Advertisement

ವಿರಾಟ್‌ ಕೊಹ್ಲಿ ದಾಖಲೆ ಮುರಿದ ಬಾಬರ್‌ ಆಜಂ

06:35 AM Nov 06, 2018 | |

ದುಬಾೖ: ರವಿವಾರ ನಡೆದ ನ್ಯೂಜಿಲ್ಯಾಂಡ್‌ ವಿರುದ್ಧದ 3ನೇ ಟಿ20 ಪಂದ್ಯದ ವೇಳೆ ಪಾಕಿಸ್ಥಾನದ ಬಾಬರ್‌ ಆಜಂ ಅತೀ ವೇಗದಲ್ಲಿ ಸಾವಿರ ರನ್‌ ಪೂರೈಸಿದ ದಾಖಲೆ ಸ್ಥಾಪಿಸಿದರು. 

Advertisement

ಈ ವೇಳೆ ವಿರಾಟ್‌ ಕೊಹ್ಲಿ ಅವರ ದಾಖಲೆ ಪತನಗೊಂಡಿತು.ಟಿ20 ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಆಜಂ ಕೇವಲ 26 ಇನ್ನಿಂಗ್ಸ್‌ಗಳಲ್ಲಿ ಸಾವಿರ ರನ್‌ ಪೂರ್ತಿಗೊಳಿಸಿದರು. ವಿರಾಟ್‌ ಕೊಹ್ಲಿ ಇದಕ್ಕಾಗಿ 27 ಇನ್ನಿಂಗ್ಸ್‌ ತೆಗೆದುಕೊಂಡಿದ್ದರು.

“ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದ್ದೇನೆ ಎಂಬುದು ನನಗೆ ತಿಳಿಯಿತು. ಇದು ಖುಷಿಯ ಸಂಗತಿ’ ಎಂದು ಆಜಂ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next