Advertisement

ವೀಸಾ ನಿಯಮ ರಿಯಾಯಿತಿ; ಹೊಸ ಕ್ರಮಗಳನ್ನು ಪ್ರಕಟಿಸಿದ ಅಮೆರಿಕ ಸರಕಾರ

01:05 AM Aug 14, 2020 | mahesh |

ವಾಷಿಂಗ್ಟನ್‌: ಎಚ್‌1 ಬಿ ವೀಸಾ ನಿಯಮಗಳಲ್ಲಿ ಬಿಗಿ ತಂದು ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ವಿದೇಶಿ ಕೆಲಸ ಗಾರರ ನಿದ್ದೆಗೆಡಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಈಗ ತಮ್ಮ ಪಟ್ಟನ್ನು ಕೊಂಚ ಸಡಿಲಿಸಿದ್ದಾರೆ. ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಅಮೆರಿಕದ ಹಣಕಾಸು ಪರಿಸ್ಥಿತಿಯನ್ನು ಪುನಶ್ಚೇತನಗೊಳಿ ಸುವ ಉದ್ದೇಶದಿಂದ ಕೆಲವಾರು ನಿಯಮಗಳನ್ನು ಸಡಿಲಿಸಲಾಗಿದೆ.

Advertisement

ಎಚ್‌1ಬಿ ವೀಸಾ ಬಿಗಿ ನಿಯಮದ ಮೂಲಕ ಅಮೆರಿಕ ದಲ್ಲಿ ಕೆಲಸ ಬಿಟ್ಟು ಹೋದವರು, ಆನಂತರ ಪುನಃ ತಾವಿದ್ದ ಕಂಪೆನಿಗೆ ಅದೇ ಹುದ್ದೆಗೆ ಹಿಂದಿರುಗುವ ಅವಕಾಶ ಸಿಕ್ಕರೆ ಮತ್ತೆ ಅಮೆರಿಕಕ್ಕೆ ಹಿಂದಿ ರುಗಬಹುದು. ಅಲ್ಲದೆ, ಆ ರೀತಿಯಾಗಿ ಅಮೆರಿಕಕ್ಕೆ ಹಿಂದಿರುಗುವವರ ಅವಲಂಬಿತರಿಗೂ ವೀಸಾ ನೀಡಲಾಗುವುದು ಎಂಬ ಅಂಶವನ್ನು ತಿದ್ದುಪಡಿಯಲ್ಲಿ ಸೇರಿಸಲಾಗಿದೆ.

ಕೆಲವರಿಗೆ ವಿಶೇಷ ರಿಯಾಯಿತಿ: ಅಮೆರಿಕದಲ್ಲಿರುವ ಕಂಪೆನಿಗಳಿಗೆ ತುರ್ತಾಗಿ ಅಗತ್ಯವಿರುವ ತಾಂತ್ರಿಕ ಪರಿಣಿತ ರಿಗೆ, ಹಿರಿಯ ಅಧಿಕಾರಿ ಗಳಿಗೆ ಹಾಗೂ ಎಚ್‌1ಬಿ ವೀಸಾ ಇರುವ ಇತರ ಕೆಲಸಗಾರರಿಗೆ ಅಮೆರಿಕಕ್ಕೆ ಹಿಂದಿರುಗಲು ಅವಕಾಶ ಕಲ್ಪಿಸ ಲಾಗಿದೆ. ಇನ್ನು, ಟ್ರಾವೆಲ್‌ ವೀಸಾ ಮೂಲಕ ಅಮೆ ರಿಕಕ್ಕೆ ತೆರಳಿ ಅಲ್ಲಿ ಆರೋಗ್ಯ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರು, ಕೊರೊನಾ ವಿಚಾರದಲ್ಲಿ ಸಂಶೋಧನೆಯಲ್ಲಿ ತೊಡಗಿರು ವವರಿಗೆ, ಸಾರ್ವ ಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ದುಡಿ ಯುತ್ತಿರು ವವರಿಗೆ ಅಮೆರಿಕದಲ್ಲಿ ಕೆಲಸ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next