ಮೈಸೂರು: ಪುತ್ರ ಅಭಿಷೇಕ್ ಮೃತದೇಹವನ್ನು ಮೈಸೂರಿಗೆ ತರುವುದಿಲ್ಲ, ಕುಟುಂಬದವರು ಅಲ್ಲಿಗೆ ಹೋಗಿ ಕಾರ್ಯ ಮುಗಿಸಿ ಬರುತ್ತೇವೆ ಎಂದು ಅಮೆರಿಕಾದಲ್ಲಿ ಗುಂಡೇಟಿಗೆ ಬಲಿಯಾದ ಮೈಸೂರಿನ ಅಭಿಷೇಕ್ ತಂದೆ ಸುದೇಶ್ ತಿಳಿಸಿದ್ದಾರೆ.
ನನ್ನ ಮಗ ಯಾವುದೇ ದುಶ್ಚಟಗಳಿಗೆ ಒಳಗಾಗಿರಲಿಲ್ಲ. ಅವನು ತನ್ನ ಸ್ವಂತ ಬಲದ ಮೇಲೆ ನಿಲ್ಲಬೇಕೆಂಬಕಾರಣಕ್ಕಾಗಿ ಓದಿನ ಜೊತೆಗೆ ಕೆಲಸಮಾಡುತ್ತಿದ್ದ. ಕೆಲ ತಿಂಗಳ ಹಿಂದಷ್ಟೇ ನಾನುಮೂರು ವಾರಗಳ ಕಾಲ ಅವನ ಜೊತೆ ಇದ್ದುಬಂದಿದ್ದಾರೆ. ಜನವರಿಯಲ್ಲಿ ಅವನ ತಾಯಿ ಅಲ್ಲಿಗೆಹೋಗಬೇಕಿತ್ತು. ಆದರೆ, ದೇವರು ನಮಗೆ ಅನ್ಯಾಯ ಮಾಡಿಬಿಟ್ಟ. ಇಂಥ ಅನ್ಯಾಯ ಯಾವ ತಂದೆ-ತಾಯಿಗೂ ಬಾರದಿರಲಿ ಎಂದು ಮೃತ ಅಭಿಷೇಕ್‌ತಂದೆ ಸುದೇಶ್ ನೋವು ತೋಡಿಕೊಂಡರು.
ಇಂಥ ತಪ್ಪು ಮಾಡಬೇಡಿ: ನಮ್ಮಲ್ಲಿ ರಾಜಕೀಯ ಕಾರಣಗಳಿಂದಾಗಿ ಮೆರಿಟ್ ಪಡೆದವರು ಸೌಲಭ್ಯ ವಂಚಿತರಾಗಿ, ಉನ್ನತ ವ್ಯಾಸಂಗಕ್ಕೆ ಬೇರೆ ದೇಶಗಳಿಗೆ ಹೋಗುವಂತಾಗಿದೆ. ಅಲ್ಲಿ ಇಂತಹ ಘಟನೆ ಗಳು ನಡೆಯುವುದು ತಿಳಿದಿದ್ದರೂ ಅವರ ಮುಂದಿನ ಭವಿಷ್ಯಕ್ಕಾಗಿ ವಿದೇಶಗಳಿಗೆ ಕಳುಹಿಸುತ್ತಿದ್ದೇವೆ. ಮುಂದೆ ಯಾರು ಇಂತಹ ತಪ್ಪುಮಾಡಬೇಡಿ ಎಂದು ಸುದೇಶ್ ತಮ್ಮ ಅಳಲು ತೋಡಿಕೊಂಡರು.
ವೀಸಾ ವ್ಯವಸ್ಥೆ ಭರವಸೆ: ಅಮೆರಿಕಾದಲ್ಲಿಗುಂಡೇಟಿಗೆ ಬಲಿಯಾಗಿರುವ ಮೈಸೂರಿನ ಯುವಕ ಅಭಿಷೇಕ್ ಪೋಷಕರಿಗೆ ಅಮೆರಿಕಾಗೆತೆರಳಲು ವೀಸಾ ಸಮಸ್ಯೆ ಎದುರಾಗಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಮಾತನಾಡಿ, ಆದಷ್ಟು ಬೇಗ ಯುವಕನ ಪೋಷಕರು ಅಮೆರಿಕಾಗೆ ತೆರಳಲು ವ್ಯವಸ್ಥೆ ಮಾಡಿಕೊಡುವುದಾಗಿ ಆರೋಗ್ಯ ಸಚಿವಶ್ರೀರಾಮುಲು ಭರವಸೆ ನೀಡಿದರು.
ಶ್ರೀ ರಾಮುಲು ಭೇಟಿ, ಸಾಂತ್ವನ: ಕುವೆಂಪು ನಗರದಲ್ಲಿರುವ ಯುವಕನ ಮನೆಗೆ ಶನಿವಾರ ಭೇಟಿ ನೀಡಿ, ಮೃತ ಯುವಕನ ತಂದೆ ಸುದೇಶ್‌ಅವರಿಗೆ ಸಾಂತ್ವನ ಹೇಳಿದ ಸಚಿವರು, ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ದೇಶದಲ್ಲೇ ಉತ್ತಮ ಶಿಕ್ಷಣ ದೊರೆಯುತ್ತಿದ್ದರೂ ವಿದೇಶದಲ್ಲಿ ಓದುವುದು ಟ್ರೆಂಡ್ ಆಗಿದೆ. ಅಲ್ಲಿಯವರು ಆಯುಧಗಳನ್ನು ಜೊತೆಯಲ್ಲೇ ಇಟ್ಟುಕೊಂಡುಓಡಾಡುತ್ತಾರೆ. ಇಲ್ಲಿಂದ ಹೋದವರಿಗೆ ಅಲ್ಲಿನ ಪರಿಸ್ಥಿತಿಗಳ ಅರಿವಿರುವುದಿಲ್ಲ. ಹೀಗಾಗಿ ಭಾರತೀಯರಿಗೆ ಆ ದೇಶಗಳು ಸೂಕ್ತವಲ್ಲ. ಈ ವಿಚಾರವನ್ನು ಕೇಂದ್ರ ಸಚಿವರೊಂದಿಗೆ ಗಂಭೀರವಾಗಿ ಚರ್ಚೆ ಮಾಡುವುದಾಗಿ ಹೇಳಿದರು.
2 ದಿನದಲ್ಲಿ ವೀಸಾ ವ್ಯವಸ್ಥೆ: ಮೃತ ಅಭಿಷೇಕ್ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಸಂಸದ ಪ್ರತಾಪ್ ಸಿಂಹ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಅಭಿಷೇಕ್ ಕುಟುಂಬಸ್ಥರು ಅಮೆರಿಕಾಗೆ ತೆರಳಲು ವೀಸಾ ಸಮಸ್ಯೆ ಎದುರಾಗಿದೆ. ಇನ್ನೆರಡು ದಿನಗಳಲ್ಲಿವೀಸಾ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದರು. ಈ ಬಗ್ಗೆ ಅಮೆರಿಕಾ ರಾಯಭಾರಿ ಕಚೇರಿ ಜೊತೆಗೆ ಮಾತನಾಡಿದ್ದು, ಅಭಿಷೇಕ್ ಕುಟುಂಬ ಸ್ಥರು ಅಮೆರಿಕಾಗೆ ತೆರಳಲು ಅಗತ್ಯವಾದ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದರು.
ಅಮೆರಿಕಾದಲ್ಲಿ ಕಡ್ಲೆಪುರಿ ರೀತಿ ಗನ್ ಲೈಸೆನ್ಸ್ ಸಿಗುತ್ತದೆ. ಇದರಿಂದ ಎಲ್ಲರೂ ಗನ್ ಬಳಸುತ್ತಾರೆ.ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಈ ಘಟನೆಯಿಂದ ಅಮೆರಿಕಾದಲ್ಲಿ ಭದ್ರತೆ ಇಲ್ಲಎಂದು ಹೇಳಲಾಗಲ್ಲ. ಕೆಲ ಮಾನಸಿಕ ಅಸ್ವಸ್ಥರುಈ ರೀತಿಯ ಕೃತ್ಯ ಮಾಡುತ್ತಿದ್ದಾರೆ. ಶಾಂತಿಪ್ರಿಯರಾದ ಮೈಸೂರಿಗರಿಗೆ ಈ ರೀತಿಆಗಿರುವುದು ದುರಾದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.