Advertisement

ಯಶ್‌ ಕೆಜಿಎಫ್ಗೆ ವಿಶಾಲ್‌ ಸಾಥ್‌

11:54 AM Sep 19, 2018 | |

ಯಶ್‌ ನಾಯಕರಾಗಿರುವ “ಕೆ.ಜಿ.ಎಫ್’ ಚಿತ್ರ ಕೇವಲ ಕನ್ನಡವಷ್ಟೇ ಅಲ್ಲದೇ ತಮಿಳು ಹಾಗೂ ತೆಲುಗಿನಲ್ಲೂ ತಯಾರಾಗಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಚಿತ್ರ ಚಿತ್ರೀಕರಣ ಮುಗಿದಿದ್ದು, ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಈಗ ತಮಿಳು, ತೆಲುಗು ವರ್ಶನ್‌ಗೆ ತಮಿಳು ನಟ ವಿಶಾಲ್‌ ಸಾಥ್‌ ನೀಡುತ್ತಿದ್ದಾರೆ.

Advertisement

ಅದು ಹೇಗೆ ಅಂತೀರಾ, ಚಿತ್ರದ ಟ್ರೇಲರ್‌ ಹಾಗೂ ಸಿನಿಮಾ ಬಿಡುಗಡೆಯಾಗುವ ದಿನಾಂಕವನ್ನು ವಿಶಾಲ್‌ ತಮ್ಮ ಟ್ವೀಟರ್‌ ಅಕೌಂಟ್‌ನಲ್ಲಿ ಪ್ರಕಟಿಸುವ ಮೂಲಕ. ಹೌದು, ಚಿತ್ರದ ತಮಿಳು, ತೆಲುಗು ವರ್ಶನ್‌ನ ಟ್ರೇಲರ್‌ ಹಾಗೂ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂಬುದನ್ನು ವಿಶಾಲ್‌ ತಮ್ಮ ಟ್ವೀಟರ್‌ ಅಕೌಂಟ್‌ನಲ್ಲಿ ಇಂದು ಸಂಜೆ 6 ಗಂಟೆಗೆ ಪ್ರಕಟಿಸಲಿದ್ದಾರೆ.

ಇದು ತಮಿಳು, ತೆಲುಗಿನ ವಿಷಯವಾದರೆ ಕನ್ನಡ ವರ್ಶನ್‌ ರಿಲೀಸ್‌ ಡೇಟ್‌ ಅನ್ನು ಯಾರು ಪ್ರಕಟಿಸುತ್ತಾರೆಂದು ನೀವು ಕೇಳಬಹುದು. ಸದ್ಯಕ್ಕೆ ಆ ಬಗ್ಗೆ ಮಾಹಿತಿಯಿಲ್ಲ. ಆದರೆ, ಇಂದು ಸಂಜೆ ಡೇಟ್‌ ಅನೌನ್ಸ್‌ ಆಗಲಿದೆ. ಮೂಲಗಳ ಪ್ರಕಾರ, ನವೆಂಬರ್‌ 16 ರಂದು ಸಿನಿಮಾ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಯಶ್‌ ಹಾಗೂ ಶ್ರೀನಿಧಿ ಶೆಟ್ಟಿ ನಟಿಸಿದ್ದು, ಹಾಡೊಂದರಲ್ಲಿ ತಮನ್ನಾ ಹೆಜ್ಜೆ ಹಾಕಿದ್ದಾರೆ. ಪ್ರಶಾಂತ್‌ ನೀಲ್‌ ಈ ಚಿತ್ರದ ನಿರ್ದೇಶಕರು. 

Advertisement

Udayavani is now on Telegram. Click here to join our channel and stay updated with the latest news.

Next