Advertisement

ವೀಸಾ ಪ್ರಕ್ರಿಯೆ ಸರಳೀಕರಣ: ಕೇಂದ್ರ ಸಚಿವ

11:28 PM Feb 26, 2020 | Lakshmi GovindaRaj |

ಬೆಂಗಳೂರು: ದೇಶದಲ್ಲಿ ಪಾಸ್‌ಪೋರ್ಟ್‌ ಹಾಗೂ ವೀಸಾ ಸೇವೆಗಳನ್ನು ಜನಸ್ನೇಹಿಗೊಳಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ರಾಜ್ಯ ಸಚಿವ ವಿ. ಮುರಳಿಧರನ್‌ ಹೇಳಿದ್ದಾರೆ. ವಿಕಾಸಸೌಧದಲ್ಲಿ ನಡೆದ ವಿದೇಶ್‌ ಸಂಪರ್ಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ವಿದೇಶಗಳಲ್ಲಿ ಮೂರು ಕೋಟಿ ಅನಿವಾಸಿ ಭಾರತೀಯರು ವಾಸಿಸುತ್ತಿದ್ದಾರೆ.

Advertisement

ವಿಶ್ವದ 117 ದೇಶಗಳಲ್ಲಿ ಇ -ವೀಸಾ ಹಾಗೂ ಇ-ಪಾಸ್‌ ಪೋರ್ಟ್‌ ಸೇವೆ ಆರಂಭಿಸಲಾಗಿದೆ. ವಿದೇಶ ಪ್ರವಾಸ ಈಗ ಮೊದಲಿಗಿಂತಲೂ ಹೆಚ್ಚು ಸುರಕ್ಷಿತವಾಗಿದೆ ಎಂದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಪಾಸ್‌ ಪೋರ್ಟ್‌ ನೀಡುವ ಪ್ರಕ್ರಿಯೆಯನ್ನು ಇನ್ನಷ್ಟು ಸರಳೀಕರಣಗೊಳಿಸಬೇಕು.

ವೀಸಾ ಪಡೆಯಲು ಚೆನೈನಲ್ಲಿ ಉದ್ದದ ಸರದಿ ಸಾಲಿನಲ್ಲಿ ನಿಲ್ಲುವ ಅನಿವಾರ್ಯತೆ ಇದೆ. ರಾಜ್ಯದಲ್ಲಿಯೂ ಅಮೇರಿಕಾ ವೀಸಾ ನೀಡುವ ಕೇಂದ್ರ ತೆರೆಯಬೇಕು ಎಂದು ಮನವಿ ಮಾಡಿದರು. ವಿದೇಶಗಳಲ್ಲಿ ಅನಿವಾಸಿ ಭಾರತೀಯರು ನಿಧನ ಹೊಂದಿದಾಗ ಅವರ ಮೃತ ದೇಹವನ್ನು ಮಾತೃ ದೇಶಕ್ಕೆ ತರುವ ಪ್ರಕ್ರಿಯೆ ಸರಳೀಕರಿಸಬೇಕು ಎಂದು ಆಗ್ರಹಿಸಿದರು..

Advertisement

Udayavani is now on Telegram. Click here to join our channel and stay updated with the latest news.

Next