Advertisement

ಅಭಿಮಾನಿಗೆ ಪಂದ್ಯದ ಟಿಕೆಟ್‌ ಕೊಡಿಸಿದ ವಿರಾಟ್‌ ಕೊಹ್ಲಿ

12:39 AM Jul 05, 2019 | Sriram |

ಲಂಡನ್‌: ಭಾರತ-ಬಾಂಗ್ಲಾ ಪಂದ್ಯದ ವೇಳೆ ತಂಡವನ್ನು ಹುರಿದುಂಬಿಸಿ ರಾತ್ರಿ ಬೆಳಗಾಗುವುದರೊಳಗೆ ಸೋಶಿಯಲ್‌ ಮೀಡಿಯಾದಲ್ಲಿ ಪ್ರಸಿದ್ಧರಾದ 87ರ ಹರೆಯದ ಚಾರುಲತಾ ಪಟೇಲ್‌ ಅವರಿಗೆ ಮುಂದಿನ ಪಂದ್ಯಗಳ ಟಿಕೆಟ್‌ ವ್ಯವಸ್ಥೆ ಮಾಡಿಕೊಡುವ ಮೂಲಕ ನಾಯಕ ವಿರಾಟ್‌ ಕೊಹ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

Advertisement

ಮಂಗಳವಾರದ ಪಂದ್ಯದಲ್ಲಿ ವಾದ್ಯ ಊದುತ್ತಾ ಕೆಮರಾ ಕಣ್ಣುಗಳಿಗೆ ಬಿದ್ದಿದ್ದ ಚಾರುಲತಾ ಪಟೇಲ್‌ ಅವರನ್ನು ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ ಮತ್ತಿತರು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು.

ಈ ಸಂದರ್ಭದಲ್ಲಿ ಕೊಹ್ಲಿ ಮುಂದಿನ ಪಂದ್ಯಕ್ಕೂ ಬನ್ನಿ ಎಂದು ಆಹ್ವಾನಿಸಿದಾಗ “ನನ್ನ ಬಳಿ ಟಿಕೆಟ್‌ ಇಲ್ಲ. ಹೀಗಾಗಿ ಬರುವುದು ಅಸಾಧ್ಯ’ ಎಂದಿದ್ದರು. ಆಗ ಕೊಹ್ಲಿ “ಟಿಕೆಟ್‌ ಚಿಂತೆ ಬೇಡ, ನಾನು ವ್ಯವಸ್ಥೆ ಮಾಡಿಕೊಡುತ್ತೇನೆ’ ಎಂದು ಭರವಸೆಯಿತ್ತಿದ್ದರು. ಫೈನಲ್‌ ಒಳಗೊಂಡಂತೆ ಮುಂದಿನ 3 ಪಂದ್ಯಗಳಿಗೆ ಕೊಹ್ಲಿ ಟಿಕೆಟ್‌ ಕೊಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next