Advertisement
ಆತಿಥೇಯ ಆಸ್ಟ್ರೇಲಿಯಾ ವಿರುದ್ದ ಶನಿವಾರದಿಂದ ಆರಂಭವಾಗಲಿರುವ ಏಕದಿನ ಸರಣಿಯ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಮಾತನಾಡಿದರು. ನಿವೃತ್ತಿ ನಂತರ ಬಿಗ್ ಬ್ಯಾಶ್ ಸರಣಿಯಲ್ಲಿ ಆಡುವ ಆಲೋಚನೆ ಇದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ವಿರಾಟ್, ‘ ನಿವೃತ್ತಿ ನಂತರ ಮತ್ತೆ ಕ್ರಿಕೆಟ್ ಆಡುವ ಯೋಚನೆ ಇಲ್ಲ. ನನ್ನ ಆಟ ಯಾವತ್ತು ಮುಗಿಯುತ್ತೋ ಆವತ್ತು ನಾನು ವಿದಾಯ ಘೋಷಿಸುತ್ತೇನೆ. ಮತ್ತೆ ಬ್ಯಾಟ್ ಹಿಡಿಯುದಿಲ್ಲ. ನಿವೃತ್ತಿ ನಂತರ ಮೊದಲು ಏನು ಮಾಡಬೇಕು ಎಂದು ಕೂಡಾ ಯೋಚನೆ ಮಾಡಿಲ್ಲ ಎಂದರು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯ ಜನವರಿ 12 ಶನಿವಾರ ಸಿಡ್ನಿಯಲ್ಲಿ ನಡೆಯಲಿದೆ