Advertisement

ಹಾಡಾಗಿ ಬಂತು ವಿರುಪಾ

12:30 AM Mar 22, 2019 | |

ವಿಶೇಷ ಮಕ್ಕಳ ಜೊತೆಗೆ “ವಿರುಪಾ’ ಎಂಬ ವಿಶೇಷ ಚಿತ್ರ ಮಾಡಿರುವ ನಿರ್ದೇಶಕ ಪುನೀಕ್‌ ಶೆಟ್ಟಿ, ಚಿತ್ರದ ಹಾಡುಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿದರು. ಎರಡು ಹಾಡು ತೋರಿಸಿದ ಬಳಿಕ ಮಾತಿಗಿಳಿದರು. “ಇದು ನನ್ನ ಮೊದಲ ಚಿತ್ರ. ಇಲ್ಲಿ ಸಾಕಷ್ಟು ಚಾಲೆಂಜ್‌ನಲ್ಲೇ ಚಿತ್ರ ಮಾಡಬೇಕಾಯಿತು. ಇಲ್ಲಿ ಮಾತು ಬಾರದ, ಕಿವಿ ಕೇಳಿಸದ ಒಬ್ಬ ಹುಡುಗ, ಕಣ್ಣು ಕಾಣದ ಮತ್ತೂಬ್ಬ ಹುಡುಗನ ಕಥೆ ಇಲ್ಲಿದೆ. ಅವರಿಗೆ ತರಬೇತಿ ಕೊಡಿಸಿ, ನಟನೆ ಮಾಡಿಸಿದ್ದು ಒಂದು ಚಾಲೆಂಜ್‌ ಎನಿಸಿದರೆ, ಇನ್ನೊಂದು ಸಿಂಕ್‌ ಸೌಂಡ್‌ನ‌ಲ್ಲಿ ಚಿತ್ರೀಕರಿಸಿದ್ದು. “ವಿರುಪಾ’ ಎಂಬುದು ಮೂವರು ಹುಡುಗರ ಸ್ಟೋರಿ. ಒಬ್ಬನು ವಿನ್ಸೆಂಟ್‌, ಇನ್ನೊಬ್ಬ ರುಸ್ತುಂ ಮತ್ತೂಬ್ಬ ಪಾಕ್ಷ. ಈ ಮೂವರ ಮೊದಲ ಅಕ್ಷರ ಹೆಕ್ಕಿ “ವಿರುಪಾ’ ಎಂಬ ಹೆಸರಿಡಲಾಗಿದೆ. ಸಿಟಿ ಮತ್ತು ಹಳ್ಳಿ ಬದುಕಿನ ನಡುವಿನ ವ್ಯತ್ಯಾಸ ಇಲ್ಲಿದೆ. ಮಕ್ಕಳ ಮನಸ್ಥಿತಿ ಕುರಿತು ಹೇಳಲಾಗಿದೆ. ಇಲ್ಲೊಂದು ಅಪರೂಪದ ವಿಷಯವಿದೆ. ಅದು ಸಿನಿಮಾದ ಹೈಲೈಟ್‌’ ಎಂದರು ಪುನೀಕ್‌ಶೆಟ್ಟಿ.

Advertisement

ಚಿತ್ರಕ್ಕೆ ಢಾÂಪ್ನಿ ನೀತು ಡಿಸೋಜ ನಿರ್ಮಾಪಕರು. ಕಾರ್ಯಕಾರಿ ನಿರ್ಮಾಪಕರಾಗಿರುವ ಡಿಕ್ಸನ್‌ ಜಾಕಿ ಡಿಸೋಜ ಅವರಿಗೆ ಇದು ಮೊದಲ ಪ್ರಯತ್ನ. ಮಕ್ಕಳ ಬದುಕು, ಬವಣೆ ಕುರಿತಾದ ಚಿತ್ರಣ ಇಲ್ಲಿದೆ. ಬದುಕಲ್ಲಿ ಏನೂ ಇಲ್ಲದವರು ಹೇಗೆ ಬದುಕಿ ತೋರಿಸುತ್ತಾರೆ ಎಂಬ ಅಂಶವಿದೆ. ವಿದೇಶಿ ತಾತನೊಬ್ಬನ ಕಥೆಯೂ ಇದೆ. ಹಂಪಿ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದು ವಿಶೇಷ. ಇಡೀ ತಂಡ ಕೊಟ್ಟ ಸಹಕಾರ, ಪ್ರೋತ್ಸಾಹದಿಂದ ಒಳ್ಳೆಯ ಚಿತ್ರ ಮಾಡಿದ್ದೇನೆ. ಇಲ್ಲಿ ವಿಕಲಚೇತನ ಇಬ್ಬರು ಹುಡುಗರು, ತೆರೆಯ ಮೇಲೂ ನಟಿಸಿದ್ದಾರೆ. ಅವರೇ ಚಿತ್ರದ ರಿಯಲ್‌ ಹೀರೋಗಳೂ ಆಗಿದ್ದಾರೆ. ಇಲ್ಲಿ ಮಕ್ಕಳ ಕಥೆ ಇರುವುದರಿಂದಲೇ ಮಕ್ಕಳ ಚಿತ್ರವಾಗಿದೆ. ಇನ್ನೇನು ಪರೀಕ್ಷೆ, ಚುನಾವಣೆ ಮುಗಿದ ಬಳಿಕ ಚಿತ್ರವೂ ಪ್ರೇಕ್ಷಕರ ಮುಂದೆ ಬರಲಿದೆ ಎಂದರು ಡಿಕ್ಸನ್‌ ಜಾಕಿ ಡಿಸೋಜ.

ಸಂಗೀತ ನಿರ್ದೇಶಕ ಪ್ರದೀಪ್‌ ಮಳ್ಳೂರು ಚಿತ್ರದಲ್ಲಿ ಎರಡು ಹಾಡುಗಳನ್ನು ನೀಡಿದ್ದಾರೆ. ಅವರಿಗೆ ಒಳ್ಳೆಯ ಚಿತ್ರದಲ್ಲಿ ಕೆಲಸ ಮಾಡಿದ ಖುಷಿ. ಕೇಳಿದ್ದೆಲ್ಲವನ್ನೂ ನೀಡಿದ್ದರಿಂದಲೇ ಇಲ್ಲಿ ಎಲ್ಲವೂ ಚೆನ್ನಾಗಿ ಮೂಡಿಬಂದಿದೆ ಎಂಬುದು ಪ್ರದೀಪ್‌ ಮಾತು. ಉಪನ್ಯಾಸಕ ಪಾತ್ರ ಮಾಡಿರುವ ಮಂಜು ಚಿತ್ರದಲ್ಲೂ ಅದೇ ಪಾತ್ರ ಮಾಡಿದ್ದಾರಂತೆ. ಕಾಲೇಜು ದಿನಗಳಲ್ಲಿ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಈ ಚಿತ್ರದ ಮೂಲಕ ಈಡೇರಿದ್ದು, ಒಳ್ಳೆಯ ಪಾತ್ರ ಮೂಲಕವೇ ಅವಕಾಶ ಪಡೆದಿದ್ದೇನೆ. ಇದು ಎಲ್ಲರ ಮನಸ್ಸಲ್ಲೂ ನೆನಪಲ್ಲುಳಿಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next