Advertisement
ವಿರೂಪಾಪುರ ಗಡ್ಡೆಯಲ್ಲಿ 28 ರೆಸಾರ್ಟ್ ಗಳ ಪೈಕಿ ನರ್ಗಿಲಾ ಮತ್ತು ಗೋಪಿ ರೆಸಾರ್ಟ್ ಮಾಲೀಕರು ತೆರದ ವು ಪ್ರಶ್ನಿಸಿ ಬೆಂಗಳೂರು ಹೈಕೋರ್ಟ್ ನಲ್ಲಿ ತಡೆಯಾಜ್ಞೆ ತಂದಿದ್ದರು. ಈ ಕುರಿತು ವಿಚಾರಣೆ ಜರುಗಿ ಹೈಕೋರ್ಟ್ ತಡೆಯಾಜ್ಞೆ ತೆರವು ಮಾಡಿತ್ತು. ಶುಕ್ರವಾರ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಬೆಳ್ಳಿಗ್ಗೆ 6.30ಕ್ಕೆ ಕರ್ತವ್ಯಕ್ಕೆ ಬರುವಂತೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರು. ಕೋರ್ಟಿನ ಆದೇಶ ಕೈಗೆ ಬಾರದ ಕಾರಣ ಬಂದ ದಾರಿಗೆ ಶುಲ್ಕವಿಲ್ಲ ಎಂಬಂತೆ ತಾಲೂಕು ಆಡಳಿತ ವ್ಯವಸ್ಥೆ ಮಾಡಿದ್ದ ಉಪಹಾರ ಸೇವಿಸಿ ಬರಿಗೈಲಿ ವಾಪಸ್ ಆಗಿದ್ದಾರೆ.ಪೂರ್ಣ ತೆರವು: ಹಂಪಿ ಸುತ್ತಲಿನ ಅನಧಿಕೃತ ವಾಣಿಜ್ಯ ಕಟ್ಟಡಗಳನ್ನು ತೆರವು ಮಾಡುವಂತೆ ಸುಪ್ರೀಂಕೋರ್ಟ್ ಫೆ.11ರಂದು ಆದೇಶದ ಹಿನ್ನೆಲೆಯಲ್ಲಿ ಅಧಿಕಾರಿಗಳು ವಿರೂಪಾಪುರಗಡ್ಡೆ ಗೆ ತೆರಳಿದ್ದರು. ಈ ಮಧ್ಯೆ ಗಡ್ಡೆ ಯಲ್ಲಿರುವ ಲಕ್ಷ್ಮಿ ಗೋಲ್ಡನ್ ಬೀಚ್ ರಂದು ರೆಸಾರ್ಟ್ ತಡೆಯಾಜ್ಞೆಯ ವಿಚಾರಣೆಯನ್ನು ಮಾ.24ಕ್ಕೆ ಮುಂದೂಡಿದೆ. ಎರಡು ಮೂರು ರೆಸಾರ್ಟ್ ಹೊರತುಪಡಿಸಿ ಗಡ್ಡೆಯಲ್ಲಿ ರೆಸಾರ್ಟ್ ಗಳ ತೆರವು ಪೂರ್ಣವಾಗಿದೆ.