Advertisement

Visa-Free Entry: ಡಿ.1ರಿಂದ ಈ ದೇಶಕ್ಕೆ ತೆರಳಲು ಭಾರತೀಯರಿಗೆ ವೀಸಾ ಬೇಕಾಗಿಲ್ಲ…

10:51 AM Nov 27, 2023 | Team Udayavani |

ನವದೆಹಲಿ: ಇದೆ ಬರುವ ಡಿಸೆಂಬರ್ 1 ರಿಂದ ಈ ದೇಶಕ್ಕೆ ತೆರಳಲು ಭಾರತೀಯರಿಗೆ ವೀಸಾ ಅಗತ್ಯವಿಲ್ಲ ಕೇವಲ ಪಾಸ್ ಪೋರ್ಟ್ ಮಾತ್ರ ಇದ್ದಾರೆ ಸಾಕು ಎಂದಿದೆ.

Advertisement

ಹೌದು ಭಾರತ ಬಿಟ್ಟು ಬೇರೆ ಯಾವುದೇ ಹೊರದೇಶಕ್ಕೆ ಪ್ರಯಾಣಿಸಬೇಕಾದರೆ ವೀಸಾ ಅತ್ಯಗತ್ಯ ಅದಿಲ್ಲದೆ ಇದ್ದರೆ ಆ ದೇಶಕ್ಕೆ ಪ್ರಯಾಣಿಸುವಂತಿಲ್ಲ ಆದರೆ ಭಾರತೀಯ ನಾಗರಿಕರು ಡಿಸೆಂಬರ್ 1 ರಿಂದ ಮಲೇಷ್ಯಾದಲ್ಲಿ ವೀಸಾ ಮುಕ್ತ ಪ್ರವೇಶವನ್ನು ಪಡೆಯುತ್ತಾರೆ. ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಈ ಮಾಹಿತಿ ನೀಡಿದ್ದಾರೆ. ಭಾರತದ ಜೊತೆಗೆ ಚೀನಾದ ನಾಗರಿಕರಿಗೆ ವೀಸಾ ಮುಕ್ತವಾಗಿ ಪ್ರಯಾಣಿಸಲು ಅವಕಾಶ ನೀಡುತ್ತದೆ.

ಈ ಮಾಹಿತಿಯ ಪ್ರಕಾರ, ಭಾರತ ಮತ್ತು ಚೀನಾದ ನಾಗರಿಕರು ಮಲೇಷ್ಯಾದಲ್ಲಿ 30 ದಿನಗಳವರೆಗೆ ವೀಸಾ ಮುಕ್ತವಾಗಿರಬಹುದು. ಆದರೆ, ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ವೀಸಾ ವಿನಾಯಿತಿ ಎಷ್ಟು ಕಾಲ ಅನ್ವಯಿಸುತ್ತದೆ ಎಂದು ಮಾತ್ರ ಹೇಳಲಿಲ್ಲ.

ಈ ಹಿಂದೆ ಶ್ರೀಲಂಕಾ ಮತ್ತು ಥೈಲ್ಯಾಂಡ್ ಭಾರತೀಯರಿಗೆ ವೀಸಾ ಮುಕ್ತ ಪ್ರಯಾಣವನ್ನು ಅನುಮತಿಸಿತ್ತು ಆದರೆ ಇದೀಗ ಅದರ ಸಾಲಿಗೆ ಮಲೇಷ್ಯಾ ಸೇರಿಕೊಂಡಿದ್ದು ಇದರೊಂದಿಗೆ ಭಾರತೀಯ ನಾಗರಿಕರಿಗೆ ವೀಸಾ-ಮುಕ್ತ ಪ್ರಯಾಣವನ್ನು ಕಲ್ಪಿಸಿದ ಮೂರನೇ ದೇಶವಾಗಿದೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ, ಮಲೇಷ್ಯಾಕ್ಕೆ ಈ ವರ್ಷದ ಜನವರಿಯಿಂದ ಜೂನ್ ತಿಂಗಳ ನಡುವೆ 9.16 ಮಿಲಿಯನ್ ಪ್ರವಾಸಿಗರು ಆಗಮಿಸಿದ್ದಾರೆ ಎಂದು ಹೇಳಿದೆ, ಚೀನಾದಿಂದ 498,540 ಮತ್ತು ಭಾರತದಿಂದ 283,885 ಪ್ರವಾಸಿಗರು ಆಗಮಿಸಿದ್ದಾರೆ ಎಂದು ಹೇಳಿದೆ.

Advertisement

ಇದನ್ನೂ ಓದಿ: Lightning Strikes: ಗುಜರಾತ್ ನಲ್ಲಿ ಮಳೆಯ ಅಬ್ಬರ… ಸಿಡಿಲು ಬಡಿದು 20 ಮಂದಿ ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next