Advertisement

ವಿರೂಪಾಕ್ಷಪ್ಪ ಹೋಟೆಲ್‌; ಮಿರ್ಜಿ ಭಜಿ ಜಾದೂ

10:22 AM Mar 17, 2020 | mahesh |

ಮುದ್ದೇಬಿಹಾಳಕ್ಕೆ ಹೋದಾಗ ರುಚಿಕಟ್ಟಾದ ಬಜ್ಜಿ, ಬೋಂಡಾ, ತಿಂಡಿ ತಿನ್ನಬೇಕು ಅನಿಸಿದ್ರೆ ಸೂಕ್ತವಾದ ಜಾಗ ಇಲ್ಲಿದೆ. ಅದುವೇ ವಿರೂಪಾಕ್ಷಪ್ಪನ ಹೋಟೆಲ್‌. ಮುದ್ದೇಬಿಹಾಳ ಪಟ್ಟಣದ ಬಜಾರ್‌ ಹಣಮಂತ ದೇವರ ಗುಡಿ ಮುಂದೆ ನಿಂತು ನೋಡಿದ್ರೆ ವ್ಯಕ್ತಿಗಳಿಬ್ಬರು ಬೋಂಡಾ ಬಜ್ಜಿ ಹಾಕುತ್ತಾ, ಗ್ರಾಹಕರನ್ನು ಮಾತಿನಿಂದ ರಂಜಿಸುತ್ತಾ ಇರುವ ದೃಶ್ಯ ಕಾಣುತ್ತೆ. ಅದೇ ವಿರೂಪಾಕ್ಷಪ್ಪನ ಹೋಟೆಲ್‌. ನಾಮಫ‌ಲಕ ಇಲ್ಲದ ಈ ಹೋಟೆಲ್‌, 50 ವರ್ಷ ಪೂರೈಸಿದೆ ಎಂದರೆ ಯಾರಿಗೇ ಆದರೂ ಅಚ್ಚರಿಯಾಗುವುದು ಖಂಡಿತ.

Advertisement

ಶಿರಾ ಉಪ್ಪಿಟ್ಟು ಇಡ್ಲಿ ಪೂರಿ
ಮೃದುಸ್ವಭಾವದ ವಿರೂಪಾಕ್ಷಪ್ಪ, ಗ್ರಾಹಕರಿಗೆ ರುಚಿಯಾದ ತಿಂಡಿ ಜೊತೆಗೆ ಪ್ರೀತಿಯನ್ನು ಹಂಚುತ್ತಿದ್ದರು. ಪ್ರೌಢಶಾಲೆವರೆಗಷ್ಟೆ ಕಲಿತಿದ್ದ ವಿರೂಪಾಕ್ಷಪ್ಪ ಲೈಬ್ರರಿ ಬಿಲ್ಡಿಂಗ್‌ನಲ್ಲಿದ್ದ ಭಾರತ್‌ ಚೂಡ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ನಂತರ, ಅಲ್ಲಿ ಕೆಲಸ ಬಿಟ್ಟು, ಘನಮಠೇಶ್ವರ ಚೌಕಿಯಲ್ಲಿ ತಗಡಿನ ತಟ್ಟೆ ಕಟ್ಟಿ ಹೋಟೆಲ್‌ ಆರಂಭಿಸಿದ್ದರು. ಶಿರಾ, ಉಪ್ಪಿಟ್ಟು, ಚಹಾ ಹೀಗೆ ನಾಲ್ಕೈದು ತಿಂಡಿ ಮಾರಿಕೊಂಡು ಜೀವನ ಸಾಗಿಸುತ್ತಿದ್ದರು.

ಕಳೆದ 20 ವರ್ಷಗಳಿಂದ ಸ್ವಾಮಿಗಳ ಬಿಲ್ಡಿಂಗ್‌ನಲ್ಲಿ ಹೋಟೆಲ್‌ ನಡೆಸುತ್ತಿದ್ದರು. ಅವರ ಮಕ್ಕಳು ಅಲ್ಲದೆ ಮೂರು ಮಂದಿಯಿದ್ದಾರೆ ಕೆಲಸಕ್ಕೆ. ಪತ್ನಿ ದಾಕ್ಷಾಯಿಣಿಯವರ ಸಹಕಾರವೂ ಸಿಕ್ಕಿತು. ವಿರೂಪಾಕ್ಷಪ್ಪನವರು ತೀರಿಕೊಂಡ ನಂತರ ಪುತ್ರರಾದ ಮಹಾಂತೇಶ್‌, ವೀರಣ್ಣ ಹೋಟೆಲ್‌ ಮುಂದುವರಿಸುತ್ತಿದ್ದಾರೆ. ತಂದೆ ಮಾಡುತ್ತಿದ್ದ ಅದೇ ಶಿರಾ, ಉಪ್ಪಿಟ್ಟು, ಇಡ್ಲಿ, ಪೂರಿ ಈಗಲೂ ಗ್ರಾಹಕರಿಗೆ ಅಚ್ಚುಮೆಚ್ಚು.

ಚಪ್ಪಟೆ ಬಜ್ಜಿ ವಿಶೇಷ
ಈಗ ದಿನಕ್ಕೆ 30ರಿಂದ 40 ಕೆ.ಜಿ. ಕಡಲೆ ಹಿಟ್ಟಿನ ಬಜ್ಜಿ ಖರ್ಚಾಗುತ್ತದೆ. ಮಧ್ಯಾಹ್ನ 1ರಿಂದ ಕೆಲಸ ಶುರುವಾಗುತ್ತದೆ. ಸಂಜೆ ಗಿರಾಕಿಗಳು ಬರುವಷ್ಟರಲ್ಲಿ ಬಿಸಿ ಬಿಸಿ ಬಜ್ಜಿ ತಯಾರಿರುತ್ತದೆ. ಚಪ್ಪಟೆ ಬಜ್ಜಿ ಬಹಳ ರುಚಿಕರ. ಇನ್ನೊಂದು ವಿಶೇಷವೆಂದರೆ, ಇಲ್ಲಿನ ಗ್ರಾಹಕರಲ್ಲಿ ಹೆಚ್ಚಿನವರು ಮನೆಗೆ ಒಂದಷ್ಟು ಬಜ್ಜಿಯನ್ನು ಪಾರ್ಸೆಲ್‌ ಕಟ್ಟಿಸಿಕೊಂಡು ಹೋಗುವವರು. ಕೆಲವೇ ಮಂದಿ ಅಲ್ಲೇ ಬಜ್ಜಿ ರುಚಿಯನ್ನು ಸವಿಯುವರು.

ವಿರೂಪಾಕ್ಷಿಯವರು ಹಾಡುಗಾರರೂ ಆಗಿದ್ದರು, ಗೆಳೆಯರ ಸಂಗಡ “ಫ್ರೆಂvÕ… ಮ್ಯೂಸಿಕಲ್‌ ಪಾರ್ಟಿ’ ಅಂತ ಮಾಡಿಕೊಂಡು, ದ್ಯಾಮವ್ವನ ಗುಡಿ ಕಟ್ಟೆಯ ಮೇಲೆ ನಿಂತು ಹಾಡುತ್ತಿದ್ದರೆ, ಕೇಳಿ ಚಪ್ಪಾಳೆ, ಶಿಳ್ಳೆ ಹೊಡೆದ ಯುವ ಜನರು ಇವತ್ತಿಗೂ ಅದೇ ಪ್ರೀತಿಯನ್ನು ವಿರೂಪಾಕ್ಷಿ ಬಗ್ಗೆ ಇಟ್ಟುಕೊಂಡಿ¨ªಾರೆ. ಆ ಪ್ರೀತಿಯನ್ನು ಅಗ್ಗದ ದರದಲ್ಲಿ ತಿಂಡಿ-ತಿನಿಸು ಕೊಡುವ ಮೂಲಕ ಮರಳಿಸಿದ್ದವರು ವಿರೂಪಾಕ್ಷಿ. ಇದರಿಂದಾಗಿ ಅವರ ಚಹಾ ಅಂಗಡಿಯಲ್ಲಿ ಗದ್ದಲ ಇರುತ್ತಿತ್ತು.

Advertisement

ಹೋಟೆಲ್‌ ಸಮಯ:
ಬೆಳಗ್ಗೆ 6 ರಿಂದ ರಾತ್ರಿ 8ಗಂಟೆವರೆಗೆ, ಭಾನುವಾರ ರಜೆ.

ಹೋಟೆಲ್‌ ವಿಳಾಸ:
ಬಜಾರ್‌ ಹಣಮಂತ ದೇವರ ಗುಡಿ ಮುಂಭಾಗ, ಮುಖ್ಯರಸ್ತೆ, ವೀರೇಶ್ವರ ನಗರ, ಮುದ್ದೇಬಿಹಾಳ, ಬಿಜಾಪುರ

ಹೋಟೆಲ್‌ ತಿಂಡಿ:
ಬೆಳಗ್ಗೆ ಶಿರಾ(ಕೇಸರಿಬಾತ್‌)- ಉಪ್ಪಿಟ್ಟು (15 ರೂ.), ಇಡ್ಲಿ (10 ರೂ.), ಬಜ್ಜಿ (10 ರೂ.), ಮಸಾಲೆ ದೋಸೆ (25 ರೂ.), ಚೂಡಾ (15 ರೂ.), ರೈಸ್‌ಬಾತ್‌ (20 ರೂ.), ಪೂರಿ, ದೋಸೆ, ಶಿರಾ, ಉಪ್ಪಿಟ್ಟು, ರೈಸ್‌ಬಾತು, ಚೂಡಾ, ಮಿರ್ಚಿ, ಬಜ್ಜಿ, ಗೋಳಿ ಬಜೆ (20 ರೂ.). ಚಹಾ (4 ರೂ.)

ಭೋಗೇಶ ಆರ್‌.ಮೇಲುಕುಂಟೆ

Advertisement

Udayavani is now on Telegram. Click here to join our channel and stay updated with the latest news.

Next