ಮುಂಬೈ: ಲಾರ್ಡ್ಸ್‌ನಲ್ಲಿ ನಡೆದ 2 ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಗಮನಾರ್ಹ ಗೆಲುವು ದಾಖಲಿಸಲು ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಹೋರಾಟದ ಮನೋಭಾವವನ್ನು ಪ್ರದರ್ಶಿಸಿದ ರೀತಿಯನ್ನು ಭಾರತದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಫಾರುಖ್ ಇಂಜಿನಿಯರ್ ಶ್ಲಾಘಿಸಿದರು.
83 ವರ್ಷದ ಮಾಜಿ ಕ್ರಿಕೆಟಿಗ ಫಾರೂಖ್ ಇಂಜಿನಿಯರ್, ಭಾರತ ತಂಡದ ನಾಯಕ ಕೊಹ್ಲಿ ವಿರೋಧಿಗಳೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿಕೊಳ್ಳುವಾಗ ಎಚ್ಚರಿಕೆ ವಹಿಸುವಂತೆ ಒತ್ತಾಯಿಸಿದರು.
” ಆತ ಆಕ್ರಮಣಕಾರಿ ನಾಯಕನಾಗಿದ್ದಾನೆ. ಒಳ್ಳೆಯದು. ಅದಕ್ಕಾಗಿ ನಾನು ವಿರಾಟ್ ಅನ್ನು ಮೆಚ್ಚುತ್ತೇನೆ. ಆದರೆ ಇದು ಮಿತಿಯಲ್ಲಿರಬೇಕು. ಇಲ್ಲದಿದ್ದರೆ ಅಂಪೈರ್ ಅಥವಾ ಮ್ಯಾಚ್ ರೆಫರಿ ಮಧ್ಯಪ್ರವೇಶಿಸಬಹುದು “ಎಂದು ಎಂಜಿನಿಯರ್ ಹೇಳಿದರು.
ಇದನ್ನೂ ಓದಿ; ಈ ಬಾರಿಯ ಐಪಿಎಲ್ ಗೆ ಜೋಸ್ ಬಟ್ಲರ್ ಗೈರು: ರಾಯಲ್ಸ್ ಗೆ ಗ್ಲೆನ್ ಫಿಲಿಪ್ ಸೇರ್ಪಡೆ
“ಅಲ್ಲದೆ, ಎದುರಾಳಿಗಳು ಸ್ಲೆಡ್ಜಿಂಗ್ ಮಾಡುತ್ತಾರೆ, ಇದರಿಂದ ನಿಮ್ಮ ಬ್ಯಾಟ್ಸ್‌ಮನ್ ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ. ಆದರೆ ಬುಮ್ರಾ ಮತ್ತು ಶಮಿ, ಅವರು ತಮ್ಮದೇ ರೀತಿಯಲ್ಲಿ ಉತ್ತರಿಸಿದರು. ಇದರ ಮೂಲಕ ಅವರು ವಿರಾಟ್ ಇನ್ನಿಂಗ್ಸ್ ಡಿಕ್ಲೇರ್ ಮಾಡಲು ಅನುವು ಮಾಡಿಕೊಡುವಲ್ಲಿ ಬಹಳಷ್ಟು ರನ್ ಗಳನ್ನು ನೀಡಿದರು. ಇದು ಮಹತ್ವದ್ದಾಗಿತ್ತು ಎಂದು ಫಾರೂಖ್ ಇಂಜಿನಿಯರ್ ಹೇಳಿದರು.