಗ ವಚನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದುದೆ„ìವ ಎಂಬಂತೆ ಕೆಲವರು ಬಸವಣ್ಣನವರನ್ನು ಒಂದು ಜಾತಿಗೆ ಸೀಮಿತಗೊಳಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಗದೀಶ ಬಾಗನವರ, ಬಾಳಪ್ಪ ಮಳಗಲಿ, ಬೋರಪ್ಪ ಹಳ್ಳೂರಿ, ಹಿರೇಮಠ ಸ್ವಾಮೀಜಿ ಉಪಸ್ಥಿತರಿದ್ದರು. ನಂತರ ಅಪ್ಪಾಜಿ ಸಂಗೀತ ಬಳಗದಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಇದನ್ನೂ ಓದಿ:ಭೋಸರ ಮಾತಲ್ಲಿತ್ತು ದೇಶಪ್ರೇಮದ ಕಿಚ್ಚು: ಸುಬ್ರಹ್ಮಣ್ಯ
ಶಂಕರ ಬೇವಿನಗಿಡದ ಹಾರ್ಮೋನಿಯಂ ಹಾಗೂಶರಣಪ್ಪ ಗೊಂಗಡ ಶೆಟ್ಟರ ತಬಲಾ ಸಾಥ್ ನೀಡಿದರು. ಅನುರಾಧ, ಅಶ್ವಿನಿ, ಅಪೂರ್ವ ಅಸೋದೆ, ಅರುಣ ಬಿಸೋರೆ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗೋಪಾಲ ಖಟಾವಕರ ನಿರೂಪಿಸಿದರು. ಮಲ್ಲಿಕಾರ್ಜುನ ಶಿರಗುಪ್ಪಿ ಶೆಟ್ಟರ ಪ್ರಾಸ್ತಾವಿಕ ಮಾತನಾಡಿದರು. ರಮೇಶ ಪೋತದಾರ ವಂದಿಸಿದರು.