ಗಂಗಾವತಿ: ವಿಶ್ವಪ್ರಸಿದ್ಧ ಪ್ರವಾಸಿತಾಣ ಎಂದು ಖ್ಯಾತಿ ಪಡೆದ ವಿರೂಪಾಪೂರಗಡ್ಡಿ ಫಾರೆಸ್ಟ್ ಪ್ರವಾಸಿ ಮಂದಿರದ ಹತ್ತಿರ ಗಾಂಜಾ ಮಾರಾಟ ಮಾಡುವ ಯತ್ನ ನಡೆಸಿದ ಇಬ್ಬರೂ ವ್ಯಕ್ತಿಗಳನ್ನು ಗಾಂಜಾ ಸಮೇತ ಗ್ರಾಮೀಣ ಪೊಲೀಸರು ಬಂಧಿಸಿ ಬೈಕ್ ವಶಕ್ಕೆ ಪಡೆದು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿದ ಪ್ರಕರಣ ಗುರುವಾರ ನಡೆದಿದೆ.
ವಿರೂಪಾಪೂರಗಡ್ಡಿ ಫಾರೆಸ್ಟ್ ಐ ಬಿ ಹತ್ತಿರ ಪ್ರಕರಣ ಜರುಗಿದ್ದು ಆರೋಪಿತರಾದ ಕಾರಟಗಿ ಗ್ರಾಮದ ಮುರಳಿಕೃಷ್ಣ ಕರಟೂರಿ(29),ರಹಿಮ್ ಸಾಬ (28) ಬೈಕ್ ಹಾಗೂ ಗಾಂಜಾ ಸಮೇತ ಬಂಧಿಸಲಾಗಿದೆ.
ಬಂಧಿತರಿಂದ ಅಂದಾಜು ಮೌಲ್ಯ 1.26ಲಕ್ಷ ರೂ.ಮೌಲ್ಯದ 1870 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ದಾಳಿಯ ಸಂದರ್ಭದಲ್ಲಿ ಡಿಎಸ್ಪಿ ಶೇಖರಪ್ಪ,ಗ್ರಾಮೀಣ ಸಿಪಿ ಐ ಮಂಜುನಾಥ,ಪೊಲೀಸ್ ಸಿಬ್ಬಂದಿಗಳಾದ ವೆಂಕರೆಡ್ಡಿ,ಶಿವಶರಣ, ವಿಶ್ವನಾಥ,ಮರಿಯಪ್ಪ,ಸೈಯದ್ ಗೌಸ್,ಸಿದ್ದನಗೌಡ,ಮಹಾಂತೇಶ, ಅಂಬ್ರೇಶ, ಮಲ್ಲಪ್ಪ, ಪ್ರಭುಗೌಡ ಇದ್ದರು.