Advertisement

ಟೆಸ್ಟ್‌ ಜಯ: ಗಂಗೂಲಿ ದಾಖಲೆ ಮುರಿಯುವತ್ತ ವಿರಾಟ್‌ ಕೊಹ್ಲಿ

06:30 AM Nov 14, 2017 | Team Udayavani |

ಕೋಲ್ಕತಾ: ಮೊನ್ನೆ ಮೊನ್ನೆಯಷ್ಟೇ ಶ್ರೀಲಂಕಾವನ್ನು ಅವರದೇ ನೆಲದಲ್ಲಿ 9-0 ಅಂತರದಿಂದ ವೈಟ್‌ವಾಶ್‌ ಮಾಡಿದ ಭಾರತವೀಗ ತವರು ಅಂಗಳದಲ್ಲಿ ಮತ್ತೆ ಲಂಕೆಯ ಮೇಲೆ ಸವಾರಿ ಮಾಡಲು ಸ್ಕೆಚ್‌ ಹಾಕಿದೆ. ಗುರುವಾರದಿಂದ ಕೋಲ್ಕತಾದ ಐತಿಹಾಸಿಕ “ಈಡನ್‌ ಗಾರ್ಡನ್ಸ್‌’ನಲ್ಲಿ ಟೆಸ್ಟ್‌ ಸರಣಿ ಆರಂಭವಾಗಲಿದ್ದು, ನಾಯಕತ್ವದ ದಾಖಲೆಯೊಂದನ್ನು ಬರೆಯುವ ಅವಕಾಶವನ್ನು ವಿರಾಟ್‌ ಕೊಹ್ಲಿ ಎದುರು ನೋಡುತ್ತಿದ್ದಾರೆ.

Advertisement

ಭಾರತದ ಟೆಸ್ಟ್‌ ಇತಿಹಾಸದ ಅತ್ಯಂತ ಯಶಸ್ವಿ ನಾಯಕನೆಂಬ ಹೆಗ್ಗಳಿಕೆ ಸಲ್ಲುವುದು ಮಹೇಂದ್ರ ಸಿಂಗ್‌ ಧೋನಿ ಅವರಿಗೆ. ಅತೀ ಹೆಚ್ಚು 60 ಟೆಸ್ಟ್‌ಗಳಲ್ಲಿ ಭಾರತವನ್ನು ಮುನ್ನಡೆಸಿದ ಅವರು 27 ಜಯದೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ದ್ವಿತೀಯ ಸ್ಥಾನದಲ್ಲಿರುವವರು ಸೌರವ್‌ ಗಂಗೂಲಿ. 49 ಟೆಸ್ಟ್‌ಗಳಲ್ಲಿ ಅವರು ಭಾರತವನ್ನು ಮುನ್ನಡೆಸಿದ್ದು, 21ರಲ್ಲಿ ಜಯ ಸಾಧಿಸಿದ್ದಾರೆ. 3ನೇ ಸ್ಥಾನದಲ್ಲಿ ವಿರಾಟ್‌ ಕೊಹ್ಲಿ ಇದ್ದಾರೆ. 29 ಟೆಸ್ಟ್‌ಗಳಲ್ಲಿ 19 ಜಯ ಸಾಧಿಸಿದ ಹೆಗ್ಗಳಿಕೆ ಕೊಹ್ಲಿ ಅವರದು. 

ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಭಾರತ ಕ್ಲೀನ್‌ಸಿÌàಪ್‌ ಆಗಿ ವಶಪಡಿಸಿಕೊಂಡರೆ ಆಗ ವಿರಾಟ್‌ ಕೊಹ್ಲಿ ದ್ವಿತೀಯ ಸ್ಥಾನಕ್ಕೆ ಏರಲಿದ್ದಾರೆ; ಗಂಗೂಲಿ ಅವರ ನಾಯಕತ್ವದ ಸಾಧನೆಯನ್ನು ಮೀರಿ ನಿಲ್ಲಲಿದ್ದಾರೆ. 2 ಟೆಸ್ಟ್‌ ಗೆದ್ದರೆ ಗಂಗೂಲಿ ಸಾಧನೆಯನ್ನು ಸರಿದೂಗಿಸಲಿದ್ದಾರೆ.2014-15ರ ಆಸ್ಟ್ರೇಲಿಯ ಪ್ರವಾಸದ ನಡುವಲ್ಲೇ ಭಾರತವನ್ನು ಮೊದಲ ಸಲ ಟೆಸ್ಟ್‌ನಲ್ಲಿ ಮುನ್ನಡೆಸಲಾರಂಭಿಸಿದ ವಿರಾಟ್‌ ಕೊಹ್ಲಿ ಶೇ. 65.51ರಷ್ಟು ಗೆಲುವಿನ ದಾಖಲೆ ಹೊಂದಿದ್ದಾರೆ.

ಭಾರತದ ಯಶಸ್ವಿ ನಾಯಕರು
ನಾಯಕ    ಟೆಸ್ಟ್‌    ಗೆಲುವು    ಸೋಲು

ಎಂ.ಎಸ್‌.ಧೋನಿ    60    27    18
ಸೌರವ್‌ ಗಂಗೂಲಿ    49    21    13
ವಿರಾಟ್‌ ಕೊಹ್ಲಿ    29    19    3
ಎಂ.ಅಜರುದ್ದೀನ್‌    47    14    14
ಸುನೀಲ್‌ ಗಾವಸ್ಕರ್‌    47    9    8
ಎಂ.ಎ.ಕೆ. ಪಟೌಡಿ    40    9    19
ರಾಹುಲ್‌ ದ್ರಾವಿಡ್‌    25    8    6

Advertisement

Udayavani is now on Telegram. Click here to join our channel and stay updated with the latest news.

Next