Advertisement

ಸಂಗಾತಿಯ ವರ್ಜಿನಿಟಿ ಮುಖ್ಯ ; ಮಿಲನ ಸಂದರ್ಭದಲ್ಲಿ ಫೊಟೋ, ವಿಡಿಯೋ ಚಿತ್ರೀಕರಣ ‘ನೋ’!

09:54 AM Nov 04, 2019 | Hari Prasad |

ಗಂಡು ಹೆಣ್ಣಿನ ಮಿಲನ ಕ್ರಿಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಶ್ಚಾತ್ಯ ರಾಷ್ಟ್ರಗಳ ಜನರ ಮನಸ್ಥಿತಿಗೆ ಅಜಗಜಾಂತರ ವ್ಯತ್ಯಾಸವಿದೆ. ಭಾರತದಂತಹ ಸಾಂಪ್ರದಾಯಿಕ ದೇಶದಲ್ಲಿ ಮಿಲನ ಕ್ರಿಯೆ ಸಂಬಂಧಿತ ಮಾತನ್ನು ಮುಕ್ತವಾಗಿ ಆಡಲು ಹಿಂಜರಿಯುವ ಜನರೂ ಈಗಲೂ ಕಾಣಸಿಗುತ್ತಾರೆ.

Advertisement

ಆದರೆ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವ ಮತ್ತು ಬದಲಾಗಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಸೆಕ್ಸ್ ಗೆ ಸಂಬಂಧಿಸಿದಂತೆ ಹಿಂದಿನ ಭಾರತದಲ್ಲಿದ್ದ ಮಡಿವಂತಿಕೆ ಈಗ ಕಾಣಸಿಗುವುದಿಲ್ಲವಾದರೂ ಕೆಲವೊಂದು ವಿಚಾರಗಳಲ್ಲಿ ಭಾರತೀಯ ಜೋಡಿಗಳು ನಿರ್ಧಿಷ್ಟ ಕಟ್ಟುಪಾಡುಗಳನ್ನು ಪಾಲಿಸುತ್ತಿರುವುದು ಹಲವು ಸಮೀಕ್ಷೆಗಳಿಂದ ಬಯಲಾಗುತ್ತಲೇ ಇದೆ.

ಇದೇ ರೀತಿಯ ಸಮೀಕ್ಷೆಯೊಂದರ ಫಲಿತಾಂಶದ ಪ್ರಕಾರ ಭಾರತದಲ್ಲಿ ಇಂದಿಗೂ ಗಂಡು ಹೆಣ್ಣು ತಮ್ಮ ಸಂಗಾತಿಯ ವರ್ಜಿನಿಟಿಗೆ (ಲೈಂಗಿಕ ಪಾವಿತ್ರ್ಯತೆ ಅಥವಾ ಕನ್ಯತ್ವ) ಮಹತ್ವ ನೀಡುತ್ತಿದ್ದಾರೆ. ಮತ್ತು ಮಿಲನಕ್ರಿಯೆ ಸಂದರ್ಭದ ವಿಡಿಯೋ ಶೂಟಿಂಗ್ ಮತ್ತು ನಗ್ನ ಫೊಟೋಗಳನ್ನು ತೆಗೆಸಿಕೊಳ್ಳುವುದಕ್ಕೆ ಹೆಚ್ಚಿನ ಜೋಡಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಸಮೀಕ್ಷೆಗೆ ಒಳಪಟ್ಟಿರುವವರಲ್ಲಿ 60 ಪ್ರತಿಶದಷ್ಟು ಜನರು ತಮ್ಮ ಲೈಂಗಿಕ ಜೀವನ ಸಂತೃಪ್ತಿಯಿಂದ ಕೂಡಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು 30 ಪ್ರತಿಶದಷ್ಟು ಜನ ಮಿಲನಕ್ರಿಯೆ ಸಂದರ್ಭದಲ್ಲಿ ನಿಗ್ರಹ ಮತ್ತು ಇನ್ನಿತರ ಪ್ರಯೋಗಗಳನ್ನು ಮಾಡುತ್ತಿರುತ್ತಾರಂತೆ.

ಇನ್ನು ತಮ್ಮ ಲೈಂಗಿಕ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಈ ಸಮೀಕ್ಷೆಗೊಳಪಟ್ಟ ಹೆಚ್ಚಿನವರು ಆಗಾಗ್ಗೆ ಪೋರ್ನ್ ವಿಡಿಯೋಗಳನ್ನು ನೋಡುವ ವಿಚಾರವನ್ನೂ ಸಹ ಬಹಿರಂಗಗೊಳಿಸಿದ್ದಾರೆ. ಸುಮಾರು 85 ಪ್ರತಿಶತ ಭಾಗೀದಾರರು ತಾವು ಆಗಾಗ್ಗೆ ಪೋರ್ನ್ ವಿಡಿಯೋಗಳನ್ನು ನೋಡುವ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ. ಇನ್ನು ಮಿಲನಕ್ರಿಯೆ ಸಂದರ್ಭದಲ್ಲಿ ಫೊಟೋಗಳನ್ನು ತೆಗೆಯಲು ಅಥವಾ ಇದನ್ನು ವಿಡಿಯೋ ಮಾಡಿಕೊಳ್ಳುವ ವಿಚಾರಕ್ಕೆ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.

Advertisement

ಲೈಂಗಿಕ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಜೋಡಿಗಳಲ್ಲಿ ಸಾಂಪ್ರದಾಯಿಕತೆ ಇನ್ನೂ ಜೀವಂತವಿರುವುದು ಈ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. ಆದರೆ ಸಮೀಕ್ಷೆಗೊಳಪಟ್ಟವರಲ್ಲಿ ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚಿನವರು ಸೆಕ್ಸ್ ಟಾಯ್ ಗಳನ್ನು ಬಳಸಲು ಮುಕ್ತ ಮನಸ್ಸನ್ನು ಹೊಂದಿದ್ದಾರೆ. ಇನ್ನು ಲೈಂಗಿಕತೆಗೆ ಸಂಬಂಧಿಸಿದ ದೇಹ ಸಂರಚನೆಗೆ (ಬಯಾಲಜಿ) ಸಂಬಂಧಿಸಿದ ಅರಿವನ್ನು ಪಡೆದುಕೊಳ್ಳುವ ವಿಚಾರದಲ್ಲಿ 51 ಪ್ರತಿಶತಕ್ಕೂ ಹೆಚ್ಚಿನ ಜನರು ತಮ್ಮ ಒಲವನ್ನು ತೋರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next