Advertisement

ಯೋಧರು ತಾಯಿಗಿಂತಲೂ ಮಿಗಿಲು; ಸೆಹವಾಗ್‌ ಟ್ವೀಟ್‌ನಲ್ಲೇನಿದೆ ನೋಡಿ

01:12 PM Jun 30, 2017 | Team Udayavani |

 ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಸಾಮಾಜಿಕ ತಾಣದಲ್ಲಿ ಸಕ್ರಿಯವಾಗಿ ಸದಾ ದೇಶಪ್ರೇಮವನ್ನು ಬಿಂಬಿಸುವ ಸಂದೇಶಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಭಾರತೀಯ ಸೈನಿಕರ ಕುರಿತಾಗಿ ಕೀಳು ಮಟ್ಟದ ಹೇಳಿಕೆಗಳನ್ನು ಕೇಳಿ ಸಹಿಸಲು ಸಿದ್ದರಿರದ ಅವರು ಟ್ವೀಟ್‌ ಒಂದನ್ನು ಮಾಡಿದ್ದು ಅದೀಗ ವೈರಲ್‌ ಆಗಿದೆ. 

Advertisement

ಟ್ವೀಟರ್‌ನಲ್ಲಿ 10 ಮಿಲಿಯನ್‌ ಅಭಿಮಾನಿಗಳನ್ನು ಹೊಂದಿರುವ ಸೆಹವಾಗ್‌ ತಮ್ಮ ಅಭಿಮಾನಿಗಳಿಗೆ ಸೈನಿಕರ ತ್ಯಾಗವನ್ನು ಅರಿವು ಮಾಡಿ ಕೊಟ್ಟಿದ್ದು, ನಿಮಗೆ ಎಲ್ಲಿಯೆ ಆಗಲಿ ಸೈನಿಕರು ಸಿಗಲಿ ಅವರಿಗೊಂದು ಸೆಲ್ಯೂಟ್‌ ನೀಡಿ ಎಂದಿದ್ದಾರೆ.

ಭಾವನಾತ್ಮಕ ಟ್ವೀಟ್‌ನಲ್ಲಿ ‘ನಮ್ಮ ಸೈನಿಕರು ತಾಯಿಗಿಂತಲೂ ಮಿಗಿಲು, ಯಾವುದೇ ಸ್ವಾರ್ಥವಿಲ್ಲದೆ, ಯಾವುದನ್ನೂ ಹಿಂದಕ್ಕೆ ಕೇಳದೆ ಸೇವೆ  ಮಾಡುತ್ತಾರೆ. ವಿಶ್ವದ ಅತ್ಯುತ್ತಮ ಸೇನೆಗೆ ಪ್ರೀತಿ ಮತ್ತು ಗೌರವ ನೀಡಿ’ ಎಂದು ಬರೆದಿದ್ದಾರೆ.

Our soldiers are more than a mother who works selflessly and asks nothing in return. Love & respect to the best army in the world. Jai Hind! pic.twitter.com/6wgX98wBnl

— Virender Sehwag (@virendersehwag) June 30, 2017

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next