Advertisement

ಸೋಂಕು ಮೂಲ ಪತ್ತೆಗೆ ವೈರಾಲಜಿ ತಜ್ಞರ ನೇಮಕ

05:21 PM Apr 10, 2020 | Team Udayavani |

ಮಂಡ್ಯ: ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡಿರುವ ಮೂಲವನ್ನು ಪತ್ತೆ ಹಚ್ಚಲು ವಿಶ್ವ ಆರೋಗ್ಯ ಸಂಸ್ಥೆ ನಿಯಮಾವಳಿ ಪ್ರಕಾರ ವೈರಾಲಜಿ ತಜ್ಞರೊಬ್ಬರನ್ನು ತನಿಖಾಧಿಕಾರಿಯನ್ನಾಗಿ (ಕನ್ಸಲ್ಟೆಂಟ್‌) ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ.

Advertisement

ಏ.7ರ ಮಂಗಳವಾರದಿಂದ ಕೋವಿಡ್ 19 ಸೋಂಕು ದೃಢಪಟ್ಟ ವರದಿ ಕೈ ಸೇರುತ್ತಿದ್ದಂತೆ ಸೋಂಕು ಯಾರಿಂದ ಯಾರಿಗೆ ಹರಡಿದೆ ಎಂಬುದರ ಮೂಲ ಪತ್ತೆಗೆ ಜಿಲ್ಲಾಡಳಿತ ಮುಂದಾಗಿದೆ. ಸೋಂಕಿತರ ಟ್ರಾವೆಲ್‌ ಹಿಸ್ಟರಿಯನ್ನು ಅವಲೋಕನ ಮಾಡಿರುವ ಆರೋಗ್ಯ ಅಧಿಕಾರಿಗಳಿಗೆ ಸಾಕಷ್ಟು ಗೊಂದಲಗಳು ಕಾಡುತ್ತಿದ್ದು, ನಿಖರ ಮಾಹಿತಿ ಸಿಗದೆ ತಲೆ ನೋವು ತಂದಿದೆ. ದೆಹಲಿಯ ತಬ್ಲೀಘಿ  ಸಭೆಯಲ್ಲಿ ಭಾಗವಹಿಸಿದ್ದ 10 ಧರ್ಮಗುರುಗಳು ಹಾಗೂ ಮಳವಳ್ಳಿಯಿಂದ ತೆರಳಿದ್ದ 7 ಮಂದಿ ಪೈಕಿ 8 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಈ ಸೋಂಕು ಮೊದಲಿಗೆ ಕಂಡು ಬಂದಿದ್ದು ಯಾರಲ್ಲಿ, ಅವರಿಗೆ ಹೇಗೆ ಬಂದಿತು ಎಂಬುದು ಇದುವರೆಗೂ ತಿಳಿದುಬಂದಿಲ್ಲ. ವೈರಸ್‌ ಹರಡಿದ ಮೂಲ ಪತ್ತೆಗೆ ಆರೋಗ್ಯ ಇಲಾಖೆ ವಿಶ್ವ ಆರೋಗ್ಯ ಸಂಸ್ಥೆ ನಿಯಮಾವಳಿ ಅನುಸಾರ ವೈರಾಲಜಿ ತಜ್ಞರೊಬ್ಬರನ್ನು ತನಿಖಾಧಿಕಾರಿಯನ್ನಾಗಿ (ಕನ್ಸಟೆಂಟ್‌) ನಿಯೋಜಿಸಲಾಗಿದ್ದು, ಈ ಅಧಿಕಾರಿ ಸೋಂಕು ಹರಡಿದ್ದು ಎಲ್ಲಿಂದ, ಅದಕ್ಕೆ ಕಾರಣರು ಯಾರು, ಸೋಂಕಿತರು ಯಾರ್ಯಾರನ್ನು ಸಂಪರ್ಕಿಸಿದ್ದಾರೆ ಎಂಬುದರ ಕುರಿತಂತೆ ಮಾಹಿತಿ ಕಲೆ ಹಾಕುವಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ.

ಸೋಂಕಿನ ಮೂಲ ಪತ್ತೆಯಾದಲ್ಲಿ ಹರಡುವಿಕೆಯನ್ನು ಸುಲಭವಾಗಿ ತಪ್ಪಿಸಬಹುದು. ಈ ಹಿನ್ನೆಲೆಯಲ್ಲಿ ವಿವಿಧ ಆಯಾಮಗಳಲ್ಲಿ ಅಧಿಕಾರಿಗಳು ಮೂಲ ಪತ್ತೆಗೆ ಕಾರ್ಯೋನ್ಮುಖರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next