Advertisement

ಗುರುಗ್ರಾಮ್‌ನಲ್ಲೇ ವಿರಾಟ್‌ ಕೊಹ್ಲಿ ಮತ

09:03 AM Apr 30, 2019 | keerthan |

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮೇ 12ರಂದು ಗುರುಗ್ರಾಮದಲ್ಲಿ ಮತ ಚಲಾಯಿಸಲಿದ್ದಾರೆ. ಇದನ್ನು ಸ್ವತಃ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

Advertisement

ಆರಂಭದಲ್ಲಿ ಮುಂಬಯಿಯಲ್ಲೇ ಕೊಹ್ಲಿ ಮತದಾನ ಮಾಡಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಪತ್ನಿ ಅನುಷ್ಕಾ ಶರ್ಮ ಮನೆ ಮುಂಬಯಿಯಲ್ಲಿರುವುದೇ ಇದಕ್ಕೆ ಕಾರಣ. ಆದರೆ ಮತದಾನಕ್ಕೆ ಸ್ಥಳ ಬದಲಾವಣೆಗೆ ಕೊಹ್ಲಿ ಸಲ್ಲಿಸಿದ ಅರ್ಜಿ ತಡವಾಗಿ ಚುನಾವಣಾಧಿಕಾರಿಗಳ ಕೈ ಸೇರಿದೆ. ಹೀಗಾಗಿ ಕಾನೂನು ಪ್ರಕಾರ ಏನೂ ಮಾಡಲು ಸಾಧ್ಯವಾಗದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next