Advertisement

ಕೊಹ್ಲಿ ಆಡದಿರುವುದಕ್ಕೆ ಸ್ಟಾರ್‌ ನ್ಪೋರ್ಟ್ಸ್ ಅಸಮಾಧಾನ

10:00 AM Sep 18, 2018 | Team Udayavani |

ಹೊಸದಿಲ್ಲಿ: ಏಶ್ಯ ಕಪ್‌ನಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಗೆ ವಿಶ್ರಾಂತಿ ನೀಡಿರುವುದಕ್ಕೆ ಕೂಟದ ನೇರ ಪ್ರಸಾರದ ಹಕ್ಕು ಪಡೆದಿರುವ ಸ್ಟಾರ್‌ ನ್ಪೋರ್ಟ್ಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕೊಹ್ಲಿ ಆಡದಿದ್ದರೆ ಕೂಟದ ಆಕರ್ಷಣೆ ಕಡಿಮೆಯಾಗುತ್ತದೆ ಎನ್ನುವುದು ಟಿವಿ ವಾಹಿನಿಯ ಆತಂಕ. ಇದಕ್ಕೆ ಬಿಸಿಸಿಐ ಖಾರದ ಪ್ರತ್ಯುತ್ತರ ನೀಡಿದೆ. ತಂಡದ ಆಯ್ಕೆಯಲ್ಲಿ ಮೂಗು ತೂರಿಸುವುದಕ್ಕೆ ಹೊರಗಿನವರಿಗೆ ಅವಕಾಶವಿಲ್ಲ ಎಂದು ಕಟುವಾಗಿ ಹೇಳಿದೆ.

Advertisement

ಇಂಗ್ಲೆಂಡ್‌ ಪ್ರವಾಸ ನಡೆಸಿದ ಬಳಿಕ ವಿರಾಟ್‌ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ರೋಹಿತ್‌ ಶರ್ಮಗೆ ನಾಯಕತ್ವ ನೀಡಲಾಗಿದೆ ಎಂದು ಏಶ್ಯ ಕಪ್‌ ಆರಂಭಕ್ಕೂ ಮೊದಲು ಬಿಸಿಸಿಐ ಪ್ರಕಟನೆ ಹೊರಡಿಸಿತ್ತು. ಇದೀಗ ಕೂಟ ಆರಂಭವಾಗಿದೆ. ಬೆನ್ನಲ್ಲೇ ಸಂಘಟಕ ಎಸಿಸಿಗೆ ಸ್ಟಾರ್‌ ನ್ಪೋರ್ಟ್ಸ್ ದೂರು ನೀಡಿದ್ದು, ಕೊಹ್ಲಿಗೆ ವಿಶ್ರಾಂತಿ ನೀಡಿದ್ದರಿಂದ ಟಿಆರ್‌ಪಿಗೆ ಹೊಡೆತ ಬಿದ್ದಿದೆ ಎಂದು ಹೇಳಿತ್ತು.
ಇದನ್ನು ಎಸಿಸಿ, ಬಿಸಿಸಿಐ ಗಮನಕ್ಕೆ ತಂದಿತ್ತು. ಇದಕ್ಕೆ ಬಿಸಿಸಿಐ ಸಿಇಒ ರಾಹುಲ್‌ ಜೊಹ್ರಿ ಖಡಕ್‌ ಉತ್ತರ ನೀಡಿದ್ದಾರೆ. ಬಿಸಿಸಿಐಗೆ ಅತ್ಯುತ್ತಮ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಅಧಿಕಾರವಿದೆ. ಇದರಲ್ಲಿ ಹೊರಗಿನವರಿಗೆ ಮೂಗು ತೂರಿಸಲು ಅಥವಾ ಪ್ರಶ್ನಿಸಲು ಯಾವುದೇ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next