Advertisement

ಬ್ರಿಟನ್‌ ವರ್ಚುವಲ್‌ ಸಂಸತ್‌ ; ನಾಳೆಯಿಂದ ಝೂಮ್‌ ಆ್ಯಪ್‌ ಮೂಲಕ ಅಧಿವೇಶನ

11:57 AM Apr 20, 2020 | Hari Prasad |

ವರ್ಚುವಲ್‌ ಪಾರ್ಲಿಮೆಂಟ್‌ ಅಧಿವೇಶನಕ್ಕೆ ಬ್ರಿಟನ್‌ ಸಜ್ಜಾಗಿದೆ. 700 ವರ್ಷಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಝೂಮ್‌ ಆ್ಯಪ್‌ ಮೂಲಕ ಕಲಾಪ ಮಂಗಳವಾರ ನಡೆಯಲಿದೆ. ಕೋವಿಡ್ 19 ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Advertisement

ದೇಶ ಅತ್ಯಂತ ಸಂಕಷ್ಟ ಸ್ಥಿತಿಯಲ್ಲಿದ್ದರೂ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಲೋಪವಾಗದಂತೆ ಅನುಸರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಹೌಸ್‌ ಆಫ್ ಕಾಮನ್ಸ್‌ನ ಸ್ಪೀಕರ್‌ ಲಿಂಡ್ಸೆ ಹೋಲೆ ಹೈಟೆಕ್‌ ವ್ಯವಸ್ಥೆ ಅಳವಡಿಸುವುದಕ್ಕೆ ಭಾನುವಾರ ಸಮ್ಮತಿ ಸೂಚಿಸಿದ್ದಾರೆ.

ಸಂಸತ್‌ನಲ್ಲಿ ಎಂಟು ಸ್ಕ್ರೀನ್‌ಗಳನ್ನು ಅಳವಡಿಸಲಾಗಿದೆ. ನಿಯಮಿತ ಸಂಖ್ಯೆಯಲ್ಲಿ ಸಂಸದರು ಹಾಜರಿರುತ್ತಾರೆ. ಅವರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಿದ್ದಾರೆ. ಸಂಸದರು ತುರ್ತು ಪ್ರಶ್ನೆಗಳಿದ್ದರೆ ಕೇಳಬಹುದು, ಹೊಸದಿಲ್ಲಿದ ಹೇಳಿಕೆಗಳನ್ನುವರ್ಚ್ಯುವಲ್‌ ಸಂಸತ್‌ನಲ್ಲಿ ಪ್ರಕಟಿಸಲಾಗುವುದು.

ಸುಮಾರು 120 ಮಂದಿ ಸಂಸದರು ಝೂಮ್‌ ಆ್ಯಪ್‌ ಮೂಲಕ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. ಇತರ ಐವತ್ತು ಮಂದಿ ಸಂಸದರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಲಾಪದಲ್ಲಿ ಭಾಗವಹಿಸಲಿದ್ದಾರೆ. ಸಂಸತ್‌ ಭವನಕ್ಕೆ ಆಗಮಿಸುವ ಅಧಿಕಾರಿಗಳು, ಸಂಸತ್‌ ಸದಸ್ಯರಿಗೆ ಆವರಣದಲ್ಲಿಯೇ ವೈದ್ಯಕೀಯ ತಪಾಸಣೆ ಮತ್ತು ತಾಪಮಾನ ಪರಿಶೀಲನೆ ನಡೆಯಲಿದೆ.

ಕೋವಿಡ್ 19 ವೈರಸ್ ಸೋಂಕು ಹರಡುತ್ತಿರುವ ಪರಿಸ್ಥಿತಿಯಲ್ಲಿ ವರ್ಚ್ಯುವಲ್‌ ಸಂಸತ್‌ ಅಧಿವೇಶನ ನಡೆಯುವುದರಿಂದ ಸಂಸದರು ಹಾಗೂ ಸಿಬಂದಿ ತೊಂದರೆಗೆ ಸಿಲುಕುವುದು ತಪ್ಪಿಲಿದೆ.

Advertisement

ಈ ರೀತಿಯ ವಿಭಿನ್ನ ಪ್ರಯತ್ನದಿಂದ ‘ಮನೆಯಲ್ಲೇ ಉಳಿಯಿರಿ’ ಎಂಬ ಸಂದೇಶವನ್ನು ಪಾಲಿಸದಂತಾಗಲಿದೆ. ಇದೊಂದು ‘ಹೈಬ್ರಿಡ್‌ ಸಲೂಷನ್‌’ ಪ್ರಯೋಗವಾಗಿದೆ ಎಂದು ಸ್ಪೀಕರ್‌ ಲಿಂಡ್ಸೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next