Advertisement

ಸರ್ಕಾರದಿಂದಲೇ ವಿಷ್ಣುವರ್ಧನ್‌ ಜಯಂತಿ ಆಚರಣೆಗೆ ಒತ್ತಾಯ

01:23 PM Dec 31, 2020 | Team Udayavani |

ಮೈಸೂರು: ಡಾ.ವಿಷ್ಣುವರ್ಧನ್‌ 11ನೇ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಕರುಣಾಮಯಿ ವಿಷ್ಣು ಅಭಿ ಮಾನಿಗಳ ಬಳಗ, ವಿಷ್ಣು ಸೇನಾ ಸಮಿತಿ, ಗಾಂಧಿವೃತ್ತ ಸಂಘದ ವತಿಯಿಂದ ವಿಷ್ಣುವರ್ಧನ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೇರು ನಟನನ್ನು ಸ್ಮರಿಸಲಾಯಿತು. ಬುಧವಾರ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯ ವಿಷ್ಣುವರ್ಧನ್‌ ಉದ್ಯಾವನದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಈ ವೇಳೆ ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌ ಮಾತನಾಡಿ, ವಿಷ್ಣುವರ್ಧನ್‌ ಕನ್ನಡ ಚಿತ್ರರಂಗದ ಮೇರುನಟ. ಅವರ ಪ್ರತಿ ಯೊಂದು ಚಿತ್ರಗಳು ಕೌಟುಂಬಿಕ ಪ್ರಧಾನ ಚಿತ್ರ ಗಳಾಗಿದ್ದು,
ಸಮಾಜಕ್ಕೆ ಉತ್ತಮ ಸಂದೇಶ ನೀಡು ವಂತಿದ್ದವು.  ಅನೇಕ ಕಲಾವಿದರಿಗೆ ಸ್ಫೂರ್ತಿಯಾಗಿದ್ದರು. ಅಂತಹ ಅತ್ಯುತ್ತಮ ನಟನ ಜಯಂತಿಯನ್ನು ರಾಜ್ಯ ಸರ್ಕಾರವೇ ಆಚರಣೆ ಮಾಡಬೇಕು ಎಂದು ಒತ್ತಾಯಿಸಿದರು.

Advertisement

ವಿಷ್ಣುವರ್ಧನ್‌ ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಸರಳತೆಯಲ್ಲೂ ಮಾದರಿಯಾಗಿದ್ದರು. ಹೆಣ್ಣು ಮಕ್ಕಳಿಗೆ ಅಪಾರ ಗೌರವ ನೀಡುತ್ತಿದ್ದವರು. ಅಲ್ಲದೆ ಕಷ್ಟದಲ್ಲಿದ್ದವರಿಗೆ ಸಹಾಯವನ್ನೂ ಮಾಡುತ್ತಿದ್ದರು. ಅವರೊಬ್ಬ ಅತ್ಯದ್ಬುತ ಕಲಾವಿದನಾಗಿದ್ದು, ಸರ್ಕಾರ ಅವರಿಗೆ ಗೌರವ ಸಲ್ಲಿಸುವ ಕಾರ್ಯ ಮಾಡಬೇಕು. ಅಲ್ಲದೆ ಅವರ ಹೆಸರಿನಲ್ಲಿ ಯುವ ಕಲಾವಿದರ ಪ್ರತಿಭೆ ಪ್ರೋತ್ಸಾಹಿಸಿ ಮುಖ್ಯವಾಹಿನಿಗೆ ತರಬೇಕು ಎಂದರು.

ಇದನ್ನೂ ಓದಿ:ರಾಷ್ಟ್ರೀಯ ಪಕ್ಷಗಳ ಪ್ರಭಾವದ ನಡುವೆಯೂ ಜೆಡಿಎಸ್‌ ಗಮನಾರ್ಹ ಸಾಧನೆ: ಎಚ್.ಡಿ ಕುಮಾರಸ್ವಾಮಿ

ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಎಂ.ಡಿ.ಪಾರ್ಥ ಸಾರಥಿ ಮಾತನಾಡಿ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಪಕ್ಕದ ಉದ್ಯಾನವನಕ್ಕೆ ಡಾ.ವಿಷ್ಣು ವರ್ಧನ್‌ ಹೆಸರನ್ನು ಅಧಿಕೃತವಾಗಿ ನಾಮಕರಣ ಮಾಡಿ ಅಲ್ಲಿ ವಿಷ್ಣು ಪ್ರತಿಮೆ ಸ್ಥಾಪಿಸಬೇಕೆಂದು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಪಾಲಿಕೆ ಗಮನ ಹರಿಸುತ್ತಿಲ್ಲ. ಹೀಗಾಗಿ ಕೂಡಲೇ ರಾಜ್ಯ ಸರ್ಕಾರ ಹಾಗೂ ಮಹಾನಗರಪಾಲಿಕೆ ಅವರ ಹೆಸ ರನ್ನು ಅಧಿಕೃತವಾಗಿ ನಾಮಕರಣ ಮಾಡಿ, ಪ್ರತಿಮೆ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಬಳಿಕ ಅನ್ನಸಂತರ್ಪಣೆ ಮಾಡಲಾಯಿತು. ಈ ವೇಳೆ ಸಮಾಜ ಸೇವಕ ಡಿ.ಟಿ.ಪ್ರಕಾಶ್‌, ಮಾಜಿ ಮೇಯರ್‌ ಭೈರಪ್ಪ, ನಗರಪಾಲಿಕೆ ಸದಸ್ಯ ಮಾ.ವಿ. ರಾಮಪ್ರಸಾದ್‌, ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್‌.ಎನ್‌.ರಾಜೇಶ್‌, ಲಲಿತಾದ್ರಿಪುರ ವಿಷ್ಣು ಅಭಿಮಾನಿಗಳ ಸಂಘದ ಅಧ್ಯಕ್ಷ ಬಸ ವಣ್ಣ, ಉಪಾಧ್ಯಕ್ಷ ಮಂಜು, ಮಹದೇವ್‌, ಮೈಸೂ ರಿನ ಗಾಂಧಿ ವೃತ್ತ ವಿಷ್ಣು ಸಂಘದ ಅಧ್ಯಕ್ಷ ಮುಬಾರಕ್‌, ಉಪಾಧ್ಯಕ್ಷ ವಾಲಿ ಕುಮಾರ್‌, ಬಿ.ಸುರೇಶ್‌ ಬಾಬು, ಕಡಕೊಳ ಜಗದೀಶ್‌, ಅಜಯ್‌ ಶಾಸ್ತ್ರೀ, ನವೀನ್‌, ರಂಗನಾಥ್‌, ಪ್ರಶಾಂತ್‌ ಭಾರದ್ವಾಜ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next