Advertisement

Udupi; ಜಯಂತ ಕಾಯ್ಕಿಣಿಗೆ “ವಿಶ್ವಪ್ರಭಾ ಪುರಸ್ಕಾರ’

11:55 PM Jan 24, 2024 | Team Udayavani |

ಉಡುಪಿ: ಎಂಜಿಎಂ ಕಾಲೇಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವತಿಯಿಂದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯುತ್ತಿರುವ ಸಂಸ್ಕೃತಿ ಉತ್ಸವದಲ್ಲಿ ಬುಧವಾರ ಕನ್ನಡದ ಪ್ರಸಿದ್ಧ ಸಾಹಿತಿ ಜಯಂತ ಕಾಯ್ಕಿಣಿ ಅವರಿಗೆ ಪ್ರಭಾವತಿ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ “ವಿಶ್ವಪ್ರಭಾ ಪುರಸ್ಕಾರ-2024′ ಪ್ರದಾನ ಮಾಡಲಾಯಿತು.

Advertisement

ಪ್ರಶಸ್ತಿ ಸ್ವೀಕರಿಸಿದ ಅವರು ಮಾತನಾಡಿ, ಕರಾವಳಿಯಲ್ಲಿ ಎಲ್ಲ ಕಾರ್ಯಕ್ರಮಗಳೂ ವೈಭವದಿಂದ ನಡೆಯುತ್ತವೆ. ಮನುಷ್ಯರಿಗೆ ಮನುಷ್ಯರೇ ಬೇಡವಾಗಿರುವುದು ಒಂದು ಶಾಪ. ಕಲೆ ಸಂಯುಕ್ತ ವಿಕಸನದ ಮಾರ್ಗವಾಗಿದೆ. ಕಲೆ ಎಲ್ಲರನ್ನೂ ಒಂದುಗೂಡಿಸುವ ಮಾಧ್ಯಮವಾಗಿದೆ. ಸಾಹಿತ್ಯ, ಶಿಕ್ಷಣ ಜ್ಞಾನವರ್ಧನೆಗೆ ಪೂರಕವಾಗಿದೆ ಎಂದರು.

ಸಾಹಿತಿ ಪ್ರೊ| ಕೆ.ಪಿ. ರಾವ್‌ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ| ಕಾತ್ಯಾಯಿನಿ ಕುಂಜಿಬೆಟ್ಟು ಅಭಿನಂದನ ಭಾಷಣಗೈದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ ಶೆಣೈ, ಪ್ರಭಾ ಶೆಣೈ, ಅಧ್ಯಕ್ಷ ಪ್ರೊ| ಶಂಕರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಹರಿಶ್ಚಂದ್ರ ಉಪಸ್ಥಿತರಿದ್ದರು.

ವಿಶ್ವಪ್ರಭಾ ಪುರಸ್ಕಾರ ಸಮಿತಿ ಸಂಚಾಲಕ ನಾಗರಾಜ್‌ ಹೆಬ್ಟಾರ್‌ ಪ್ರಸ್ತಾವನೆಗೈದರು. ಸಂಚಾಲಕ ರವಿರಾಜ್‌ ಎಚ್‌.ಪಿ. ಸ್ವಾಗತಿಸಿ, ಶಿಲ್ಪಾ ಜೋಷಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next