Advertisement

ಮಾ.29 ವಿಷ್ಣು ಪ್ರಿಯ ಟ್ರೇಲರ್: ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್‌ ನಾಯಕಿ

12:36 PM Mar 28, 2021 | Team Udayavani |

ನಿರ್ಮಾ ಪಕ ಕೆ.ಮಂಜು ಪುತ್ರ ಶ್ರೇಯಸ್‌ “ವಿಷ್ಣು ಪ್ರಿಯ’ ಎಂಬ ಚಿತ್ರ ಮಾಡುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಚಿತ್ರೀಕರಣ ಪೂರ್ಣಗೊಂಡಿದ್ದು, ಈಗ ಚಿತ್ರದ ಟ್ರೇಲರ್‌ ಬಿಡುಗಡೆಯಾಗುತ್ತಿದೆ. ಮಾರ್ಚ್‌ 29ರಂದು ಚಿತ್ರದ ಟ್ರೇಲರ್‌ ರಿಲೀಸ್‌ ಆಗಲಿದೆ.

Advertisement

ಇದೊಂದು ಇಂಟೆನ್ಸ್‌ ಲವ್‌ ಸ್ಟೋರಿಯಾಗಿದ್ದು, ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್‌ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸಿದಂತಾಗಿದೆ. ನೈಜ ಘಟನೆಯನ್ನ ಆಧರಿಸಿ ಈ ಚಿತ್ರ ತೆರೆಗೆ ಬರುತ್ತಿದೆ.

ಇದನ್ನೂ ಓದಿ:ಮಿಲನಾ ಈಗ ‘ಮಿಲಿ’: ಸ್ವಿಮ್ಮಿಂಗ್‌ ಸುತ್ತ ಸಿನಿಮಾ

ಎಲ್ಲರಿಗೂ ಗೊತ್ತಿರುವಂತೆ ನಿರ್ಮಾಪಕ ಕೆ.ಮಂಜು, ಡಾ.ವಿಷ್ಣುವರ್ಧನ್‌ ಅವರ ದೊಡ್ಡ ಅಭಿಮಾನಿ. ಅದೇ ಕಾರಣದಿಂದ ಮಗನ ಮೊದಲ ಚಿತ್ರ “ಪಡ್ಡೆಹುಲಿ’ಯಲ್ಲೂ ವಿಷ್ಣುವರ್ಧನ್‌ ಅವರ ಸ್ಮರಣೆ ಮಾಡಿದ್ದರು.

ಈಗ ಎರಡನೇ ಚಿತ್ರಕ್ಕೂ “ವಿಷ್ಣುಪ್ರಿಯ’ ಎಂಬ ಟೈಟಲ್‌ ಇಟ್ಟು, ವಿಷ್ಣುವರ್ಧನ್‌ ಮೇಲಿನ ಅಭಿಮಾನ ಮೆರೆದಿದ್ದಾರೆ ಕೆ.ಮಂಜು. ಇನ್ನು, 25ಕ್ಕೂ ಹೆಚ್ಚು ಚಿತ್ರಗಳನ್ನು, ಹಲವು ಜಾಹೀರಾತುಗಳನ್ನು ನಿರ್ದೇಶಿಸಿರುವ ಮಲಯಾಳಂ ಮೂಲದ ನಿರ್ದೇಶಕ ವಿ.ಕೆ ಪ್ರಕಾಶ್‌, “ವಿಷ್ಣುಪ್ರಿಯ’ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next