Advertisement

ಪ್ರತಿಕ್ಷಾ ಸೇವಾ ಸಂಸ್ಥೆಯ ಸದಸ್ಯತ್ವ ಅಭಿಯಾನಕ್ಕೆ ವೀರೇಶ್ವರ ಶ್ರೀ ಚಾಲನೆ

06:39 PM Sep 21, 2021 | Team Udayavani |

ಯಾದಗಿರಿ: ಸಮಾಜದಲ್ಲಿ ಸೇವಾ ಕಾರ್ಯ ಮಾಡುವಾಗ ಬರುವ ಟೀಕೆ-ಟಿಪ್ಪಣೆಗಳನ್ನು ಸನ್ಮಾನಗಳೆಂದು ಸ್ವೀಕರಿಸಿ ಮುಂದೆ ನಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ದಾಸಬಾಳ ಮಠದ ವೀರೇಶ್ವರ ಸ್ವಾಮಿಗಳು ಹೇಳಿದರು.

Advertisement

ನಗರದ ದಾಸಬಾಳೇಶ್ವರ ಮಠದಲ್ಲಿ ಪ್ರತಿಕ್ಷಾ ಸೇವಾ ಸಂಸ್ಥೆಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅನೇಕ ಯುವಕರ ಬಳಗದೊಂದಿಗೆ ಸಮಾಜದಲ್ಲಿ ಶಿಕ್ಷಣ, ಸಾಮಾಜಿಕ, ರಾಜಕೀಯ ಸಂಸ್ಕೃತಿಕ ಚಟುವಟಿಕೆಗಳಲ್ಲಿ ಎಲ್ಲರಿಗೂ ಸಮಬಾಳು ಎಲ್ಲರಿಗೂ ಸಮಪಾಲು ಸಿಗಲಿ ಎಂಬ ಉದ್ದೇಶದಿಂದ ಸಂಸ್ಥೆ ಪ್ರಾರಂಭಿಸಿರುವುದು ಸಂತೋಷಕರ ಸಂಗತಿ ಎಂದರು.

ಪ್ರತಿಕ್ಷಾ ಸೇವಾ ಸಂಸ್ಥೆಯ ಸಂಸ್ಥಾಪಕ ಸಿದ್ದು ಪಾಟೀಲ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಾ ಬಂದಿದೆ. ಇಂದು ಸೇವಾ, ಸಂಸ್ಕಾರ, ಸಂಸ್ಕೃತಿ ಎಂಬ ಧ್ಯೇಯದೊಂದಿಗೆ ಪ್ರತಿಕ್ಷಾ ಸೇವಾ ಸಂಸ್ಥೆಯನ್ನು ಪ್ರಾರಂಭಿಸಿದ್ದೇವೆ ಎಂದರು.

ಅಖಿ ಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸೋಮಶೇಖರ ಮಣ್ಣೂರ ಉದ್ಘಾಟಿಸಿದರು. ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಸುರೇಶ ಹವಲ್ದಾರ, ವಿಕಾಸ ಸಿಂಧೆ, ಶಿವರಾಜ ಕಲಕೇರಿ, ರಂಗಯ್ಯ ಮುಸ್ತಾಜೀರ, ಶರಣು ಆಶನಾಳ, ಸಿದ್ದರಡ್ಡಿ ತಂಗಡಿಗಿ ಸಂಗು ಕೆಂಭಾವಿ, ಲಕ್ಷ್ಮಣ ಮೂಲಿಮನಿ, , ಶರಣು ಇಡ್ಲೂರ, ಕೆಂಭಾವಿ, ಪವನ ಸಾಹುಕಾರ, ಆರೀಫ್‌ ಬೆಂಡೆಬೆಂಬಳಿ, ಮಲ್ಲು ಕಡೆಚೂರ, ಶಿವು ಪಾಟೀಲ, ಶರಣಗೌಡ ಗಡ್ಡೆಸೂಗೂರ, ಸಂತೋಷ ಹಾಲಗೇರಾ, ಸುರೇಶ ಗೌಡ ರಾಯಚೂರ, ವಿಶ್ವನಾಥ ಕೋರಿ, ಶರಣು ಪಡಶೆಟ್ಟಿ, ಪ್ರಭು ಪಾಟೀಲ, ರಮೇಶ ಹೂಗಾರ, ವೀರೇಶ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next