ಮುಂಬಯಿ: ಶ್ರೀ ಬಾರ್ಕೂರು ಮಹಾ ಸಂಸ್ಥಾನಮ್ ಮುಂಬಯಿ ಘಟಕದ ಆಶ್ರಯದಲ್ಲಿ ಮುಂಬಯಿ ಭಕ್ತಾಭಿಮಾನಿಗಳ ಆಪೇಕ್ಷೆಯಂತೆ ಶ್ರೀನಿವಾಸ ಕಲ್ಯಾಣೋತ್ಸವ ಸಂಭ್ರಮವು ಕಳೆದ ವರ್ಷದಂತೆ ಈ ಬಾರಿಯೂ ಆ. 4 ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ವಿಜೃಂಭಣೆಯಿಂದ ಜರಗಿತು.
ಬಾಕೂìರು ಸಂಸ್ಥಾನದ ಶ್ರೀ ವಿದ್ಯಾವಾಚಸ್ಪತಿ ಡಾ| ವಿಶ್ವಭಾರತಿ ಶ್ರೀಪಾದರನ್ನು ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಮುಂಬಯಿ ಘಟಕದ ಅಧ್ಯಕ್ಷ ಡಾ| ಸತ್ಯಪ್ರಕಾಶ್ ಎಸ್. ಶೆಟ್ಟಿ ಮತ್ತು ಡಾ| ಸಂಗೀತಾ ಶೆಟ್ಟಿ ದಂಪತಿ ಗುರುವಂದನೆ ಸಲ್ಲಿಸಿದರು. ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರ ನೇತೃತ್ವದಲ್ಲಿ ಸಂಘದ ವತಿಯಿಂದ ಶ್ರೀಗಳಿಗೆ ಗುರುವಂದನೆ ಸಲ್ಲಿಸಲಾಯಿತು. ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಾಕೂìರು ಮಹಾ ಸಂಸ್ಥಾನದ ವಿಶ್ವಸ್ತ ಹಾಗೂ ಮುಂಬಯಿ ಘಟಕದ ಅಧ್ಯಕ್ಷ ಡಾ| ಸತ್ಯಪ್ರಕಾಶ್ ಎಸ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಲ್ ಕಾರ್ಗೋ ಲಾಜಿಸ್ಟಿಕ್ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಶಶಿಕಿರಣ್ ಶೆಟ್ಟಿ, ಗೌರವ ಅತಿಥಿಗಳಾಗಿ ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಭವಾನಿ ಶಿಪ್ಪಿಂಗ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೆ. ಡಿ. ಶೆಟ್ಟಿ, ಹೊಟೇಲ್ ಕೃಷ್ಣ ಪ್ಯಾಲೇಸ್ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೃಷ್ಣ ವೈ. ಶೆಟ್ಟಿ, ಬೋಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ನ್ಯಾಯವಾದಿ ಸುಭಾಷ್ ಶೆಟ್ಟಿ, ಬಂಟರ ಸಂಘ ಪುಣೆ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಕುರ್ಕಿಲ್‌ಬೆಟ್ಟು, ಬಂಟ್ಸ್ ನ್ಯಾಯ ಮಂಡಳಿ ಮುಂಬಯಿ ಅಧ್ಯಕ್ಷ ರವೀಂದ್ರ ಎಂ. ಅರಸ, ಕಾಂದಿವಲಿ ಹೊಟೇಲ್ ಅವೆನ್ಯೂ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ರಘುರಾಮ ಶೆಟ್ಟಿ, ಬಾಕೂìರು ಮಹಾಸಂಸ್ಥಾನದ ಮುಂಬಯಿ ಘಟಕದ ವಿಶ್ವಸ್ಥ ಭಾಸ್ಕರ ಎಂ. ಶೆಟ್ಟಿ, ಉಪಾಧ್ಯಕ್ಷರುಗಳಾದ ಅಪ್ಪಣ್ಣ ಎಂ. ಶೆಟ್ಟಿ, ರಮೇಶ್ ಎಸ್. ಶೆಟ್ಟಿ ಅವರು ಉಪಸ್ಥಿತರಿದ್ದರು.
ಬಾಕೂìರು ಸಂಸ್ಥಾನದ ಮುಂಬಯಿ ಘಟಕದ ಗೌರವಾಧ್ಯಕ್ಷ ಸಿಎ ಶಂಕರ್ ಬಿ. ಶೆಟ್ಟಿ, ಬಾಕೂìರು ಸಂಸ್ಥಾನದ ಮುಂಬಯಿ ಘಟಕದ ಉಪಾಧ್ಯಕ್ಷರುಗಳಾದ ಎಸ್. ಬಿ. ಶೆಟ್ಟಿ, ಮಹೇಶ್ ಶೆಟ್ಟಿ, ಗೌರವ ಕೋಶಾಧಿಕಾರಿ ಶಾಂತಾರಾಮ ಬಿ. ಶೆಟ್ಟಿ, ಜತೆ ಕಾರ್ಯದರ್ಶಿ ಕಾಡೂರು ಸದಾಶಿವ ಶೆಟ್ಟಿ, ಜೊತೆ ಕೋಶಾಧಿಕಾರಿ ವೇಣುಗೋಪಾಲ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆಯರುಗಳಾದ ಲತಾ ಜೆ. ಶೆಟ್ಟಿ, ಸುಲೋಚನಾ ಶೆಟ್ಟಿ, ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರುಗಳಾದ ಭಾಸ್ಕರ್ ಎಂ. ಶೆಟ್ಟಿ ಥಾಣೆ, ಎಸ್. ಬಿ. ಶೆಟ್ಟಿ ಮುಲುಂಡ್, ಸುಬ್ಬಯ್ಯ ಶೆಟ್ಟಿ ಕಲ್ಯಾಣ್-ಭಿವಂಡಿ, ದಿವಾಕರ ಶೆಟ್ಟಿ ಇಂದ್ರಾಳಿ ಡೊಂಬಿವಲಿ, ರಮೇಶ್ ಶೆಟ್ಟಿ ಸಿಬಿಡಿ ನವಿಮುಂಬಯಿ, ಅಪ್ಪಣ್ಣ ಎಂ. ಶೆಟ್ಟಿ ಪೊವಾಯಿ, ನ್ಯಾಯವಾದಿ ಡಿ. ಕೆ. ಶೆಟ್ಟಿ ಅಂಧೇರಿ, ಶ್ರೀಧರ ಶೆಟ್ಟಿ ಚೆಂಬೂರು, ಕೃಷ್ಣ ವಿ. ಶೆಟ್ಟಿ ಸಿಟಿ ರೀಜನ್, ಭಾಸ್ಕರ ಕೆ. ಶೆಟ್ಟಿ ಮೀರಾರೋಡ್, ಮುಂಡಪ್ಪ ಪಯ್ಯಡೆ ಜೋಗೇಶ್ವರಿ, ಹರೀಶ್ ಶೆಟ್ಟಿ ಗುರ್ಮೆ ನಲಸೋಪರ, ಭುಜಂಗ ಶೆಟ್ಟಿ ಬೊಯಿಸರ್ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ವಿಶೇಷ ಆಹ್ವಾನಿತರುಗಳಾಗಿ ಎಂ. ಡಿ. ಶೆಟ್ಟಿ, ನ್ಯಾಯವಾದಿ ಆರ್. ಸಿ. ಶೆಟ್ಟಿ, ಬಿ. ವಿವೇಕ್ ಶೆಟ್ಟಿ, ಸುಧಾಕರ ಎಸ್. ಹೆಗ್ಡೆ, ಡಾ| ಪಿ. ವಿ. ಶೆಟ್ಟಿ, ಜಯರಾಮ ಎಸ್. ಮಲ್ಲಿ, ಶಿವರಾಮ ಜಿ. ಶೆಟ್ಟಿ, ವಿರಾರ್ ಶಂಕರ್ ಶೆಟ್ಟಿ, ಕುಶಲ್ ಸಿ. ಭಂಡಾರಿ, ಎಚ್. ಪ್ರಕಾಶ್ಚಂದ್ರ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಜಯರಾಮ್ ಎನ್. ಶೆಟ್ಟಿ, ರತ್ನಾಕರ ಶೆಟ್ಟಿ ಮುಂಡ್ಕೂರು, ಕೆ. ಸಿ. ಶೆಟ್ಟಿ, ಸದಾನಂದ ಶೆಟ್ಟಿ, ಚಿತ್ತರಂಜನ್ ಶೆಟ್ಟಿ, ಶಾಂತಾರಾಮ ಶೆಟ್ಟಿ, ಸಂಜೀವ ಎನ್. ಶೆಟ್ಟಿ, ಬಿ. ಬಾಲಕೃಷ್ಣ ಶೆಟ್ಟಿ, ನ್ಯಾಯವಾದಿ ರತ್ನಾಕರ ಶೆಟ್ಟಿ, ಪ್ರಭಾಕರ ಎಲ್. ಶೆಟ್ಟಿ, ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ, ಸಲಹಾ ಸಮಿತಿಯ ಜಯಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.
ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು