Advertisement

ಹೊಸ ಲುಕ್‌ನಲ್ಲಿ “ವಿರಾಟಪರ್ವ’

09:59 AM Jan 17, 2020 | Lakshmi GovindaRaj |

“ವಿರಾಟಪರ್ವ’ ಎಂಬ ಸಿನಿಮಾವೊಂದು ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಚಿತ್ರದ ಎರಡನೇ ಪೋಸ್ಟರ್‌ ಬಿಡುಗಡೆಯಾಗಿದೆ. ಕಳೆದ ಬಾರಿ ಚಿತ್ರದ ಮೊದಲ ಪೋಸ್ಟರ್‌ ಅನ್ನು ಪುನೀತ್‌ ರಾಜ್‌ಕುಮಾರ್‌ ಬಿಡುಗಡೆ ಮಾಡಿದ್ದರು. ಈ ಬಾರಿ ಎರಡನೇ ಪೋಸ್ಟರ್‌ ಅನ್ನು ಮೈಸೂರಿನ ಹುತಾತ್ಮ ಯೋಧ ಹೇಮ ಚಂದ್‌ ಅವರ ಪೋಷಕರಿಂದ ಬಿಡುಗಡೆ ಮಾಡಿಸ ಲಾಗಿದೆ. ಅದಕ್ಕೆ ಕಾರಣ ಆ ಪೋಸ್ಟರ್‌ನಲ್ಲಿರುವ ಪಾತ್ರ ಕೂಡಾ ಸೈನಿಕ.

Advertisement

ಹೌದು, ಚಿತ್ರದಲ್ಲಿನ ಒಂದು ಪಾತ್ರ ಸೈನಿಕ ಹಿನ್ನೆಲೆ ಹೊಂದಿದ್ದು, ಆ ಪೋಸ್ಟರ್‌ ಅನ್ನು ಯಾರಿಂದ ಬಿಡುಗಡೆ ಮಾಡಿಸೋದು ಎಂದು ಚಿತ್ರತಂಡ ಯೋಚಿಸುತ್ತಿದ್ದಾಗ ಅವರಿಗೆ ತೋಚಿದ್ದು ಹುತಾತ್ಮ ಯೋಧ ಹೇಮಚಂದ್‌ ಅವರ ಕುಟುಂಬ. ಮೈಸೂರಿಗೆ ತೆರಳಿ ಆ ಕುಟುಂಬದಿಂದ ಪೋಸ್ಟರ್‌ ರಿಲೀಸ್‌ ಮಾಡಿಸಲಾಗಿದೆ. ಈ ಹಿಂದೆ “ಮುದ್ದು ಮನಸೆ’ ಚಿತ್ರ ನಿರ್ದೇಶಿಸಿದ್ದ ಅನಂತ್‌ ಶೈನ್‌ “ವಿರಾಟಪರ್ವ’ ಚಿತ್ರದ ನಿರ್ದೇಶಕರು.

ಅಂದಹಾಗೆ, ಈ ಚಿತ್ರವನ್ನು ಸುನೀಲ್‌ ರಾಜ್‌ ಅವರು ನಿರ್ಮಾಣ ಮಾಡುತ್ತಿದ್ದಾರೆ. ವಿನೀತ್‌ ರಾಜ್‌ ಮೆನನ್‌ ಅವರು ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಶಿವು ಬಿ.ಕೆ.ಕುಮಾರ್‌ ಹಾಗು ಶಿವಸೀನ ಚಿತ್ರಕ್ಕೆ ಛಾಯಾಗ್ರಾಹಕರು. ವೆಂಕಿ, ಜ್ಞಾನೇಶ್‌, ವಿಜಯ್‌ ಸಂಕಲನವಿದೆ. ಮೋಹನ್‌ ಅವರ ನೃತ್ಯ ನಿರ್ದೇಶನವಿದೆ. ಮಾಸ್‌ ಮಾದ ಹಾಗು ವಿಕ್ರಮ್‌ ಅವರ ಆ್ಯಕ್ಷನ್‌ ಚಿತ್ರಕ್ಕಿದೆ.

ಇನ್ನು, ನಾಗೇಂದ್ರ ಪ್ರಸಾದ್‌, ಕವಿರಾಜ್‌, ಯೋಗರಾಜ್‌ಭಟ್‌ ಅವರು ಗೀತೆಗಳನ್ನು ರಚಿಸಿದ್ದಾರೆ. ಸಂದೀಪ್‌ ಮತ್ತು ರಘು ಸಂಭಾಷಣೆ ಬರೆದಿದ್ದಾರೆ. ಹಿನ್ನೆಲೆ ಸಂಗೀತವನ್ನು ರಿತ್ವಿಕ್‌ ಮಾಡುತ್ತಿದ್ದಾರೆ. ಚಿತ್ರ ಫೆಬ್ರಬರಿಯಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಯಶ್‌ ಶೆಟ್ಟಿ, ಅಭಿನಯ ಸೇರಿದಂತೆ ಅನೇಕರು ನಟಿಸಿದ್ದಾರೆ. ಅರು ಗೌಡ ಚಿತ್ರದಲ್ಲಿ ಫೈಟರ್‌ ಶಿವ ಎಂಬ ಪಾತ್ರ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next