Advertisement

ಅಭಿಮಾನಿಗೆ ಅನ್ಯದೇಶಕ್ಕೆ ಹೋಗಿ ಎಂದು ಬೈದ ಕೊಹ್ಲಿ!

06:40 AM Nov 08, 2018 | |

ನವದೆಹಲಿ: ಸದ್ಯ ವಿಶ್ರಾಂತಿಯಲ್ಲಿರುವ ಭಾರತ ಕ್ರಿಕೆಟ್‌ ತಂಡದ ವಿರಾಟ್‌ ಕೊಹ್ಲಿ ಹೊಸತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 

Advertisement

ಸಮಕಾಲೀನ ಕ್ರಿಕೆಟ್‌ನ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್‌ ಎಂದು ಹೊಗಳಿಸಿಕೊಂಡಿರುವ ವಿರಾಟ್‌ ಮುಂದಿನ ಆಸ್ಟ್ರೇಲಿಯ ಪ್ರವಾಸಕ್ಕೆ ಸಜ್ಜಾಗುತ್ತಿದ್ದಾರೆ. ಇದರ ನಡುವೆ ಸಾಮಾಜಿಕ ತಾಣದಲ್ಲಿ ಅಭಿಮಾನಿಯೊಬ್ಬರಿಗೆ ಉತ್ತರ ಕೊಡುವ ಭರದಲ್ಲಿ, ದೇಶಬಿಟ್ಟು ಹೋಗಿ ಎನ್ನುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.

ಭಾರತೀಯ ಕ್ರಿಕೆಟ್‌ ಅಭಿಮಾನಿಯೊಬ್ಬರು, ಕೊಹ್ಲಿಯನ್ನು ಟೀಕಿಸಿದ್ದರು. ಕೊಹ್ಲಿ ಅಂತಹ ಆಟಗಾರನೇನಲ್ಲ. ಅವರನ್ನು ಅಗತ್ಯಕ್ಕಿಂತ ಹೆಚ್ಚಾಗಿ ಹೊಗಳಲಾಗಿದೆ. ನನಗೆ ಈ ಭಾರತೀಯರಿಗಿಂತ ಆಸ್ಟ್ರೇಲಿಯ, ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳೇ ಇಷ್ಟ ಎಂದಿದ್ದರು. ಇತ್ತೀಚೆಗೆ ತಮ್ಮದೇ ಆ್ಯಪ್‌ ಬಿಡುಗಡೆ ಮಾಡಿರುವ ಕೊಹ್ಲಿ, ಅದರಲ್ಲಿ ಪ್ರಕಟಿಸಿದ ವಿಡಿಯೊದಲ್ಲಿ ಈ ಅಭಿಮಾನಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. 

“ನೀವು ಭಾರತದಲ್ಲಿ ಇರಬೇಕೆಂದು ನನಗನಿಸುವುದಿಲ್ಲ. ನೀವು ಭಾರತೀಯರಾಗಿದ್ದುಕೊಂಡು ಇನ್ನೊಂದು ದೇಶವನ್ನು ಇಷ್ಟಪಡುತ್ತೀರೆಂದರೆ ಭಾರತದ ಬದಲು ಬೇರೆ ದೇಶಗಳಿಗೆ ಹೋಗುವುದು ಒಳ್ಳೆಯದು’ ಎಂದು ಕಟುವಾಗಿ ನುಡಿದಿದ್ದಾರೆ. ಇದು ಟೀಕೆ, ಪ್ರತಿಟೀಕೆಗಳಿಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next