Advertisement

ಕೊಹ್ಲಿ ಮೇಣದ ಪ್ರತಿಮೆ ಅನಾವರಣ

06:45 AM Jun 07, 2018 | Team Udayavani |

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ಮೇಣದ ಪ್ರತಿಮೆಯನ್ನು ಹೊಸದಿಲ್ಲಿಯಲ್ಲಿರುವ “ಮೇಡಂ ತುಸ್ಸಾಡ್ಸ್‌’ ಮ್ಯೂಸಿಯಂನಲ್ಲಿ ಬುಧವಾರ ಅನಾವರಣಗೊಳಿಸಲಾಯಿತು. ಇದರೊಂದಿಗೆ ಕೊಹ್ಲಿ ಖ್ಯಾತ ಫ‌ುಟ್ಬಾಲಿಗ ಲಿಯೋನೆಲ್‌ ಮೆಸ್ಸಿ, ಕ್ರಿಕೆಟ್‌ ದಿಗ್ಗಜರಾದ ಸಚಿನ್‌ ತೆಂಡುಲ್ಕರ್‌, ಕಪಿಲ್‌ ದೇವ್‌, ಖ್ಯಾತ ಆ್ಯತ್ಲೀಟ್‌ ಉಸೇನ್‌ ಬೋಲ್ಟ್ ಸಾಲಿಗೆ ಸೇರಿಕೊಂಡಿದ್ದಾರೆ. ಈ ಎಲ್ಲ ಕ್ರೀಡಾ ಸಾಧಕರ ಪ್ರತಿಮೆಯನ್ನು ಸಂಪೂರ್ಣ ಮೇಣದಿಂದ ಇಲ್ಲಿ ರಚಿಸಲಾಗಿದೆ.


“ಮೇಡಂ ತುಸ್ಸಾಡ್ಸ್‌’ ವಿಶ್ವದಾದ್ಯಂತ ಸಂಸ್ಥೆಯನ್ನು ಹೊಂದಿದೆ. ಸಾಧಕರನ್ನು ಗುರುತಿಸುವುದು ಸಂಸ್ಥೆಯ ಕೆಲಸವಾಗಿದೆ. ಇದೇ ವೇಳೆ ತನ್ನನ್ನು ಆಯ್ಕೆ ಮಾಡಿದ ಸಂಸ್ಥೆಗೆ ವಿರಾಟ್‌ ಕೊಹ್ಲಿ ಧನ್ಯವಾದ ಸಲ್ಲಿಸಿದ್ದಾರೆ. ಮಂಗಳವಾರವಷ್ಟೇ ಕೊಹ್ಲಿ “ಜೂ. 6ರಂದು ದಿಲ್ಲಿಗೆ ಬನ್ನಿ ಅಭಿಮಾನಿಗಳೇ. ನನ್ನ ಮೇಣದ ಪ್ರತಿಮೆ ಜತೆ ಒಂದು ಸೆಲ್ಫಿ ತೆಗೆದುಕೊಳ್ಳಿ’ ಎಂದು ಪ್ರಕಟಿಸಿದ್ದರು. ಇದಕ್ಕೆ ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next