Advertisement

ವಿಶ್ವಬ್ರಾಹ್ಮಣ ಯುವ ಸಂಘಟನೆ ಕಾಪು : ಡಿ.18ಕ್ಕೆ 14 ಜೋಡಿಗೆ ಶಾಸ್ತ್ರೋಕ್ತ ಸಾಮೂಹಿಕ ವಿವಾಹ

06:18 PM Dec 15, 2022 | Team Udayavani |

ಕಟಪಾಡಿ: ವಿಶ್ವಬ್ರಾಹ್ಮಣ ಯುವ ಸಂಘಟನೆ ರಿ. ಕಾಪುವಿಧಾನ ಸಭಾ ಕ್ಷೇತ್ರದ ವತಿಯಿಂದ 3ನೇ ಬಾರಿಗೆ 14 ಪ್ರತ್ಯೇಕ ಮಂಟಪದಲ್ಲಿ ಸ್ವಸಮಾಜದ 14 ಜೋಡಿಗೆ ಶಾಸ್ತ್ರೋಕ್ತ ಸಾಮೂಹಿಕ ವಿವಾಹವು ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ಡಿ.18ರಂದು ನಡೆಯಲಿದೆ.

Advertisement

ಸಂಘಟನೆಯ ಮಹಾಪೋಷಕ ಯೋಗೀಶ್‌ ಆಚಾರ್ಯ ಅಲೆವೂರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ಸುಮಾರು 15 ಲಕ್ಷ ರೂ. ವೆಚ್ಚಲ್ಲಿ 7 ಸಾವಿರ ಮಂದಿಯ ಪಾಲ್ಗೊಳ್ಳುವಿಕೆಯಲ್ಲಿ ಈ ಸಾಮೂಹಿಕ ವಿವಾಹ ಅದ್ದೂರಿಯಾಗಿ ನಡೆಯಲಿದ್ದು, ವಧು-ವರರಿಗೆ ಪಟ್ಟೆ ಸೀರೆ, ಬಂಗಾರದ ತಾಳಿ, ಪಟ್ಟೆ, ಶಾಲು, ಪೇಟ, ಬಾಸಿಂಗ ನೀಡಿ ಶ್ರೀದೇವಳದ ಗರ್ಭಗುಡಿಯ ಹೊರ ಆವರಣದಲ್ಲಿ 14 ಜೋಡಿಗಳಿಗೆ ಪ್ರತ್ಯೇಕ ಮಂಟಪಗಳಲ್ಲಿ ವರನ ಸ್ವಾಗತದಿಂದ ಹಿಡಿದು ವಧುವನ್ನು ವರನ ಕಡೆಗೆ ಕಳುಹಿಸುವರೆಗೂ ಶಾಸ್ತ್ರೋಕ್ತವಾಗಿಯೇ ಜರಗಲಿದೆ.

ಪರಮ ಪೂಜ್ಯ ಜಗದ್ಗುರುಗಳಾದ ಉಡುಪಿ ಕಟಪಾಡಿಯ ಶ್ರೀಮತ್‌ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಹಾಗೂ ಹಾಸನ ಅರೆಮಾದನ ಹಳ್ಳಿ ಶ್ರೀ ಸುಜ್ಞಾನ ಪ್ರಭು ಪೀಠ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ದಿವ್ಯಉಪಸ್ಥಿತರಿದ್ದು ಆಶೀರ್ವಚನ ನೀಡಲಿದ್ದಾರೆ ಎಂದರು.

ವಿಶ್ವಬ್ರಾಹ್ಮಣ ಯುವ ಸಂಘಟನೆ ರಿ. ಕಾಪು ವಿಧಾನಸಭಾಕ್ಷೇತ್ರ ಅಧ್ಯಕ್ಷ ಸುಧಾಕರ ಆಚಾರ್ಯ ಬಿಳಿಯಾರು, ಪ್ರಧಾನ ಕಾರ್ಯದರ್ಶಿ ರತ್ನಾಕರ ಕುರ್ಕಾಲು, ಉಪಾಧ್ಯಕ್ಷ ವಿಜಯ ಆಚಾರ್ಯ ಪಡುಬಿದ್ರಿ ಹೆಚ್ಚಿನ ಮಾಹಿತಿಯನ್ನು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next