Advertisement
ಊಟದ ವಿರಾಮದ ಬಳಿಕವೂ ಶ್ರೀಲಂಕಾ ಆಟಗಾರರು ವಾಯುಮಾಲಿನ್ಯದ ಕಾರಣಕ್ಕಾಗಿ 26 ನಿಮಿಷ ಪಂದ್ಯವನ್ನು ಸ್ಥಗಿತಗೊಳಿಸಿದ್ದರಿಂದ ಭಾರತವು ಕೊನೆಗೆ 7 ವಿಕೆಟಿಗೆ 536 ಇದ್ದಲ್ಲಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆದರೆ ಭಾರತೀಯರು ಫೀಲ್ಡಿಂಗ್‌ಗೆ ಬಂದಾಗ ಯಾರು ಕೂಡ ವಾಯುಮಾಲಿನ್ಯದ ಬಗ್ಗೆ ದೂರು ನೀಡಿಲ್ಲ.
156 ರನ್ನಿನಿಂದ ದಿನದಾಟ ಆರಂಭಿಸಿದ ಕೊಹ್ಲಿ ಅವರು ತನ್ನ ಆರನೇ ದ್ವಿಶತಕ ಬಾರಿಸಿ ಸಂಭ್ರಮಿಸಿದರು. ಆರು ದ್ವಿಶತಕ ಬಾರಿಸಿದ ಮೊದಲ ನಾಯಕರೆಂಬ ಗೌರವಕ್ಕೆ ಪಾತ್ರರಾದ ಅವರು ವೆಸ್ಟ್‌ಇಂಡೀಸ್‌ನ ಬ್ರ್ಯಾನ್ ಲಾರಾ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಲಾರಾ 5 ದ್ವಿಶತಕ ಹೊಡೆದಿದ್ದರು.
Related Articles
Advertisement
ಒಟ್ಟಾರೆ 287 ಎಸೆತ ಎದುರಿಸಿದ್ದ ಅವರು 25 ಬೌಂಡರಿ ನೆರವಿನಿಂದ 243 ರನ್ ಹೊಡೆದರು. ಶ್ರೀಲಂಕಾ ಆಟಗಾರರು ವಾಯುಮಾಲಿನ್ಯದ ದೂರು ಹೇಳಿ ಆಗಾಗ್ಗೆ ಪಂದ್ಯ ಸ್ಥಗಿತಗೊಳಿಸಿದ್ದರಿಂದ ಗಮನ ಕೇಂದ್ರಿಕರಿಸಲು ವಿಫಲರಾದ ಕೊಹ್ಲಿ ಅಂತಿಮವಾಗಿ ಸಂದಕನ್ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು.
ಕೊಹ್ಲಿ ಅವರು ರೋಹಿತ್ ಶರ್ಮ ಜತೆ ಐದನೇ ವಿಕೆಟಿಗೆ 135 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ರೋಹಿತ್ 65 ರನ್ ಗಳಿಸಿ ಔಟಾದರು.
ಶ್ರೀಲಂಕಾ ಆಟಗಾರರು ಮತ್ತು ವ್ಯವಸ್ಥಾಪಕ ಅಸಾಂಕ ಗುರುಸಿನ್ಹ ಅವರು ವಾಯುಮಾಲಿನ್ಯದಿಂದ ಫೀಲ್ಡಿಂಗ್ ಮಾಡಲು ಸಾಧ್ಯವಿಲ್ಲವೆಂದು ಅಂಪಾಯರ್ ಅವರಿಗೆ ತಿಳಿಸಿದ್ದರಿಂದ ಅಂತಿಮವಾಗಿ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.
ಲಂಕೆಗೆ ಆರಂಭಿಕ ಆಘಾತಮೊಹಮ್ಮದ್ ಶಮಿ ಎಸೆದ ಮೊದಲ ಓವರಿನ ಮೊದಲ ಎಸೆತದಲ್ಲಿ ಕರುಣರತ್ನೆ ಔಟಾದ ಕಾರಣ ಶ್ರೀಲಂಕಾ ಆಘಾತಕ್ಕೆ ಒಳಗಾಯಿತು. ಧನಂಜಯ ಡಿಸಿಲ್ವ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ವಿಫಲರಾದರು. ದಿಲುÅವಾನ್ ಪೆರೆರ ಮತ್ತು ಮ್ಯಾಥ್ಯೂಸ್ ಮೂರನೇ ವಿಕೆಟಿಗೆ 61 ರನ್ ಪೇರಿಸಿ ತಂಡವನ್ನು ಆರಂಭಿಕ ಕುಸಿತದಿಂದ ಪಾರು ಮಾಡಲು ಪ್ರಯತ್ನಿಸಿದರು. ಈ ನಡುವೆ ಮ್ಯಾಥ್ಯೂಸ್ ಅವರು ಕೊಹ್ಲಿ ಕೈಯಲ್ಲಿ ಜೀವದಾನವೊಂದನ್ನು ಪಡೆದರು. ಉತ್ತಮವಾಗಿ ಆಡುತ್ತಿದ್ದ ಪೆರೆರ ಅವರನ್ನು ಜಡೇಜ ಎಲ್‌ಬಿ ಮೂಲಕ ಕೆಡಹಿದರು. ಸ್ಕೋರುಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್
(ಮೊದಲ ದಿನ 4 ವಿಕೆಟಿಗೆ 371)
ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯು ಸಂದಕನ್ 243
ರೋಹಿತ್ ಶರ್ಮ ಸಿ ಡಿಕ್ವೆಲ್ಲ ಬಿ ಸಂದಕನ್ 65
ಆರ್. ಅಶ್ವಿನ್ ಸಿ ಪೆರೆರ ಬಿ ಗಾಮಗೆ 4
ವೃದ್ಧಿಮಾನ್ ಸಾಹ ಔಟಾಗದೆ 9
ರವೀಂದ್ರ ಜಡೇಜ ಔಟಾಗದೆ 5
ಇತರ: 8
ಒಟ್ಟು (7 ವಿಕೆಟಿಗೆ) 536
ವಿಕೆಟ್ ಪತನ: 5-500, 6-519, 7-523
ಬೌಲಿಂಗ್:
ಸುರಂಗ ಲಕ್ಮಲ್ 21.2-2-80-0
ಲಹಿರು ಗಾಮಗೆ 25.3-7-95-2
ದಿಲುÅವಾನ್ ಪೆರೆರ 31.1-0-145-1
ಲಕ್ಷಣ ಸಂದಕನ್ 33.5-1-167-4
ಧನಂಜಯ ಸಿಲ್ವ 16-0-48-0
ಶ್ರೀಲಂಕಾ ಪ್ರಥಮ ಇನ್ನಿಂಗ್ಸ್
ದಿಮುತ್ ಕರುಣರತ್ನೆ ಸಿ ಸಾಹ ಬಿ ಶಮಿ 0
ದಿಲುÅವಾನ್ ಪೆರೆರ ಎಲ್‌ಬಿಡಬ್ಲ್ಯು ಬಿ ಜಡೇಜ 42
ಧನಂಜಯ ಸಿಲ್ವ ಎಲ್‌ಬಿಡಬ್ಲ್ಯು ಬಿ ಶರ್ಮ 1
ಎ. ಮ್ಯಾಥ್ಯೂಸ್ ಬ್ಯಾಟಿಂಗ್ 57
ದಿನೇಶ್ ಚಂಡಿಮಾಲ್ ಬ್ಯಾಟಿಂಗ್ 25
ಇತರ: 6
ಒಟ್ಟು (3 ವಿಕೆಟಿಗೆ) 131
ವಿಕೆಟ್ ಪತನ: 1-0, 2-14, 3-75
ಬೌಲಿಂಗ್:
ಮೊಹಮ್ಮದ್ ಶಮಿ 11-3-30-1
ಇಶಾಂತ್ ಶರ್ಮ 10-4-44-1
ರವೀಂದ್ರ ಜಡೇಜ 14.3-6-24-1
ಆರ್. ಅಶ್ವಿನ್ 9-3-28-0