Advertisement

ದೇವರ ಸ್ಮರಣೆ-ತೀರ್ಥಯಾತ್ರೆಯಿಂದ ಸಾರ್ಥಕತೆ

02:36 PM Jan 26, 2018 | Team Udayavani |

ಬಸವಕಲ್ಯಾಣ: ದೇವರ ಸ್ಮರಣೆ, ತೀರ್ಥಯಾತ್ರೆ ಜೀವನದಲ್ಲಿ ಸಾರ್ಥಕತೆ ತಂದು ಕೊಡುತ್ತದೆ ಎಂದು ಹುಮನಾಬಾದನ ವಿಶ್ವಕರ್ಮ ಏಕದಂಡಗಿ ಶಾಖಾ ಮಠದ ಶ್ರೀ ಕುಮಾರ ಸ್ವಾಮೀಜಿ ನುಡಿದರು.

Advertisement

ನಗರದ ಮೌನೇಶ್ವರ ದೇವಸ್ಥಾನದಲ್ಲಿ ವಿಶ್ವಕರ್ಮ ಜಗದ್ಗುರು ಶ್ರೀಮೌನೇಶ್ವರರ 8ನೇ ವರ್ಷದ ಜಾತ್ರಾ ಮಹೋತ್ಸವ ನಿಮಿತ್ತ ಗುರುವಾರ ನಡೆದ ಧರ್ಮ ಸಭೆ ನೇತೃತ್ವ ವಹಿಸಿ ಅವರು ಆಶೀರ್ವಚನ ನೀಡಿದರು.

ಸಾಲ ಮಾಡಿ ಮೊಬೈಲ್‌ ಖರೀದಿಸಬಾರದು. ಸಾಲ ಮಾಡಿಯಾದರೂ ತೀರ್ಥ ಯಾತ್ರೆಗೆ ಹೋಗಬೇಕು, ಇದರಿಂದ ಪುಣ್ಯ ಬರುತ್ತದೆ. ಯುವಕರು ಆರೋಗ್ಯಕ್ಕೆ ಹಾನಿಕರವಾಗುವ ಯಾವುದೇ ದುಶ್ಚಟಗಳಿಗೆ ಆಕರ್ಷಿತರಾಗದೇ ಸದ್ಗುರು ಮೌನೇಶ್ವರ ನಾಮ ಸ್ಮರಣೆ ಮಾಡುವ ಹವ್ಯಾಸ ಬೆಳೆಸಿಕೊಳ್ಳಿ. ಜೀವನ ಎನ್ನುವುದನ್ನು ಅರಿತುಕೊಳ್ಳಬೇಕು ಎಂದರು.

ಉದ್ಘಾಟನೆ ನೆರವೇರಿಸಿದ ಬಿಕೆಡಿಬಿ ಸದಸ್ಯ ಶಿವರಾಜ ನರಶೆಟ್ಟಿ ಮಾತನಾಡಿ, ಗುರು ಬಸವಣ್ಣನವರ ಕಾಯಕ ಭೂಮಿ ಬಸವಕಲ್ಯಾಣದಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕಾಗಿ ಬರುವ ಬಜೆಟ್‌ನಲ್ಲಿ ಅನುದಾನ ಕಲ್ಪಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದರು. 

ಜಿಪಂ ಸದಸ್ಯ ಸುಧೀರ ಕಾಡಾದಿ ಮಾತನಾಡಿ, ಮೌನೇಶ್ವರ ದೇವಸ್ಥಾನದ ಮಹಾದ್ವಾರ ನೀರ್ಮಾಣಕ್ಕಾಗಿ ವೈಯಕ್ತಿಕವಾಗಿ ಸಹಾಯ ಧನ ನೀಡಲಾಗುವುದು ಎಂದರು.

Advertisement

ಸಾನ್ನಿಧ್ಯ ವಹಿಸಿದ್ದ ತ್ರಿಪುರಾಂತನ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಸಸ್ತಾಪುರ ಶ್ರೀ ಸದಾನಂದ ಅಪ್ಪಗಳು, ಹಿರನಾಗಾಂವನ ಶ್ರೀ ಜೈಶಾಂತಲಿಂಗ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ
ಶಾಸಕ ಎಂ.ಜಿ. ಮುಳೆ, ಬಿಜೆಪಿ ಮುಖಂಡ ರವಿ ಚಂದನಕೆರೆ ಮಾತನಾಡಿದರು. 

ಜಿಪಂ ಮಾಜಿ ಅಧ್ಯಕ್ಷ ಅನೀಲ ಭುಸಾರೆ, ತಾಪಂ ಸದಸ್ಯೆ ಶಾಂತಮ್ಮ ಪಂಚಾಳ, ಮುಖಂಡರಾದ ಸಂಜಯ
ಪಟವಾರಿ, ಲಿಂಗರಾಜ ಪಾಟೀಲ ಅಟ್ಟೂರ, ವಿಜಯಕುಮಾರ ಮಂಠಾಳೆ, ಪ್ರದೀಪ ವಾತಡೆ, ನಗರಸಭೆ ಉಪಾಧ್ಯಕ್ಷೆ
ಚಮ್ಮಾಬಾಯಿ ಮಾಳಿ, ಬಾಳಾಸಾಹೇಬ ಕುಲ್ಕರ್ಣಿ, ಚನ್ನಪ್ಪ ರಾಜಾಪೂರೆ, ವೀರಣ್ಣ ಪಂಚಾಳ, ಸಮಾಜದ ಅಧ್ಯಕ್ಷ
ತಿಪ್ಪಣ್ಣ ಪಂಚಾಳ, ಹರಿಶ್ಚಂದ್ರ ಪಂಚಾಳ ಹಾಗೂ ಪ್ರಮುಖರು ಉಪಸ್ಥಿತರಿದ್ದರು. 

ವಿಜಯಕುಮಾರ ಪಂಚಾಳ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವೈಜಿನಾಥ ಪಂಚಾಳ ನಿರೂಪಿಸಿದರು.
ರಾಜಶೇಖರ ಶೀಲವಂತ ಪ್ರಾರ್ಥನಾ ಗೀತೆ ಹಾಡಿದರು. ಇದಕ್ಕೂ ಮುನ್ನ ನಗರದಲ್ಲಿ ಮೌನೇಶ್ವರರ ಉತ್ಸವ ಮೂರ್ತಿಯ ಪಲ್ಲಕಿ ಮೆರವಣಿಗೆ ಜರುಗಿತು. ಡೊಳ್ಳು ಕಲಾವಿದರಿಂದ ದೊಳ್ಳು ಕುಣಿತ, ಪುರವಂತರಿಂದ ನಡೆದ ಪ್ರದರ್ಶನ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next