Advertisement

ವೇಶ್ಯಾವಾಟಿಕೆಯಲ್ಲಿ ತೊಡಗಲು ಎಂಟು ಪತ್ನಿಯರನ್ನು ಒತ್ತಾಯಿಸಿದ ಗಂಡ!

03:09 PM Apr 02, 2021 | Team Udayavani |

ಆಂಧ್ರ ಪ್ರದೇಶ: ವ್ಯಕ್ತಿಯೊಬ್ಬ ಬರೋಬ್ಬರಿ 8 ಜನ ಮಹಿಳೆಯರನ್ನು ವಿವಾಹವಾಗಿ ಆ ಬಳಿಕ ಅವರನ್ನೆಲ್ಲಾ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಳ್ಳುವಂತೆ ಹಿಂಸೆ ನೀಡಿದ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನಲ್ಲಿ ಬೆಳಕಿಗೆ ಬಂದಿದೆ.

Advertisement

ವ್ಯಕ್ತಿಯನ್ನು ಡಿ. ಅರುಣ್ ಕುಮಾರ್ (33) ಎಂದು ಗುರುತಿಸಲಾಗಿದ್ದು, ಈತ 8 ಜನ ಮಹಿಳೆಯರನ್ನು ವಿವಾಹವಾಗಿದ್ದು, ವಿವಾಹವಾದ ಕೆಲ ದಿನಗಳ ಬಳಿಕ ಅವರ ಬಳಿ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಒತ್ತಡ ಹೇರಿದ್ದು, ಇದನ್ನು ವಿರೋಧಿಸಿದ ಪತ್ನಿಯರಿಗೆ ಹಿಂಸೆ ನೀಡಿದ್ದು, ಈ ವಿಚಾರವನ್ನು ಯಾರಲ್ಲಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ.

ಈತ ಈಗಾಗಲೇ ತನ್ನ  ಎರಡು ಜನ ಪತ್ನಿಯರನ್ನು ವೇಶ್ಯಾವಾಟಿಕೆ ಜಾಲಕ್ಕೆ ಮಾರಾಟ ಮಾಡಿರುವುದಾಗಿ ವರದಿ ತಿಳಿಸಿದೆ.

ಇದನ್ನೂ ಓದಿ:ಮಂಗಳೂರಿನಲ್ಲಿ ಬಸ್ ತಡೆದು ವಿಭಿನ್ನ ಕೋಮಿನ ಜೋಡಿ ಮೇಲೆ ಹಲ್ಲೆ: ಎಂಟು ಜನರು ಪೊಲೀಸ್ ವಶಕ್ಕೆ

ಈ ಕುರಿತಾಗಿ ಆತನ ಪತ್ನಿಯರಲ್ಲಿ ಒಬ್ಬಳಾದ ಗೀತಾಂಜಲಿ ದೂರು ನೀಡಿದ್ದು, ತಾನು ತನ್ನ ಗಂಡನಿಂದ ಹಿಂಸೆಗೆ ಒಳಗಾಗಿದ್ದು ಆತ ತನ್ನನ್ನು ವೇಶ್ಯಾವಾಟಿಕೆಯಲ್ಲಿ ತೊಡಗಿಕೊಳ್ಳುವಂತೆ ಒತ್ತಾಯಿಸಿದ್ದು ಇದನ್ನು ವಿರೋಧಿಸಿದಾಗ ನನ್ನ ಮೇಲೆ ಕೊಲೆ ಬೆದರಿಕೆಯನ್ನು ಒಡ್ಡಿದ್ದಾನೆ ಎಂದಿದ್ದಾಳೆ. ಆ ಬಳಿಕ ಉಳಿದ ಪತ್ನಿಯರೂ ಕೂಡಾ ಆತನ ಕುರಿತಾಗಿ ಮಹಿಳಾ ಸಂಘಗಳಿಗೆ ದೂರು  ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮನೀಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

Advertisement

ಘಟನೆಯ ಕುರಿತಾಗಿ ಕಾಂಚರಾಪಲೆಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, DCP ಐಶ್ವರ್ಯ ರಾಸ್ತೋಗಿ ಈ ಪ್ರಕರಣವನ್ನು ಭೇದಿಸುವಲ್ಲಿ ಸ್ವತಃ ತಾವೇ ಜವಾಬ್ದಾರಿ ತೆಗೆದುಕೊಂಡಿದ್ದು, ಆರೋಪಿಯ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next