Advertisement

ದೇವರನಾಡು ಕೇರಳದಲ್ಲಿಂದು ‘ವಿಷು ಹಬ್ಬದ’ ಸಂಭ್ರಮ

08:08 PM Apr 13, 2021 | Team Udayavani |

ಕರ್ನಾಟಕದಲ್ಲಿ ಹಿಂದೂಗಳಿಗೆ ಯುಗಾದಿ ಹೊಸ ವರ್ಷವಾದರೆ, ಮಲಯಾಳಂ ಕ್ಯಾಲೆಂಡರ್ ಪ್ರಕಾರ ಕೇರಳದಲ್ಲಿ ವಿಷು ಹಬ್ಬವನ್ನು ಹೊಸ ವರ್ಷವಾಗಿ ಆಚರಿಸುತ್ತಾರೆ. ಇದನ್ನು ಸೌರಮಾನ ಯುಗಾದಿ ಎಂದೂ ಕೂಡ ಕರೆಯುತ್ತಾರೆ.

Advertisement

ದೇವರನಾಡು ಕೇರಳದಲ್ಲಿ ಇಂದು (ಏಪ್ರಿಲ್ 14) ವಿಷು ಹಬ್ಬದ ಸಂಭ್ರಮ. ವಿಷು ಆಚರಣೆಗೂ ಒಂದು ದಿನದ ಮೊದಲು ಅಥವಾ ವಿಷು ಆಚರಣೆ ದಿನದ ಬೆಳಗಿನ ಜಾವ ಕೃಷ್ಣನ ವಿಗ್ರಹವನ್ನಿಟ್ಟು ಅದರ ಸುತ್ತಲೂ ಧಾನ್ಯಗಳು, ಸೌತೆಕಾಯಿ, ಕುಂಬಳಕಾಯಿ, ತೆಂಗಿನಕಾಯಿ, ಮಾವಿನ ಹಣ್ಣು, ಹಲಸಿನ ಹಣ್ಣು ಸೇರಿದಂತೆ ಹಲವು ಬಗೆಯ ಹಣ್ಣು, ತರಕಾರಿಗಳು, ಹೊನ್ನೇ ಮರದ ಹೂಗಳು, ನಾಣ್ಯಗಳು, ಹೊಸ ಬಟ್ಟೆ ಇವುಗಳೆಲ್ಲವನ್ನು “ಲೋಹ”ದ ಪಾತ್ರೆಯಲ್ಲಿರಿಸಿ ‘ವಿಷು ಕಣಿ’ ಅನ್ನು ತಯಾರಿಸುತ್ತಾರೆ.  ಕುಟುಂಬದ ಹಿರಿಯರು ಅಥವಾ ಮಹಿಳೆಯರು ಇದರ ಮುಂದೆ ದೀಪ ಬೆಳಗಿಸುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ.

ವಿಷು ಹಬ್ಬದೂಟ ಕೂಡ ಅತ್ಯಂತ ಪ್ರಮುಖವಾಗಿದೆ. ವಿಷು ಹಬ್ಬದಂದು ವಿಶೇಷ ಭಕ್ಷ್ಯ ತಯಾರಿಸಲಾಗುತ್ತದೆ. ಅದು 26 ಬಗೆಯ ವಿಭಿನ್ನ ತಿನಿಸುಗಳನ್ನು ಒಳಗೊಂಡಿದೆ.

ವಿಷು ಹಬ್ಬದ ಮಹತ್ವ :

Advertisement

ವಿಷು ಹಬ್ಬದ ಮಹತ್ವ ಸಂಸ್ಕೃತದಲ್ಲಿ ವಿಷು ಎಂದರೆ ಸಮಾನ ಎನ್ನುವ ಅರ್ಥವಿದೆ. ಇದು ದಿನದ ಅವಧಿ ಹಾಗೂ ರಾತ್ರಿ ಅವಧಿಯು ಸಮಾನವಾಗಿರುವುದು ಎಂದು ಹೇಳಲಾಗುತ್ತದೆ. ಮೇಷ ಸಂಕ್ರಮಣದಂದು ವಿಷ್ಣುವಿನ ಹಬ್ಬವನ್ನು ಹೆಚ್ಚಿನ ಮನೆಗಳಲ್ಲಿ ಆಚರಿಸಲಾಗುತ್ತದೆ. ಈ ಅವಧಿಯು ವಿಷ್ಣುವಿಗೆ ಮೀಸಲಿಡಲಾಗಿದೆ ಮತ್ತು ಈ ಹಬ್ಬವನ್ನು ವಿಷ್ಣು ಹಾಗೂ ಕೃಷ್ಣನ ಆರಾಧನೆ ಮಾಡಲು ಮೂಲಕ ಆಚರಿಸಲಾಗುತ್ತದೆ.

 

ವಿಷ್ಣು ಕನಿ :

ವಿಷು ಹಬ್ಬದ ಹಿಂದಿನ ದಿನ ರಾತ್ರಿ, ಕುಟುಂಬದ ಹಿರಿಯ ಮಹಿಳೆಯೊಬ್ಬರು ದೇವರ ಕೋಣೆಯಲ್ಲಿ ವಿಷ್ಣು ಕನಿಯನ್ನು ವಿಷ್ಣು ಅಥವಾ ಶ್ರೀಕೃಷ್ಣ ದೇವರ ಮೂರ್ತಿಯ ಮುಂದೆ ಇಡುವರು. ಮಲಯಾಳಿಗಳು ನಂಬಿಕೊಂಡು ಬಂದಿರುವ ಪ್ರಕಾರ ವಿಷ್ಣು ಕನಿಯು ತುಂಬಾ ಅದೃಷ್ಟ ಹಾಗೂ ಸಮೃದ್ಧಿಯ ಸಂಕೇತ ಆಗಿದೆ. ಮಲಯಾಳಂನಲ್ಲಿ ‘ಕನಿ’ ಎಂದರೆ ಯಾವುದನ್ನು ನಾವು ಮೊದಲು ನೋಡುತ್ತೇವೆಯೋ ಅದು. ಇದರಿಂದ ‘ವಿಷ್ಣು ಕನಿ” ಎಂದರೆ ನಾವು ದಿನದ ಆರಂಭದಲ್ಲಿ ಮೊದಲು ನೋಡಿರುವುದು ಅಥವಾ ವೀಕ್ಷಿಸಿರುವುದು. ವಿಷ್ಣು ಕನಿಯನ್ನು ಮೊದಲು ನೋಡಿದರೆ ಆಗ ಹೊಸ ವರ್ಷದಲ್ಲಿ ಸಂಪೂರ್ಣವಾಗಿ ಸಮೃದ್ಧಿ ಸಿಗುವುದು ಎಂದು ಇಲ್ಲಿಯ ಜನರ ನಂಬಿಕೆಯಾಗಿದೆ.

ವಿಷು ಕನಿಯನ್ನು ಎಲ್ಲಾ ದೇವರ ಆಶೀರ್ವಾದದಿಂದ ತಯಾರಿಸಲಾಗುತ್ತದೆ ಮತ್ತು ಇದು ತುಂಬಾ ಅದೃಷ್ಟ ಹಾಗೂ ಸಮೃದ್ಧಿ ನೀಡುವುದು. ವಿಷ್ಣು ಕನಿಯ ತಯಾರಿಕೆಯಲ್ಲಿ ತೆಂಗಿನಕಾಯಿ, ವೀಳ್ಯದೆಲೆ, ಅಡಕೆ, ಹಳದಿ ಕನಿ ಕನ್ನ ಹೂ, ಕಮ್ಮಶಿ, ಕಾಡಿಗೆ, ಅಕ್ಕಿ, ಲಿಂಬೆ, ಬಂಗಾರ ಬಣ್ಣದ ಸೌತೆಕಾಯಿ, ಹಲಸಿನ ಹಣ್ಣು, ಒಂದು ಕನ್ನಡಿ, ಧಾರ್ಮಿಕ ಪುಸ್ತಕ, ಹತ್ತಿಯ ಧೋತಿ ಮತ್ತು ನಾಣ್ಯಗಳು ಹಾಗೂ ನೋಟುಗಳು ಇರುವುದು. ಈ ಎಲ್ಲಾ ವಸ್ತುಗಳನ್ನು ಅಗಲವಾದ ಒಂದು ಪಾತ್ರೆಯಲ್ಲಿ ಹಾಕಲಾಗುತ್ತದೆ. ಇದನ್ನು ಮಲಯಾಳದಲ್ಲಿ “ಉರುಳಿ” ಎಂದು ಕರೆಯಲಾಗುತ್ತದೆ. ಗಂಟೆಯ ಆಕಾರದಲ್ಲಿ ಇರುವಂತಹ ಲೋಹದ ದೀಪವನ್ನು “ನಿಲವಿಲಕ್ಕು” ಎಂದು ಕರೆಯುವರು. ಇದರಲ್ಲಿ ದೀಪ ಹಚ್ಚಿ ವಿಷ್ಣು ಕನಿ ಜತೆಗೆ ವಿಷ್ಣುವಿನ ಮೂರ್ತಿಯ ಮುಂದೆ ಇಡಲಾಗುತ್ತದೆ. ವಿಷ್ಣು ಹಬ್ಬದಂದು ಆಚರಿಸಿಕೊಂಡು ಬಂದಿರುವಂತಹ ಸಂಪ್ರದಾಯದ ಪ್ರಕಾರ ಮನೆಯ ಪ್ರತಿಯೊಬ್ಬ ಸದಸ್ಯನು ಬೆಳಗ್ಗೆ ಬೇಗ ಎದ್ದು, ಕನ್ಣು ಮುಚ್ಚಿಕೊಂಡು ಮನೆಯ ದೇವರ ಕೋಣೆ ಬಳಿಗೆ ಹೋಗಿ ಅಲ್ಲಿ ವಿಷ್ಣು ಕನಿಯನ್ನು ಮೊದಲು ನೋಡಬೇಕು. ಯಾಕೆಂದರೆ ಹೀಗೆ ಮಾಡುವ ಪರಿಣಾಮ ವರ್ಷವಿಡಿ ಅವರಿಗೆ ಒಳ್ಳೆಯ ಅದೃಷ್ಟ ಮತ್ತು ಸಮೃದ್ಧಿ ಸಿಗುವುದು. ಇದರಿಂದಾಗಿ ವಿಷ್ಣು ಕನಿಯನ್ನು ತುಂಬಾ ಎಚ್ಚರಿಕೆಯಿಂದ ಇಡಲಾಗುತ್ತದೆ ಮತ್ತು ಧನಾತ್ಮಕತೆ ಉಂಟಾಗುವಂತೆ ಇದನ್ನು ರಚಿಸಲಾಗುತ್ತದೆ.

ವಿಷು ಕನಿಯನ್ನು ನೋಡಿದ ಬಳಿಕ ರಾಮಾಯಣದಲ್ಲಿ ಇರುವಂತಹ ಕೆಲವೊಂದು ಶ್ಲೋಕಗಳನ್ನು ಪಠಿಸಲಾಗುತ್ತದೆ. ಇದು ತುಂಬಾ ಪವಿತ್ರ ಎಂದು ಪರಿಗಣಿಸಲಾಗಿದೆ. ರಾಮಾಯಣದ ಮೊದಲ ಪುಟವನ್ನು ತೆರೆಯುವುದರಿಂದ ಅದು ಭಕ್ತರ ಮೇಲೆ ಮುಂಬರುವ ವರ್ಷದಲ್ಲಿ ತುಂಬಾ ಗಾಢ ಪರಿಣಾಮ ಬೀರುತ್ತದೆ ಎಂದು ಮಲಯಾಳಿಗಳು ನಂಬಿದ್ದಾರೆ. ಇದರ ಬಳಿಕ ಮನೆಯ ಹಿರಿಯರು ಹಾಗೂ ಕಿರಿಯರು ಸೇರಿಕೊಂಡು ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿಸುವರು. ಇದು ಬೆಳಗ್ಗಿನಿಂದ ರಾತ್ರಿ ತನಕ ನಡೆಯುವುದು. ಇದನ್ನು ವಿಷ್ಣು ಪದ್ದಕಮ್” ಅಥವಾ ಪಟಾಕಿ ಸಿಡುವುದು ಎಂದು ಕರೆಯಲಾಗುತ್ತದೆ. ಇದು ಈ ಹಬ್ಬದ ತುಂಬಾ ಪ್ರಾಮುಖ್ಯವಾದ ಅಂಶವಾಗಿದೆ. ಇದರ ಬಳಿಕ ವಿಷ್ಣು ಸಾಧ್ಯ” ಎನ್ನುವುದು ಕೂಡ ನಡೆಯುವುದು.

Advertisement

Udayavani is now on Telegram. Click here to join our channel and stay updated with the latest news.

Next