Advertisement

Kashmir Files, ಕೇರಳ ಸ್ಟೋರಿಯಂತಹ ಸಿನಿಮಾಗಳನ್ನು ನಾನು ನೋಡಲ್ಲ: ಖ್ಯಾತ ನಿರ್ದೇಶಕ ವಿಶಾಲ್

04:46 PM Sep 23, 2023 | Team Udayavani |

ಮುಂಬಯಿ:  ಸೂಕ್ಷ್ಮ ವಿಚಾರಗಳನ್ನು ಹೇಳುವ ಸಿನಿಮಾಗಳನ್ನು ನಾನು ನೋಡಲು ಇಷ್ಟಪಡುವುದಿಲ್ಲ ಎಂದು ಬಾಲಿವುಡ್‌ ನ ಖ್ಯಾತ ನಿರ್ದೇಶಕ ವಿಶಾಲ್ ಭಾರದ್ವಾಜ್ ಹೇಳಿದ್ದಾರೆ.

Advertisement

ಬಾಲಿವುಡ್‌ ನಲ್ಲಿ ʼಓಂಕಾರʼ ,ʼಹೈದರ್ʼ, ʼ7 ಖೂನ್ ಮಾಫ್ʼ ನಂತಹ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ವಿಶಾಲ್‌ ಭಾರದ್ವಾಜ್‌ ʼಕಾಶ್ಮೀರ್‌ ಫೈಲ್ಸ್‌ʼ, ಹಾಗೂ ʼಕೇರಳ ಸ್ಟೋರಿʼ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ʼʼನಾನು ಕಾಶ್ಮೀರ್ ಫೈಲ್ಸ್ʼʼ, ದಿ ಕೇರಳ ಸ್ಟೋರಿʼ ಸಿನಿಮಾಗಳನ್ನು ನೋಡಿಲ್ಲ. ಆ ಸಿನಿಮಾಗಳ ಬಗ್ಗೆ ನಾನು ಕೇಳಿರುವ ವಿಚಾರಗಳು ನನ್ನ ಮೇಲೆ ಪ್ರಭಾವ ಬೀರುವುದು ಬೇಡ. ಈ ಸಿನಿಮಾಗಳು ಪ್ರೊಪೊಗಾಂಡ ಸಿನಿಮಾಗಳೆಂದು ನನ್ನ ಸ್ನೇಹಿತರಿಂದ ಕೇಳಿದ್ದೇನೆ. ಆದರಿಂದ ಇಂಥ ಸಿನಿಮಾಗಳಿಂದ ನಾನು ದೂರವಿರಲು ಬಯಸುತ್ತೇನೆ. ಏಕೆಂದರೆ ಇವುಗಳು ಅತ್ಯಂತ ಸೂಕ್ಷ್ಮ ವಿಚಾರಗಳಾಗಿವೆ” ಎಂದಿದ್ದಾರೆ.

“ಯಾವುದಾದರೂ ಸಿನಿಮಾಗಳಲ್ಲಿ ತುಂಬಾ ನೆಗೆಟಿವ್‌ ಅಂಶಗಳಿದ್ದರೆ ಅದರಿಂದ ನಾನು ಹೊರಗುಳಿಯುತ್ತೇನೆ. ನನಗೆ ಶಾಂತಿ ಸಾರುವ ಸಿನಿಮಾಗಳಿಷ್ಟ. ಆದುದರಿಂದ ನಾನು ಆ ಎರಡು ಸಿನಿಮಾಗಳನ್ನು ನೋಡಿಲ್ಲ” ಎಂದು ನಿರ್ದೇಶಕ ವಿಶಾಲ್‌ ಹೇಳಿದ್ದಾರೆ.

ಇದನ್ನೂ ಓದಿ: BJP-JDS ಮೈತ್ರಿ ಯಾರ “ಸಂತೋಷ”ಕ್ಕೆ?: ವಾಗ್ದಾಳಿ ವಿಡಿಯೋ ಹಂಚಿ ಕಾಂಗ್ರೆಸ್ ಟಾಂಗ್

Advertisement

“ನನ್ನ ಚಲನಚಿತ್ರ  ಸಮುದಾಯವು ಅಂತಹ ಕಥೆಗಳನ್ನು ಸೂಕ್ಷ್ಮವಾಗಿ ಪರಿಗಣಿಸಬೇಕೆಂದು ನಾನು ಬಯಸುತ್ತೇನೆ ಮತ್ತು ಅದನ್ನು ಪ್ರಚಾರವಾಗಿ ಬಳಸಬಾರದು. ಸಿನಿಮಾ ಎಂದರೆ ಅದನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು. ಜನರು ಅದನ್ನು ಸ್ವೀಕರಿಸುತ್ತಾರೆ ಮತ್ತು ನೋಡುತ್ತಿದ್ದರೆ, ಜನರು ಬದಲಾಗುತ್ತಿದ್ದಾರೆ ಎಂದು ನಾವು ಒಪ್ಪಿಕೊಳ್ಳಬೇಕು. ನಾವು ಸಮಾಜವಾಗಿ ಬದಲಾಗುತ್ತಿದ್ದೇವೆ” ಎಂದು ನಿರ್ದೇಶಕ ವಿಶಾಲ್‌ ಹೇಳಿದ್ದಾರೆ.

ವಿಶಾಲ್‌ ಅವರ “ಚಾರ್ಲಿ ಚೋಪ್ರಾ & ಸೋಲಾಂಗ್ ಮಿಸ್ಟರಿ ಸೋಲಾಂಗ್ ವ್ಯಾಲಿ” ವೆಬ್‌ ಸಿರೀಸ್‌ ಸೆ.27 ರಂದು ಸೋನಿ ಲೈವ್‌ ನಲ್ಲಿ ಸ್ಟ್ರೀಮ್‌ ಆಗಲಿದೆ ನಸೀರುದ್ದೀನ್ ಶಾ, ರತ್ನ ಪಾಠಕ್ ಷಾ, ವಿವಾನ್ ಶಾ, ಇಮಾದ್ ಶಾ, ಪ್ರಿಯಾಂಶು ಪೈನ್ಯುಲಿ, ಚಂದನ್ ರಾಯ್ ಸನ್ಯಾಲ್ ಮತ್ತು ಪಾವೊಲಿ ಡ್ಯಾಮ್ ಮುಂತಾದವರು ಇದರಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next